Hubli News: ಹುಬ್ಬಳ್ಳಿ: ಹುಬ್ಬಳ್ಳಿಯಲ್ಲಿ ಮತ್ತೇ ಪುಡಿ ರೌಡಿಗಳು ಬಾಲ ಬಿಚ್ಚಿದ್ದಾರೆ. ಆಟೋದಲ್ಲಿ ಬಂದು ಅಂಗಡಿ ಮುಂದೆ ನಿಂತಿದ್ದ ಹುಡುಗನನ್ನು ಕರೆದು ಹಲ್ಲೆ ಮಾಡಿರುವ ಘಟನೆ, ಹುಬ್ಬಳ್ಳಿ ಕಮರಿಪೇಟ್ದ ಕೌಲ ಪೇಟ್ದಲ್ಲಿ ನಿನ್ನೆ ರಾತ್ರಿ ನಡೆದಿದೆ. ಈ ದೃಶ್ಯ ಸಿಸಿ ಕ್ಯಾಮರಾದಲ್ಲಿ ಸೆರೆಯಾಗಿದೆ.
ಕಯಫ್ ಮುಚಾಲೆ ಎಂಬ ಯುವಕ ಅಂಗಡಿ ಮುಂದೆ ನಿಂತಿದ್ದ, ಯಾರೋ ನಾಲ್ಕು ಜನ ಪುಡಿರೌಡಿಗಳು ಆಟೋದಲ್ಲಿ ಬಂದು ದಾದಾಗಿರಿ ಮಾಡಿದ್ದಾರೆ. ಸುಮ್ಮನೆ ನಿಂತಿದ್ದ ಯುವಕನನ್ನು ಕರೆದು ಹಿಗ್ಗಾಮುಗ್ಗ ಹೊಡೆದಿದ್ದಾರೆ. ಯಾಕೆ ಅಂತೆ ಕೇಳಿದ್ರೆ ನಾವು ಯಾರು ಗೊತ್ತಾ ರೌಡಿಗಳು ಎಂದು ಧಮ್ಕಿ ಕೂಡ ಹಾಕಿದ್ದಾರಂತೆ.
ಇದರಲ್ಲಿ ಗಾಂಜಾ, ಸಾರಾಯಿ ಕುಡಿದ ಬಂದ ಈ ರೌಡಿಗಳು ನಿಂತ ನಿಂತವರ ಮೇಲೆ ಹಲ್ಲೆ ಮಾಡುತ್ತಿದ್ದಾರಂತೆ. ಇದು ಸಿಸಿ ಕ್ಯಾಮರಾದಲ್ಲಿ ಸೆರೆಯಾಗಿದೆ. ಇನ್ನು ಮುಖ್ಯವಾಗಿ ಇದರಲ್ಲಿ ಗಡಿಪಾರು ಆದ ರೌಡಿ ಶಿಟರ್ಸ್ ಇದ್ದರು ಎಂಬ ಮಾಹಿತಿ ತಿಳಿದು ಬಂದಿದೆ.
ಪೊಲೀಸರು ಇಷ್ಟೊಂದು ರೌಡಿ ಪರೇಡ್ ಮಾಡಿ ವಾರ್ನ್ ಮಾಡಿದ್ರೂ ಕೂಡ ಕೆಲ ಪುಡಿ ರೌಡಿಗಳು ರೌಡಿಸಂ ಮಾಡುತ್ತಿದ್ದಾರೆ. ಈ ಘಟನೆ ಕಮರಿಪೇಟ್ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ನಡೆದಿದ್ದು, ಇಂತವರ ಮೇಲೆ ಸೂಕ್ತ ಕ್ರಮ ಆಗಬೇಕೆಂದು ಸಾರ್ವಜನಿಕರ ಒತ್ತಾಯವಾಗಿದೆ.




