Thursday, October 16, 2025

Latest Posts

ಪತಿಯ ಪಾದ ಪೂಜೆ, ಸೆಲೆಬ್ರಿಟಿಸ್ ಸಂಭ್ರಮ – ಭೀಮನ ಅಮಾವಾಸ್ಯೆ ವಿಶೇಷ!

- Advertisement -

ಭೀಮನ ಅಮಾವಾಸ್ಯೆ ಅನ್ನೋದು ಕರ್ನಾಟಕ ಹಾಗೂ ದಕ್ಷಿಣ ಭಾರತದ ಹೆಗ್ಗಳಿಕೆಯ ಹಿಂದು ಪವಿತ್ರ ಆಚರಣೆ. ಮಹಿಳೆಯರು ಅದರಲ್ಲೂ ಮದುವೆಯಾದ ಸುಮಂಗಲೆಯರು ಪತಿಯ ಆಯುಷ್ಯ, ಆರೋಗ್ಯ ಮತ್ತು ಐಶ್ವರ್ಯಕ್ಕಾಗಿ ಈ ದಿನ ಉಪವಾಸ ಮತ್ತು ಪೂಜೆ ಮಾಡೋದರ ಮೂಲಕ ಈ ಭೀಮನ ಅಮಾವಾಸ್ಯೆಯನ್ನ ಆಚರಿಸುತ್ತಾರೆ.

ಕನ್ನಡ ಚಿತ್ರರಂಗದ ನಟಿಯರು ಕೂಡ ಭೀಮನ ಅಮಾವಾಸ್ಯ ಆಚರಣೆಯ ಫೋಟೋಗಳನ್ನ ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೊಂಡಿದ್ದು, ಅವರ ಪ್ರೀತಿಯ ಕ್ಷಣಗಳು ಸಾಮಾಜಿಕ ಜಾಲತಾಣಗಳಲ್ಲೂ ವೈರಲ್ ಆಗಿವೆ.

ಕನ್ನಡ ಸೇರಿ ನಾಲ್ಕು ಭಾಷೆಗಳಲ್ಲೂ ಮಿಂಚಿರುವ ನಟಿ ಪ್ರಣೀತಾ ಸುಭಾಷ್ – ಭೀಮನ ಅಮಾವಾಸ್ಯೆ ಸಂದರ್ಭದಲ್ಲಿ ತಮ್ಮ ಪತಿಯ ಪಾದ ಪೂಜೆ ನೆರವೇರಿಸಿ ಭಕ್ತಿಯ ನೋಟವನ್ನ ಹರಡಿದ್ದಾರೆ. ಧಾರ್ಮಿಕ ಆಚರಣೆಗೆ ಒತ್ತು ನೀಡುವ ಈ ನಟಿಯ ಫೋಟೋಗಳು ನೆಟ್ಟಿಗರಿಂದ ವಿಶಿಷ್ಟ ಮೆಚ್ಚುಗೆಗೆ ಪಾತ್ರವಾಗಿವೆ. ಅವರ ಮುಗುಳ್ನಗೆಯ ಜೊತೆಗೆ ಪತಿಯ ಹತ್ತಿರ ಇರುವ ಭಾವನಾತ್ಮಕ ದೃಶ್ಯ ಎಲ್ಲರನ್ನೂ ಮನಸೂರೆಗೊಳಿಸುತ್ತಿವೆ.

ನೆನಪಿರಲಿ ಪ್ರೇಮ್-ಜ್ಯೋತಿ ಜೋಡಿ ಕೂಡ ಭೀಮನ ಅವಮಾಸ್ಯೆ ಆಚಾರಿಸಿದ್ದಾರೆ. ಜ್ಯೋತಿ ಅವರು ಪ್ರೇಮ್ ಅವರ ಪಾದ ಪೂಜೆ ಮಾಡಿ ಆಶೀರ್ವಾದ ಪಡೆದ ವಿಡಿಯೋ, ಫೋಟೋಗಳನ್ನು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದಾರೆ. ಪ್ರೇಮ್ ಅವರ ಮುಖದಲ್ಲಿದ್ದ ಸಂತೋಷ ಈ ಸಂಭ್ರಮದ ಉತ್ಸಾಹವನ್ನ ತೋರಿಸುತ್ತಿದೆ.

