ಮನೆಯಲ್ಲಿರುವ ಕೆಲ ಅವಶ್ಯಕ ವಸ್ತುವಿನಲ್ಲಿ ಪೊರಕೆ ಕೂಡ ಒಂದು. ಮನೆಯಲ್ಲಿರುವ ಅಶುದ್ಧತೆಯನ್ನ ತೆಗೆದು ಹಾಕಿ, ಶುದ್ಧಗೊಳಿಸಲು ಬಳಸುವ ಪೊರಕೆ ಲಕ್ಷ್ಮೀಗೆ ಸಮಾನ. ಇಂಥ ಪೊರಕೆ ನಮ್ಮ ಅಭಿವೃದ್ಧಿಗೂ, ನಮಗೆ ಕಷ್ಟ ಬರುವುದಕ್ಕೂ ಕಾರಣವಾಗುತ್ತೆ. ಅದು ಹೇಗೆ ಅನ್ನೋದನ್ನ ಇವತ್ತು ನೀವು ತಿಳಿಸಿಕೊಡಲಿದ್ದೇವೆ.

ಲಕ್ಷ್ಮೀ ಸ್ವರೂಪವಾದ ಪೊರಕೆಯನ್ನ ಕೆಲವರು ಹೇಗೆ ಬೇಕೋ ಹಾಗೆ ಇಡ್ತಾರೆ. ಪೊರಕೆಯನ್ನ ಕಾಲಿನಿಂದ ಸರಿಸುವುದು, ಎಲ್ಲೆಂದರಲ್ಲಿ ಬಿಸಾಕುವುದು. ಹೀಗೆಲ್ಲ ಮಾಡ್ತಾರೆ. ಇದರಿಂದಲೇ ಮನೆಗೆ ದುಃಖ ದಾರಿದ್ರ್ಯಗಳು ಸಂಭವಿಸುತ್ತದೆ. ಆದ್ದರಿಂದ ಪೊರಕೆಯನ್ನು ಸರಿಯಾದ ರೀತಿಯಲ್ಲಿಡಬೇಕು.
ಅಲ್ಲದೇ ಮನೆಯೊಳಗೆ ಬಳಸಲು ಒಂದು ಪೊರಕೆ ಮನೆಯ ಹೊರಗೆ ಬಳಸಲು ಒಂದು ಪೊರಕೆ ಇರಲಿ. ಹೊರಗೆ ಬಳಸಿದ ಪೊರಕೆಯನ್ನ ಹೊರಗೇ ಇಡಿ. ಮತ್ತು ಮನೆಯೊಳಗೆ ಬಳಸೋ ಪೊರಕೆ ಒಳಗಷ್ಟೇ ಬಳಸಬೇಕು. ಯಾವುದೇ ಕಾರಣಕ್ಕೂ ಹೊರಗಿನ ಪೊರಕೆ ಒಳಗೆ, ಒಳಗಿನ ಪೊರಕೆ ಹೊರಗೆ ಬಳಸಕೂಡದು. ಇದರಿಂದ ಮನೆಯಲ್ಲಿ ಕಲಹವಾಗುತ್ತದೆ. ಅಲ್ಲದೇ ದಟ್ಟ ದಾರಿದ್ರ್ಯ ಸಂಭವಿಸುತ್ತದೆ.
ಇನ್ನು ಸೂರ್ಯಾಸ್ತವಾದ ಬಳಿಕ ಯಾವುದೇ ಕಾರಣಕ್ಕೂ ಮನೆಯೊಳಗೆ ಕಸ ಗುಡಿಸಬೇಡಿ. ಸಂಜೆ 6 ಗಂಟೆಯೊಳಗೆ ಕಸಗುಡಿಸಿಬಿಡಿ. ದೀಪ ಹಚ್ಚಿದ ಬಳಿಕ ಕಸ ಗುಡಿಸುವುದರಿಂದ ಮನೆ ಅಭಿವೃದ್ಧಿ ಕಾಣುವುದಿಲ್ಲ.
