‘ಜೋಳದ ರೊಟ್ಟಿಗಾಗಿ’ ಅಮೆರಿಕದಿಂದ ಬರ್ತೀನಿ!

ಉತ್ತರ ಕರ್ನಾಟಕದ ರೊಟ್ಟಿ ಊಟ ಸವಿಯಲು ಅಮೆರಿಕದಿಂದ ವರ್ಷದಲ್ಲಿ 2 ಬಾರಿ ಬೆಂಗಳೂರಿಗೆ ಬರ್ತಾರಂತೆ ಈ ವಿದೇಶಿ ಉದ್ಯಮಿ. ಬೆಂಗಳೂರು – ಭಾರತದಲ್ಲಿ ಆಹಾರದ ನಕ್ಷೆಯಲ್ಲಿ ಒಂದು ವಿಶಿಷ್ಟ ಸ್ಥಾನ ಹೊಂದಿರುವ ನಗರ. ಇಲ್ಲಿ ದೇಶದ ಎಲ್ಲಾ ಭಾಗಗಳ, ಇಡೀ ವಿಶ್ವದ ಖಾದ್ಯ ಸಂಸ್ಕೃತಿಗಳ ಸವಿಯನ್ನು ಪಡೆಯಬಹುದು. ಇತ್ತೀಚೆಗೆ ಇಲ್ಲಿಗೆ ಬಂದಿದ್ದ ಅಮೆರಿಕದ ಉದ್ಯಮಿ ಬ್ರೆಟ್ ಮುಲ್ಲರ್ ಉತ್ತರ ಕರ್ನಾಟಕದ ಊಟದ ಬಗ್ಗೆ ಸಂತಸ ವ್ಯಕ್ತಪಡಿಸಿದ್ದಾರೆ.

ಬ್ರೆಟ್ ಮುಲ್ಲರ್ – ಜನಪ್ರಿಯ ಉದ್ಯಮಿ, ‘ಕ್ಯಾಲಿಫೋರ್ನಿಯಾ ಬುರ್ರಿಟೋ’ ಎಂಬ ಫಾಸ್ಟ್ ಫುಡ್ ಸರಣಿಯ ಸ್ಥಾಪಕರು. ಇವರು 2012 ರಲ್ಲಿ ತಮ್ಮ 22ನೇ ವಯಸ್ಸಿನಲ್ಲಿ ಬೆಂಗಳೂರಿಗೆ ಬಂದಿದ್ದರು. ಆಗ ಮೊದಲ ಔಟ್ಲೆಟ್ ಅನ್ನು ಬೆಂಗಳೂರಿನಲ್ಲೇ ತೆರೆದಿದ್ದರು. ಇಂದು ಭಾರತಾದ್ಯಂತ 100ಕ್ಕೂ ಹೆಚ್ಚು ಔಟ್ಲೆಟ್‌ಗಳನ್ನೂ ಹೊಂದಿದ್ದಾರೆ.

ಅವರು ಎಷ್ಟೇ ಬಿಜಿಯಾಗಿರಲಿ, ವರ್ಷಕ್ಕೆ ಕನಿಷ್ಠ ಎರಡು ಬಾರಿ ಬೆಂಗಳೂರಿನ ಬಸವನಗುಡಿಯಲ್ಲಿರುವ ಕಾಮತ್ ಹೋಟೆಲ್ ಗೆ ಭೇಟಿ ನೀಡುವುದನ್ನ ಮರೆಯುವುದಿಲ್ಲ.ಅವರು ಇಲ್ಲಿಗೆ ಏಕೆ ಬರುತ್ತಾರೆ ಗೊತ್ತಾ? ಉತ್ತರ ಕರ್ನಾಟಕದ ಸಾಂಪ್ರದಾಯಿಕ ಜೋಳದ ರೊಟ್ಟಿ ಊಟ ಸವಿಯಲು.

ಈ ಊಟ ತಾಜಾ, ಆರೋಗ್ಯಕರ, ಬಹಳ ರುಚಿಕರ. ಜೋಳದ ರೊಟ್ಟಿಯ ಮೇಲೆ ಕರಗುವ ಬೆಣ್ಣೆ ಅಸಾಧಾರಣ. ಬದನೆಕಾಯಿ ಪಲ್ಯ ಎಷ್ಟು ರುಚಿ. ನಾನು ಈ ಊಟ ತಿಂದ ನಂತರ ಜಿಮ್ ಗೆ ಹೋಗಬೇಕೆಂದೇ ಆಗಲ್ಲ. ಅಂತ ಉತ್ತರ ಕರ್ನಾಟಕದ ಊಟದ ಬಗ್ಗೆ ಮುದ್ದಾಗಿ ಮಾತನಾಡಿದ್ದಾರೆ. ಇಂತಹ ಆಹಾರವನ್ನು ತಿನ್ನುವುದು ಮಾತ್ರವಲ್ಲ, ಇದು ದೇಹವನ್ನೂ, ಮನಸ್ಸನ್ನೂ ತೃಪ್ತಿಪಡಿಸುತ್ತದೆ ಅನ್ನೋದು ಅವರ ಭಾವನೆಯಾಗಿದೆ.

ಇನ್ನೊಂದು ವಿಷಯ ಏನೆಂದ್ರೆ ಅವರು ಬೆಂಗಳೂರಿನಲ್ಲಿ ಆಟೋದಲ್ಲಿ ಪ್ರಯಾಣ ಮಾಡುವುದನ್ನೇ ಇಷ್ಟಪಡುತ್ತಾರೆ ಅಂತೇ. ನಗರ ಜೀವನದ ಸ್ಫೂರ್ತಿ, ಸಾಮಾನ್ಯ ಜನರೊಂದಿಗೆ ಸಂಪರ್ಕ ಇವರಿಗೆ ವಿಶೇಷ ಅನುಭವ ನೀಡುತ್ತಂತೆ. ಇಷ್ಟು ಬೃಹತ್ ಉದ್ಯಮಗಾರನಾಗಿದ್ದರೂ, ಊರಿನ ನೆನೆಪು, ಗ್ರಾಮೀಣ ಆಹಾರದ ಪ್ರೀತಿ, ಜನಜೀವನದ ಒಡನಾಟ ಈ ಬ್ರೆಟ್ ಮುಲ್ಲರ್ ಅವರನ್ನೊಬ್ಬ ವಿಶಿಷ್ಟ ವ್ಯಕ್ತಿಯಾಗಿ ಮಾಡಿದೆ ಅಂದ್ರು ತಪ್ಪಿಲ್ಲ.

ವರದಿ : ಲಾವಣ್ಯ ಅನಿಗೋಳ

About The Author