ಮೋದಿ, ಟ್ರಂಪ್ ಗೆಳೆತನ ಹುಸಿ ಹೋಗಿದೆ, ಆಫ್ ಕೀ ಬಾರ್ ಟ್ರಂಪ್ ಸರ್ಕಾರ ಎಂದವರಿಗೆ ಮುಜುಗರ: ಎಂ.ಬಿ.ಪಾಟೀಲ್

Hubli News: ಹುಬ್ಬಳ್ಳಿ: ಪ್ರಧಾನಮಂತ್ರಿ ನರೇಂದ್ರ ಮೋದಿ ಹಾಗೂ ಟ್ರಂಪ್ ನಡುವೆ ಗೆಳೆತನವಿತ್ತು. ಆದ್ರೆ ಇದೀಗ ಯಾಕೆ ಹೀಗೆ ಆಗ್ತಿದೆಯೋ ಗೊತ್ತಿಲ್ಲಾ. ಕರ್ನಾಟಕ ಮಾತ್ರವಲ್ಲಾ ಇಡೀ ದೇಶದ ಮೇಲೆ ಆಗುತ್ತದೆ ಎಂದು ಸಚಿವ ಎಂ.ಬಿ.ಪಾಟೀಲ್ ಲೇವಡಿ ಮಾಡಿದರು.

ನಗರದಲ್ಲಿಂದು ಮಾಧ್ಯಮದ ಜೊತೆಗೆ ಮಾತನಾಡಿದ ಅವರು, ಆಪ್ ಕೀ ಬಾರ್ ಟ್ರಂಪ್ ಸರ್ಕಾರ ಎಂದು ಘೋಷಣೆ ಕೂಗಿದ್ದವರಿಗೆ ಈಗ ಟ್ರಂಪ್ ಮೋದಿ ಎಲ್ಲಿ ಹುಸಿ ಹೋಯಿತೋ ಗೊತ್ತಿಲ್ಲ ಎಂದರು.

ಬಿಜೆಪಿ ಹೊಂದಾಣಿಕೆಯ ರಾಜಕಾರಣ ಮಾಡಿಕೊಳ್ಳಲು ಹೋಗಿ ನಗೆಪಾಟಲಿಗೆ ಗುರಿಯಾಗಿದೆ. ಟ್ರಂಪ್ ಹಾಡಿ ಹೋಗಳಿದ್ದ ಮೋದಿ ಹಾಗೂ ಬಿಜೆಪಿಗೆ ಮುಜುಗರವುಂಟಾಗಿದೆ ಎಂದು ವ್ಯಂಗ್ಯವಾಡಿದರು.

About The Author