Hubli News: ಹುಬ್ಬಳ್ಳಿಯಲ್ಲಿ 320 ಕೋಟಿ ರೂಪಾಯಿ ವೆಚ್ಚದಲ್ಲಿ Terminal-2 ಮಾಡಲು ಸಿದ್ಧತೆ

Hubli News: ಹುಬ್ಬಳ್ಳಿ: ದಿನಗಳು ಕಳೆದಂತೆ ವಾಣಿಜ್ಯ ನಗರಿ ಹುಬ್ಬಳ್ಳಿ ಬೆಳೆಯುತ್ತಿದೆ. ರಾಷ್ಟ್ರೀಯ ಮತ್ತು ಅಂತರಾಷ್ಟ್ರೀಯ ವ್ಯಾಪಾರ ವಹಿವಾಟುಗಳು ಆರಂಭವಾಗಿವೆ. ಅದೇ ರೀತಿ ಕೂಡ ಹುಬ್ಬಳ್ಳಿ ವಿಮಾನ ನಿಲ್ದಾಣ ಮುಂದಿನ 10-20 ವರ್ಷದ ಪ್ರಯಾಣಿಕರ ದಟ್ಟಣೆಯನ್ನು ಗಮನದಲ್ಲಿಟ್ಟುಕೊಂಡು ಹೊಸ ಟರ್ಮಿನಲ್ ನಿರ್ಮಾಣ ಮಾಡುತ್ತಿದ್ದಾರೆ.

ಹುಬ್ಬಳ್ಳಿ ವಿಮಾನ ನಿಲ್ದಾಣ ಅಂತರಾಷ್ಟ್ರೀಯ ದರ್ಜೆಯ ವಿಮಾನ ನಿಲ್ದಾಣವಾಗಿ ಮೇಲ್ದರ್ಜೆಗೇರಿಸಲಾಗುತ್ತಿದೆ. ಮುಂದಿನ ಆಲೋಚನೆಗಳನ್ನು ಇಟ್ಟುಕೊಂಡು ನಿರ್ಮಾಣ ಮಾಡುತ್ತಿದ್ದಾರೆ. ಈಗಾಗಲೇ ನಿತ್ಯ 1 ಸಾವಿರದಿಂದ 1,200 ರವರೆಗೆ ಪ್ರಯಾಣಿಕರು ಹುಬ್ಬಳ್ಳಿ ವಿಮಾನ ನಿಲ್ದಾಣದಿಂದ ಮುಂಬೈ, ದೆಹಲಿ, ಬೆಂಗಳೂರು, ಹೈದರಾಬಾದ್‌ಗೆ ಸಂಚರಿಸುತ್ತಿದ್ದಾರೆ. ಭವಿಷ್ಯದಲ್ಲಿ ಹುಬ್ಬಳ್ಳಿಯಿಂದ ದೇಶದ ವಿವಿಧ ಮಹಾನಗರಗಳಿಗೆ ವಿಮಾನಯಾನ ಸೌಲಭ್ಯ ಕಲ್ಪಿಸುವ ಗುರಿ ಹೊಂದಲಾಗಿದೆ. ಇನ್ನು ಈಗಿರುವ ವಿಮಾನ ನಿಲ್ದಾಣ ಚಿಕ್ಕದಿದ್ದು, ಏಕ ಕಾಲಕ್ಕೆ ಎರಡು ವಿಮಾನಗಳು ಬಂದರೂ ಪ್ರಯಾಣಿಕರ ನಿರ್ವಹಣೆ ಕಷ್ಟವಾಗಿದೆ.

