‘ಅರೆಬರೆ ಊಟ’ ನೀಡಿ ಶಿರಹಟ್ಟಿಯ ವಸತಿ ಶಾಲೆಯಲ್ಲಿ ಮಕ್ಕಳಿಗೆ ಊಟವಿಲ್ಲದೇ ವಿಲವಿಲ ಯಾತನೆ ಅನುಭವಿಸುವಂತೆ ಮಾಡಿದ್ದಾರೆ. ಆದರೆ ಕರ್ನಾಟಕ ಟಿವಿಯ ವರದಿ ಬಳಿಕ ಭಾರಿ ಬದಲಾವಣೆಯಾಗಿದೆ. ವಾರ್ಡನ್ ಮತ್ತು ಪ್ರಿನ್ಸಿಪಲ್ ಅಮಾನತು. ಇದು ಕರ್ನಾಟಕ ಟಿವಿಯ ಬಿಗ್ ಇಂಪ್ಯಾಕ್ಟ್!
ಇದು ಗದಗ ಜಿಲ್ಲೆಯ ಶಿರಹಟ್ಟಿ ತಾಲೂಕಿನ ಕಿತ್ತೂರು ರಾಣಿ ಚೆನ್ನಮ್ಮ ವಸತಿ ಶಾಲೆ. ಇಲ್ಲಿ ಅನೇಕ ವಿದ್ಯಾರ್ಥಿಗಳು ವಸತಿ ಸೌಲಭ್ಯ ಪಡೆದಿದ್ದು, ಕಳೆದ ಕೆಲವು ದಿನಗಳಿಂದ ಇಲ್ಲಿ ಊಟದ ಸಮಸ್ಯೆ ಇದೆ. ಮಕ್ಕಳಿಗೆ ಅರೆಬರೆ ಅನ್ನ ಕೊಡ್ತಿದ್ದಾರೆ. ಕೆಲವೊಮ್ಮೆ ಊಟವೇ ಇಲ್ಲದಂತಾಗಿರತ್ತೆ.
ಮಕ್ಕಳು ಊಟವಿಲ್ಲದೆ ಪಾಠ ಕೇಳಲಾಗದೆ ವಾಪಸ್ಸು ಮನೆಗೆ ಹೋಗುತ್ತಿರುವುದು ಕಂಡುಬಂದಿದೆ. ಮಕ್ಕಳು ಹಸಿವಿನಿಂದ ಊಟವಿಲ್ಲದೇ ವಿಲವಿಲ ಒದ್ದಾಡುತ್ತಿದ್ದಾರೆ. ಕಳೆದ ಎರಡು ದಿನಗಳು ಹಿಂದೆ ನಮ್ಮ ಕರ್ನಾಟಕ ಟಿವಿ ಶಾಲಾ ಮಕ್ಳಳ ಅರೆ ಬರೆ ಊಟ ನೀಡಿದ ಆರೋಪದ ಬಗ್ಗೆ ವಿಸ್ತೃತವಾಗಿ ಸುದ್ದಿ ಬಿತ್ತರೀಸಿತ್ತು.
ಈ ಸುದ್ದಿಗೆ ಸರ್ಕಾರ ಸ್ಪಂದಿಸಿದ್ದು, ಕರ್ತವ್ಯ ಲೋಪದಲ್ಲಿ ಪ್ರಿನ್ಸಿಪಲ್, ವಾರ್ಡನ್ ಸಸ್ಪೆಂಡ್ ಮಾಡಲಾಗಿದೆ. ಪ್ರಿನ್ಸಿಪಲ್ ಡಿ ಸಿ ನರೇಗಲ್ ಮತ್ತು ವಾರ್ಡನ್ ಶೈಲಾ ಕುರ್ತಕೋಟಿ ಅವರನ್ನು ಕರ್ನಾಟಕ ವಸತಿ ಶಿಕ್ಷಣ ಸಂಸ್ಥೆಗಳ ಸಂಘ ಬೆಂಗಳೂರು ಕಾರ್ಯನಿರ್ವಾಹಕ ನಿರ್ದೇಶಕ ಕಾಂತರಾಜು ಅಮಾನತು ಮಾಡಿ ಆದೇಶ ಹೊರಡಿಸಿದ್ದಾರೆ.
ಅಡುಗೆ ಸಿಬ್ಬಂದಿಯನ್ನು ಬದಲಾಯಿಸಲು ಸೂಚಿಸಲಾಗಿದೆ. ಕಳಪೆ ರೇಷನ್ ಪೂರೈಕೆ ಮಾಡಿದ ಏಜೆನ್ಸಿಯನ್ನು ಬ್ಲಾಕ್ ಲಿಸ್ಟ್ಗೆ ಸೇರಿಸಲು ಕೂಡ ಕ್ರಮ ಕೈಗೊಳ್ಳಲಾಗಿದೆ. ನಮ್ಮ ಕರ್ನಾಟಕ ಟಿವಿ ವರದಿ ಮಾಡಿದ ನಂತರ ಸರ್ಕಾರ ಸ್ಪಂದಿಸಿದ್ದು, ಕೇವಲ ಒಂದು ಶಾಲೆ ಅಲ್ಲ, ಇಡೀ ವ್ಯವಸ್ಥೆಯ ಕಡೆಗೆ ಸರ್ಕಾರ ಗಮನ ಹರಿಸಬೇಕಿದೆ.
ವರದಿ : ಲಾವಣ್ಯ ಅನಿಗೋಳ




