Gadaga: ಕಿತ್ತೂರ ರಾಣಿ ಚೆನ್ನಮ್ಮ ವಸತಿ ಶಾಲೆಯಲ್ಲಿ 15 ದಿನಗಳವರೆಗೆ ದಿನವೂ ಊಟ ನೀಡದೇ ನಿತ್ಯವೂ ನರಕ..?

Gadaga: ಗದಗ ಜಿಲ್ಲೆಯ ಶಿರಹಟ್ಟಿ ತಾಲೂಕಿನ ಕಿತ್ತೂರ ರಾಣಿ ಚೆನ್ನಮ್ಮ ವಸತಿ ಶಾಲೆಯಲ್ಲಿ ಕಳೆದ ಹದಿನೈದು ದಿನಗಳವರೆಗೆ ಮಕ್ಕಳಿಗೆ ಸರಿಯಾಗಿ ಊಟ ನೀಡಿಲ್ಲ ಎಂದು ಪಾಲಕರು ತಮ್ಮ ಮಕ್ಕಳನ್ನು ಗಂಟು ಮೂಟೆ ಕಟ್ಟಿಕೊಂಡು ಊರಿನ ಕಡೆ ಕರೆದುಕೊಂಡು ಹೋಗುತ್ತಿರುವ ದೃಶ್ಯ ಸಾಮಾನ್ಯವಾಗಿತ್ತು.

ಕಿತ್ತೂರ ರಾಣಿ ಚೆನ್ನಮ್ಮ ವಸತಿ ಶಾಲೆಯಲ್ಲಿ ಕಳೆದ 15 ದಿನಗಳವರೆಗೆ ಮಕ್ಕಳಿಗೆ ಸರಿಯಾಗಿ ಊಟ ನೀಡದೇ ದಿನ ನಿತ್ಯವೂ ನರಕಯಾತನೆ ತೋರಿಸಿದ್ದಾರೆ. ಈ ಹಿಂದೆ ಇದ್ದ ಮುಖ್ಯೋಪಾಧ್ಯಾಯರು ನಮ್ಮ ಮಕ್ಕಳಿಗೆ ಒಳ್ಳೆಯ ರೀತಿಯಿಂದ ನೋಡಿಕೊಳ್ಳುತ್ತಿದ್ದರು. ಅವರು ಹೋದ ಮೇಲೆ ನಮ್ಮ ಮಕ್ಕಳಿಗೆ ಸರಿಯಾಗಿ ಊಟ ಹಾಕದೇ ಉಪವಾಸ ಕೆಡವಿದ್ದಾರೆ. ಇನ್ನೂ ನಮ್ಮ ಮಕ್ಕಳಿಂದ ಚಪಾತಿ ಮಾಡಿಸಿಕೊಂಡು ಊಟ ಬಡಿಸಲು ಹೇಳಿದ್ದಾರೆ ಎಂದು ಆರೋಪಿಸಿದರು.

ಇನ್ನೂ ವಸತಿ ಶಾಲೆಯಲ್ಲಿ ಸ್ಟೋರ್ ರೂಮ್ ನೋಡಿದರೆ ಎಲ್ಲಾ ಡಬ್ಬಿಗಳು ಖಾಲಿ ಕಾಣುತ್ತಿತ್ತು. ಸರಿಯಾಗಿ ತರಕಾರಿಗಳು ಇಲ್ಲ. ಉಳ್ಳಾಗಡ್ಡಿ, ಟೊಮೆಟೊ, ಬೇಳೆ ಸೇರಿದಂತೆ ಅಡುಗೆ ಮಾಡುವ ಸಾಮಗ್ರಿಗಳು ಇಲ್ಲದೇ ಎಲ್ಲವೂ ಖಾಲಿ ಇದ್ದವು. ಅಡುಗೆ ಸಹಾಯಕಿಗೆ ಕೇಳಿದರೆ ನಮಗೆ ಎಷ್ಟು ಕೊಡುತ್ತಾರೆ? ನಾವು ಅಷ್ಟೇ ಮಾಡುತ್ತೇವೆ ಎಂದು ಹೇಳುತಾರೆ. ವಸತಿ ಶಾಲೆಯ ಮುಖ್ಯೋಪಾಧ್ಯಾಯರಿಗೆ ಕೇಳಿದರೆ ನಾವು ಎಲ್ಲವನ್ನೂ ಕೊಡುತ್ತೇವೆ ಎಂದು ಹೇಳುತ್ತಾರೆ. ಸರಕಾರ ರೇಷನ್ ಕೊಡುತ್ತಿಲ್ಲ ಎಂದು ಹೇಳಿ ನಾವು ಪೋಷಕರು ಸೇರಿಕೊಂಡು ಅಧಿಕಾರಿಗಳಿಗೆ ಕೇಳುತ್ತೇವೆ ಎಂದು ಆಕ್ರೋಶ ವ್ಯಕ್ತಪಡಿಸಿದರು.

About The Author