ಸಿಎಂ ಯಡಿಯೂರಪ್ಪ ಈಗ ಆರಾಮವಾಗಿದ್ದಾರೆ ಎಂದು ಅವರ ಮಗ ವಿಜಯೇಂದ್ರ ಟ್ವಿಟರ್ ಮೂಲಕ ಸ್ಪಷ್ಟಪಡಿಸಿದ್ದಾರೆ. ಈ ಬಗ್ಗೆ ಟ್ವೀಟ್ ಮಾಡಿದ ಅವರು, ಮುಂಜಾಗರೂಕತೆ ದೃಷ್ಟಿಯಿಂದ ಪೂಜ್ಯ ತಂದೆಯವರು ನಗರದ ಮಣಿಪಾಲ್ ಆಸ್ಪತ್ರೆಗೆ ದಾಖಲಾಗಿದ್ದು, ಅವರಲ್ಲಿ ಯಾವುದೇ ರೋಗಲಕ್ಷಣಗಳಿಲ್ಲ. ಆರೋಗ್ಯಸ್ಥಿತಿ ಎಂದಿನಂತೆ ಸಹಜವಾಗಿದೆ. ತಜ್ಞ ವೈದ್ಯರುಗಳು ನಿರಂತರ ನಿಗಾ ವಹಿಸಿದ್ದಾರೆ. ಅಭಿಮಾನಿಗಳು, ಕಾರ್ಯಕರ್ತರು ಆತಂಕಗೊಳ್ಳಬೇಡಿ, ನೀವಿದ್ದಲ್ಲಿಂದಲೇ ಹಾರೈಸಿ. ನಾನು ಗೃಹ ಕ್ವಾರಂಟೈನ್ ನಲ್ಲಿ ಇರಲಿದ್ದೇನೆ ಎಂದಿದ್ದಾರೆ.

——————————-
ಸಿಎಂ ಯಡಿಯೂರಪ್ಪರಿಗೆ ಕೊರೊನಾ ತಗುಲಿದ್ದು, ಸಿಎಂರನ್ನ ಸಂಪರ್ಕಿಸಿದ್ದಕ್ಕಾಗಿ ರಾಜ್ಯಪಾಲ ವಜುಭಾಯ್ ವಾಲಾ ಕೋವಿಡ್ ಟೆಸ್ಟ್ ಮಾಡಿಸಿಕೊಳ್ಳಲು ಮುಂದಾಗಿದ್ದಾರೆ. ಸಿಎಂ ಅವರು ಜುಲೈ 31ರಂದಪ ರಾಜಭವನದಲ್ಲಿ ರಾಜ್ಯಪಾಲರನ್ನು ಭೇಟಿಯಾಗಿದ್ದು, ಈ ಕಾರಣಕ್ಕೆ ರಾಜ್ಯಪಾಲರು, ಕೋವಿಡ್ ಟೆಸ್ಟ್ ಮಾಡಿಸಿಕೊಂಡಿದ್ದಾರೆ. ವರದಿ ನೆಗೆಟಿವ್ ಎಂದು ಬಂದಿದೆ.
——————-
ಸರ್ಕಾರದ ವಿರುದ್ಧ ಸಿಡಿದೆದ್ದು, ಟ್ವೀಟರ್ ಮೂಲಕ ಪ್ರಶ್ನೆ ಮೇಲೆ ಪ್ರಶ್ನೆ ಕೇಳಿದ್ದ ಸಿದ್ದರಾಮಯ್ಯರಿಗೆ ಸಚಿವ ಡಾ.ಕೆ.ಸುಧಾಕರ್, ಟ್ವೀಟ್ ಮಾಡುವ ಮೂಲಕವೇ ಪ್ರತಿಕ್ರಿಯಿಸಿದ್ದಾರೆ.
‘ಕುಂಭಕರ್ಣನ ರೀತಿ ನಿದ್ದೆ ಮಾಡುವವರನ್ನು ಎಚ್ಚರಿಸಬಹುದು. ಆದರೆ ನಿದ್ದೆ ಮಾಡುವ ರೀತಿ ನಟನೆ ಮಾಡುವ ವ್ಯಕ್ತಿಗಳನ್ನು ಎಚ್ಚರಿಸಲು ಸಾಧ್ಯವಿಲ್ಲ’ ಎಂದು ಸುಧಾಕರ್ ಪ್ರತ್ಯುತ್ತರ ನೀಡಿದ್ದಾರೆ.
