ಹಾಸನದ ಮಾಜಿ ಸಂಸದ ಪ್ರಜ್ವಲ್ ರೇವಣ್ಣ, ಮನೆ ಕೆಲಸದಾಕೆ ಮೇಲೆ ಅತ್ಯಾಚಾರ ಎಸಗಿದ ತಪ್ಪಿಗೆ ಜೀವಾವಧಿ ಶಿಕ್ಷೆಯಾಗಿದೆ. ಜನಪ್ರತಿನಿಧಿಗಳ ವಿಶೇಷ ನ್ಯಾಯಾಲಯ ಪ್ರಜ್ವಲ್ ರೇವಣ್ಣಗೆ ಜೀವಾವಧಿ ಶಿಕ್ಷೆ ಹಾಗೂ 11 ಲಕ್ಷ ರೂಪಾಯಿ ದಂಡ ವಿಧಿಸಿ ತೀರ್ಪು ನೀಡಿದೆ.
ಪ್ರಜ್ವಲ್ ರೇವಣ್ಣ ಈಗಾಗಲೇ 14 ತಿಂಗಳಿನಿಂದ ಅಂದರೆ ಒಂದು ವರ್ಷ 2 ತಿಂಗಳಿನಿಂದ ಬೆಂಗಳೂರಿನ ಪರಪ್ಪನ ಅಗ್ರಹಾರ ಕೇಂದ್ರ ಕಾರಾಗೃಹದಲ್ಲೇ ಇದ್ದಾರೆ. ಮುಂದಿನ ಜೈಲು ಶಿಕ್ಷೆಯ ಅವಧಿಯಲ್ಲಿ ಈ 14 ತಿಂಗಳ ಜೈಲು ವಾಸ ಮೈನಸ್ ಆಗೋದಿಲ್ಲ ಅಂತ ಹೇಳಲಾಗಿದೆ. ಇದು ನಿಜಕ್ಕೂ ಅಪರೂಪವಾದ ಪ್ರಕರಣ ಆಗಿದ್ದು, ಪ್ರಜ್ವಲ್ ರೇವಣ್ಣ ಅವರಿಗೆ ಕಠಿಣ ಶಿಕ್ಷೆ ವಿಧಿಸಲಾಗಿದೆ.
ಅತ್ಯಾಚಾರ, ಲೈಂಗಿಕ ದೌರ್ಜನ್ಯ, ಬೆದರಿಕೆ ಕೇಸ್‌ನಲ್ಲಿ ಅಪರಾಧಿಯಾಗಿದ್ದ ಪ್ರಜ್ವಲ್ ರೇವಣ್ಣ ಇನ್ನು ಜೀವನ ಪರ್ಯಂತ ಜೈಲಿನಲ್ಲೇ ಇರಬೇಕಿದೆ. ಮನೆಗೆಲಸದ ಹೆಂಗಸು ಮೇಲಿನ ಅತ್ಯಾಚಾರ ಪ್ರಕರಣದಲ್ಲಿ ಜೈಲು ಸೇರಿದ್ದ ಪ್ರಜ್ವಲ್ ರೇವಣ್ಣ ಈಗಾಗಲೇ 14 ತಿಂಗಳಿನಿಂದ ಜೈಲಿನಲ್ಲಿದ್ದಾರೆ.
ಬೇರೆ ಕೇಸ್‌ಗಳಲ್ಲಿ ಆಗಿದ್ದರೆ ಮುಂದಿನ ಜೀವಾವಧಿ ಶಿಕ್ಷೆಯಲ್ಲಿ ಈ 14 ತಿಂಗಳ ಜೈಲು ವಾಸ ಕಡಿತವಾಗುತ್ತಿತ್ತು. ಆದರೆ ಅತ್ಯಾಚಾರದಂತಹ ಗಂಭೀರ ಪ್ರಕರಣ ಆಗಿರೋದ್ರಿಂದ ಈ ಕೇಸ್‌ನಲ್ಲಿ ಈಗಾಗಲೇ ಪೂರೈಸಿದ 14 ತಿಂಗಳ ಜೈಲು ವಾಸ ಮೈನಸ್ ಆಗೋದಿಲ್ಲ. ಅಲ್ಲದೇ ಪ್ರಜ್ವಲ್ ರೇವಣ್ಣ ಅವರನ್ನ ಇಷ್ಟು ದಿನ ಬಾಡಿ ವಾರೆಂಟ್ ಮೇಲೆ ಕಸ್ಟಡಿಗೆ ಪಡೆಯಲಾಗಿತ್ತು. ಇದೀಗ ಅಧಿಕೃತವಾಗಿ ಪೊಲೀಸರು ಬಂಧಿಸಿದ್ದು, ಇಂದಿನಿಂದಲೇ ಪ್ರಜ್ವಲ್ ರೇವಣ್ಣ ಅವರಿಗೆ ಅಧಿಕೃತವಾಗಿ ಜೈಲು ಶಿಕ್ಷೆ ಜಾರಿ ಮಾಡಲಾಗುತ್ತಿದೆ.