ಅಭಿನಯ ಹಾಗೂ ವೈಯಕ್ತಿಕ ಬದುಕಿನಲ್ಲಿ ಒಟ್ಟಿಗೆ ಹೆಜ್ಜೆ ಇಡುತ್ತಿರುವ ಜೋಡಿ – ನಟಿ ಸೋನಲ್ ಮತ್ತು ನಿರ್ದೇಶಕ ತರುಣ್ ಸುಧೀರ್. ಸೋನಲ್ ಅವರು ತಮ್ಮ ಪತಿಯ ಪಾದ ಪೂಜೆಯ ಫೋಟೋ ಹಂಚಿಕೊಂಡಿದ್ದು, ಅದರ ಜೊತೆಗೆ ಅವರು ಬರೆದಿರುವ ವಾಕ್ಯಗಳು ಎಲ್ಲರ ಮನಸ್ಸನ್ನು ಮುಟ್ಟಿವೆ. ‘ನೀವು ನನ್ನ ಜೀವನದ ಆಶ್ರಯ. ನಿಮ್ಮ ದೀರ್ಘಾಯುಷ್ಯ, ಆರೋಗ್ಯ ಮತ್ತು ಸಂತೋಷಕ್ಕಾಗಿ ಪ್ರತಿದಿನ ನಾನು ಪ್ರಾರ್ಥಿಸುತ್ತೇನೆ. ಪ್ರತಿ ವರ್ಷ ಬಾಂಧವ್ಯ ಬಲಗೊಳ್ಳಲಿ. ನಾನು ನಿಮ್ಮನ್ನು ತುಂಬಾ ಪ್ರೀತಿಸುತ್ತೇನೆ.’ ಅಂತ ಬರೆದುಕೊಂಡಿದ್ದಾರೆ.

ಅಯೋಗ್ಯ ನಿರ್ದೇಶಕ ಮಹೇಶ್ ಅವರ ಮನೆಯಲ್ಲೂ ಭೀಮನ ಅಮಾವಾಸ್ಯೆ ಧಾರ್ಮಿಕವಾಗಿ ಆಚರಿಸಲಾಗಿದೆ. ಇತ್ತೀಚೆಗಷ್ಟೇ ಮದುವೆಯಾದ ಚೈತ್ರಾ ಅವರು ತಮ್ಮ ಪತಿಯ ಪಾದ ಪೂಜೆ ನೆರವೇರಿಸಿ, ಸಾಂಪ್ರದಾಯಿಕ ಮನೋಭಾವವನ್ನ ತೋರಿಸಿದ್ದಾರೆ. ಈ ಜೋಡಿಗೆ ಶುಭ ಹಾರೈಕೆಗಳನ್ನು ಹೇಳುತ್ತಿರುವ ಅಭಿಮಾನಿಗಳು, ‘ಈ ಬಾಂಧವ್ಯ ಸದಾ ಸದೃಢವಾಗಿರಲಿ’ ಎಂದು ಕಾಮೆಂಟ್ ಮಾಡಿದ್ದಾರೆ.

ಹೀಗೆ, ಸ್ಯಾಂಡಲ್‌ವುಡ್ ತಾರೆಯರು ಈ ಪವಿತ್ರ ದಿನದ ಭಕ್ತಿ, ಪ್ರೀತಿ ಮತ್ತು ಸಂಸ್ಕೃತಿಯ ಸಂಯೋಜನೆಯನ್ನ ತಮ್ಮ ಬದುಕಿನಲ್ಲಿ ಅಳವಡಿಸಿಕೊಂಡಿದ್ದಾರೆ. ಭೀಮನ ಅಮಾವಾಸ್ಯೆಯನ್ನ ಅತಿ ಸರಳವಾಗಿ ಹಾಗು ಭಕ್ತಿ ಪೂರ್ವಕವಾಗಿ ಆಚರಿಸಿದ್ದಾರೆ.

ವರದಿ : ಲಾವಣ್ಯ ಅನಿಗೋಳ

- Advertisement -

Latest Posts

Don't Miss