ಅಲ್ಲದೇ, ‘ರಾಜ್ಯದಲ್ಲಿ ಬೆಡ್ ಇಲ್ಲ, ಔಷಧ, ಊಟ ಕೊಡ್ತಿಲ್ಲ, ಅಂಬುಲೆನ್ಸ್ ಇಲ್ಲ, ವೆಂಟಿಲೇಟರ್ ಇಲ್ಲ ಎನ್ನುತ್ತಿದ್ದೀರಲ್ಲ. ಭಾರತದಲ್ಲಿ ತಯಾರಾಗುವ ವೆಂಟಿಲೇಟರ್‌ಗಳನ್ನು ವಿದೇಶಗಳಿಗೆ ರಫ್ತು ಮಾಡಲು ನಿನ್ನೆ ಕೇಂದ್ರ ಸರ್ಕಾರ ಹಸಿರು ನಿಶಾನೆ ತೋರಿಸಿದೆ. ಇದೇ ʼಆತ್ಮನಿರ್ಭರ ಭಾರತʼ ಅಜ್ಞಾನವು ಎಲ್ಲ ತೊಂದರೆಗಳನ್ನು ಬೆಳೆಯುವ ಹೊಲ ಮರೆಯಬೇಡಿ’ ಎಂದು ಸುಧಾಕರ್ ಟ್ವೀಟ್ ಮೂಲಕ ಪ್ರತಿಕ್ರಿಯಿಸಿದ್ದಾರೆ.
—————-
ಅನಾರೋಗ್ಯದ ಕಾರಣ ಆಸ್ಪತ್ರೆಗೆ ದಾಖಲಾಗಿದ್ದ ಡೈರೆಕ್ಟರ್ ಆರೂರು ಜಗದೀಶ್ ಡಿಸ್ಚಾರ್ಜ್ ಆಗಿ ಮನೆಯಲ್ಲೇ ವಿಶ್ರಾಂತಿ ಪಡೆಯುತ್ತಿದ್ದಾರೆ. ಈ ಬಗ್ಗೆ ಫೇಸ್‌ಬುಕ್‌ನಲ್ಲಿ ಬರೆದುಕೊಂಡಿರುವ ಜಗದೀಶ್, ನಾನು ಆಸ್ಪತ್ರೆಯಿಂದ ಡಿಸ್ಚಾರ್ಜ್ ಆಗಿದ್ದೇನೆ. ಈಗ ನನ್ನ ಆರೋಗ್ಯ ಸುಧಾರಿಸಿದೆ. ನನಗಾಗಿ ಪ್ರಾರ್ಥಿಸಿದವರಿಗೆಲ್ಲ ಧನ್ಯವಾದ. ನಿಮ್ಮ ಬಗ್ಗೆ ಮತ್ತು ನಿಮ್ಮ ಕುಟುಂಬದ ಬಗ್ಗೆ ಕಾಳಜಿ ಇರಲಿ, ದೇವರು ಎಲ್ಲರಿಗೂ ಒಳ್ಳೆಯದು ಮಾಡಲಿ ಎಂದು ಹೇಳಿದ್ದಾರೆ.
————————
ಇಂದು ದೇಶದೆಲ್ಲೆಡೆ ರಕ್ಷಾಬಂಧನವನ್ನ ಆಚರಿಸಲಾಗುತ್ತಿದ್ದು, ನಟ ನಟಿಯರು ಕೂಡ ತಮ್ಮ ಸಹೋದರರಿಗೆ ರಾಖಿ ಕಟ್ಟಿ ಸಂಭ್ರಮಿಸಿದ್ದಾರೆ. ನಟ ಸೋನುಸೂದ್, ನಟಿ ರಾಧಿಕಾ ಪಂಡಿತ್, ಶ್ರದ್ಧಾ ಕಪೂರ್, ರಾಶಿ ಖನ್ನಾ, ಕಾಜಲ್ ಅಗರ್‌ವಾಲ್ ತಮ್ಮ ಸಹೋದರ ಸಹೋದರಿಯರ ಜೊತೆಗಿನ ಫೋಟೋ ಹಾಕಿದ್ರೆ, ನಟ ಮಹೇಶ್ ಬಾಬು ಮತ್ತು ಅಲ್ಲು ಅರ್ಜುನ್ ತಮ್ಮ ಮಕ್ಕಳು ರಕ್ಷಾಬಂಧನ ಆಚರಿಸಿಕೊಳ್ಳುತ್ತಿರುವ ಫೋಟೋವನ್ನ ಸಾಮಾಜಿಕ ಜಾಲತಾಣದಲ್ಲಿ ಅಪ್ಲೋಡ್ ಮಾಡಿ ಸಂಭ್ರಮಿಸಿದ್ದಾರೆ.
