Wednesday, October 15, 2025

Latest Posts

ಟ್ರಾಲಿ ಬ್ಯಾಗ್‌ನಲ್ಲಿ’3.5Kg ಚಿನ್ನ’ – ದುಬೈ ಸ್ಮಗ್ಲರ್ ಎಸ್ಕೇಪ್!

- Advertisement -

ದುಬೈನಿಂದ ಬಂದಿದ್ದ ಒಂದು ವಿಮಾನ ಪ್ರಯಾಣಿಕನ ಬ್ಯಾಗ್‌ನಲ್ಲಿ ₹2.25 ಕೋಟಿಮೌಲ್ಯದ 3.5 ಕೆಜಿ ಅಕ್ರಮ ಚಿನ್ನ ಪತ್ತೆಯಾಗಿದ್ದು, ಬ್ಯಾಗ್ ಅನ್ನು ಅಲ್ಲೇ ಎಸೆದು ಪರಾರಿಯಾಗಿದ್ದಾನೆ. ಹೌದು ದುಬೈನಿಂದ ಅಕ್ರಮ ಚಿನ್ನ ಸಾಗಾಟ ಮಾಡುತ್ತಿದ್ದವರ ಭಯಗೊಂಡು ಮಾರ್ಗ ಮಧ್ಯೆದಲ್ಲೇ ಚಿನ್ನ ಬಿಸ್ಕೆಟ್ ಸಹ ಪ್ರಯಾಣಿಕನ ಬ್ಯಾಗ್​ ಗೆ ಹಾಕಿ ಪರಾರಿಯಾಗಿರುವ ಘಟನೆ ನಡೆದಿದೆ.

ಕಸ್ಟಮ್ಸ್ ಅಧಿಕಾರಿಗಳ ಕೈಗೆ ತಗಲಾಕ್ಕೊಳ್ಳುವ ಭಯದಿಂದ ಬೇರೆಯವರ ಟ್ರಾಲಿ ಬ್ಯಾಗ್​​ ಗೆ ಚಿನ್ನ ಹಾಕಿ ಎಸ್ಪೇಪ್ ಆಗಿದ್ದಾನೆ. ಪ್ಯಾಸೆಂಜರ್ ಬ್ಯಾಗ್‌ಗೆ 3.5 ಕೆಜಿ ಚಿನ್ನದ ಬಿಸ್ಕೆಟ್ ಗಳನ್ನು ಹಾಕಿ ಸ್ಮಗ್ಲರ್ ಎಸ್ಪೇಪ್ ಆಗಿರುವ ಘಟನೆ ಬೆಂಗಳೂರಿನ ಕಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ನಡೆದಿದೆ.

ಬ್ಯಾಗ್ ಮಾಲೀಕ ತನ್ನ ಟ್ರ್ಯಾಲಿಯನ್ನು ಎಳೆದುಕೊಂಡು ಹೋಗುವಾಗ ಚಿನ್ನ ಇಟ್ಟಿರುವ ಬ್ಯಾಗ್ ಕೆಳಗೆ ಬಿದ್ದಿದೆ. ಇದನ್ನು ಗಮನಿಸಿದ ಮಾಲೀಕ ಕೂಡಲೇ ಚಿನ್ನದ ಬ್ಯಾಗ್‌ನ್ನು DRI ಅಧಿಕಾರಿಗಳ ಬಳಿ ತೆಗೆದುಕೊಂಡು ಹೋಗಿದ್ದಾರೆ. ಆಗ ಅಧಿಕಾರಿಗಳು ಬ್ಯಾಗ್ ಪರಿಶೀಲನೆ ಮಾಡಿದಾಗ 3.5 ಕೆಜಿ ಚಿನ್ನದ ಬಿಸ್ಕೆಟ್ ಇರುವುದು ಪತ್ತೆಯಾಗಿದೆ.

ಅಧಿಕಾರಿಗಳು ಮಾಲೀಕನ ವಿಚಾರಣೆ ನಡೆಸಿದಾಗ ಚಿನ್ನಕ್ಕೂ ಆತನಿಗೂ ಯಾವುದೇ ಸಂಬಂಧ ಇಲ್ಲ ಎನ್ನುವುದು ಬಹಿರಂಗ ಆಗಿದೆ. ಬಳಿಕ ಸ್ಮಗ್ಲರ್, ಪ್ರಯಾಣಿಕನ ಬ್ಯಾಗ್‌ಗೆ ಚಿನ್ನ ಹಾಕಿ ಪರಾರಿಯಾಗಿರುವುದು ತಿಳಿದುಬಂದಿದ್ದು, ಸದ್ಯ DRI ಅಧಿಕಾರಿಗಳು ಸಿಸಿಟಿವಿ ದೃಶ್ಯಗಳನ್ನು ಆಧರಿಸಿ ಸ್ಮಗ್ಲರ್‌ಗಾಗಿ ಹುಡುಕಾಟ ನಡೆಸಿದ್ದಾರೆ.

ವರದಿ : ಲಾವಣ್ಯ ಅನಿಗೋಳ

- Advertisement -

Latest Posts

Don't Miss