ಅದಕ್ಕಾಗಿ 320 ಕೋಟಿ ರೂಪಾಯಿ ವೆಚ್ಚದಲ್ಲಿ ಹೊಸ ಟರ್ಮಿನಲ್ ಬಿಲ್ಡಿಂಗ್ ಕಟ್ಟಡ ಕಾಮಗಾರಿ ಪ್ರಗತಿಯಲ್ಲಿದೆ. ಈಗಾಗಲೇ ಶೇ. 30ರಷ್ಟು ಕಾಮಗಾರಿ ಪೂರ್ಣಗೊಂಡಿವೆ. 2026 ಮಾರ್ಚ್ ವೇಳೆಗೆ ಎಲ್ಲಾ ಕಾಮಗಾರಿಗಳು ಪೂರ್ಣಗೊಳ್ಳುವ ನಿರೀಕ್ಷೆ ಇದೆ. ಹೊಸ ಟರ್ಮಿನಲ್‌ ಬಿಲ್ಡಿಂಗ್‌ನಲ್ಲಿ ಅನೇಕ ವಾಣಿಜ್ಯ ಮಳಿಗೆಗಳೂ ತಲೆ ಎತ್ತಲಿವೆ. ಚಿನ್ನಾಭರಣ, ಸ್ಮೋಕಿಂಗ್ ಜೋನ್, ಸ್ಟಾಕ್ ಬಾರ್, ಟೂರಿಸ್ಂ ಆಫೀಸ್, ಟ್ಯಾಕ್ಸಿ ಕೌಂಟರ್ ಎಕ್ಸಿಕ್ಯುಟಿವ್ ಲಾಂಜ್, ವಿಐಪಿ ಲಾಂಜ್ ಸೇರಿದಂತೆ ಅನೇಕ ಮಳಿಗೆಗಳು ಪ್ರಾರಂಭಗೊಳ್ಳಲಿವೆ.

ವಿಮಾನ ನಿಲ್ದಾಣದ ಒಳಗೆ ಹಾಗೂ ಹೊರಗೆ ಉತ್ತರ ಕರ್ನಾಟಕ ಭಾಗದ ಕಲೆಗೆ ಹೆಚ್ಚು ಒತ್ತು ನೀಡಲಾಗುತ್ತದೆ‌. ಇಲ್ಲಿನ ಕಲೆ, ಸಂಸ್ಕೃತಿ‌ ಬಿಂಬಿಸುವ ಕಲೆ ಅನಾವರಣಗೊಳ್ಳಲಿದೆ. ವಿಮಾನ ನಿಲ್ದಾಣ ದೊಡ್ಡದಾದಂತೆ ವಿಮಾನಗಳ ನಿಲುಗಡೆಗೆ ಹೆಚ್ಚಿನ ಜಾಗಬೇಕಾಗುತ್ತದೆ. ಸದ್ಯ ಮೂರು ಏರ್ ಬಸ್ ಗಳಿಗೆ ಮಾತ್ರ ಪಾರ್ಕಿಂಗ್ ಸ್ಟ್ಯಾಂಡ್ ಇದೆ. ಮುಂದೆ 10 ಏರ್ ಬಸ್ ನಿಲುಗಡೆಗೆ ಅವಕಾಶ ಕಲ್ಪಿಸಲಾಗುತ್ತದೆ. ಇದರ ಜೊತೆಗೆ 4 ಚಿಕ್ಕ ಏರ್ ಕ್ರಾಫ್ಟ್ ನಿಲುಗಡೆ ಮಾಡಬಹುದಾಗಿದೆ. ಪ್ರಯಾಣಿಕರ ಅನುಕೂಲಕ್ಕಾಗಿ ಕಾರ್ ಪಾರ್ಕಿಂಗ್ ಹಾಗೂ ಟ್ಯಾಕ್ಸಿ ಸ್ಟ್ಯಾಂಡ್ ಕೂಡ ಬರಲಿದೆ. ಒಟ್ಟಿನಲ್ಲಿ ನಮ್ಮ ಹುಬ್ಬಳ್ಳಿಯ ಹೊಸ ವಿಮಾನ ನಿಲ್ದಾಣ ಇಡೀ ಉತ್ತರ ಕರ್ನಾಟಕದಲ್ಲೇ ತಲೆ ಎತ್ತಿ ನೋಡುವಂತೆ ರೆಡಿ ಆಗುತ್ತಿದೆ.

About The Author