ಪೊರಕೆಗೆ ಕಾಲು ತಾಗಿಸಿದ್ದರೆ ನಮಸ್ಕರಿಸಿ. ಮನೆಯ ಎದುರಿಗೆ ಪೊರಕೆಯನ್ನಿರಿಸಕೂಡದು. ಇನ್ನು ಪೊರಕೆಯನ್ನು ಬೇರೆಯವರಿಗೆ ಕೊಡುವ ಸಂದರ್ಭದಲ್ಲಿ ಅದನ್ನ ಕೈಗೆ ನೀಡುವ ಬದಲು ಕೆಳಗಿರಿಸಿ ತೆಗೆದುಕೊಳ್ಳಲು ಹೇಳಿ. ನೀವೇನಾದರೂ ಪೊರಕೆಯನ್ನು ನಿಮ್ಮ ಕೈಯಿಂದ ಬೇರೆಯವರಿಗೆ ನೀಡಿದ್ರೆ ನಿಮ್ಮಿಬ್ಬರ ಮಧ್ಯೆ ಜಗಳ ಸಂಭವಿಸುವ ಸಾಧ್ಯತೆ ಇರುತ್ತದೆ.
ಆದ್ದರಿಂದ ಮನುಷ್ಯ ಲಕ್ಷಾಧಿಪತಿ ಮತ್ತು ಭಿಕ್ಷಾಧಿಪತಿಯಾಗಲು ಕಾರಣವಾಗುವ ಪೊರಕೆಯನ್ನ ಮನೆಯಲ್ಲಿ ಉತ್ತಮವಾಗಿಟ್ಟುಕೊಳ್ಳಬೇಕು.

ಶ್ರೀ ಸಾಯಿ ಕೃಷ್ಣ ಜ್ಯೋತಿಷ್ಯಾಲಯ, ಪಂಡಿತ್ ಡಿ.ಎಸ್ ಜೋಷಿ – 9731355538
ನಿಮ್ಮ ಸಮಸ್ಯೆಗಳಾದ ಉದ್ಯೋಗ, ಸತಿ-ಪತಿ ಕಲಹ, ಮದುವೆ, ಪ್ರೇಮ ವಿಚಾರ, ವಶೀಕರಣ ಯಾವುದೇ ಕಠಿಣ-ಕ್ಲಿಷ್ಟ ಸಂಕಷ್ಟಗಳಿಗೆ ಸಂಪರ್ಕಿಸಿ.
ವಿಳಾಸ : ಸಾಯಿಬಾಬಾ ದೇವಸ್ಥಾನ ಎದುರು, 15ನೇ ಕ್ರಾಸ್, ಬಸ್ ನಿಲ್ದಾಣದ ಪಕ್ಕ, ಸಂಪಿಗೆ ರೋಡ್, ಮಲ್ಲೇಶ್ವರಂ, ಬೆಂಗಳೂರು
ನಿಮ್ಮ ಸಮಸ್ಯೆಗಳಿಗೆ ಕಾಶಿ ತಾಂತ್ರಿಕ ಅಘೋರಿ, ನಾಗಸಾಧುಗಳ ವಿಶೇಷ ಪ್ರಯೋಗಗಳಾದ ಮಹಾರುದ್ರ ಪೂಜೆ, ಮಂಡಲ ಪೂಜೆ, ಅಷ್ಟ ದಿಗ್ಬಂಧನೆಯ ಪೂಜೆಯಿಂದ 11 ದಿನಗಳಲ್ಲಿ ಪರಿಹಾರ ಶತಸಿದ್ಧ.
ಹೆಸರಾಂತ ವಂಶಪಾರಂಪರ್ಯ ಜ್ಯೋತಿಷ್ಯರು ಪಂಡಿತ್ ಡಿ.ಎಸ್ ಜೋಷಿ ತಮ್ಮ 25 ವರ್ಷಗಳ ಅನುಭವದಲ್ಲಿ 20,000 ಕ್ಕೂ ಹೆಚ್ಚು ಸಮಸ್ಯೆಗಳನ್ನ ಇತ್ಯರ್ಥ ಮಾಡಿ ಸಾವಿರಾರು ಕುಟುಂಬಗಳ ನೆಮ್ಮದಿಯ ಬದುಕಿಗೆ ನೆರವಾಗಿದ್ದಾರೆ.




