Monday, August 4, 2025

Latest Posts

ರಾಹುಲ್ ‘ಆಟಂ ಬಾಂಬ್’ ಕಾಂಗ್ರೆಸ್ ಭರ್ಜರಿ ತಯಾರಿ, ರಾಹುಲ್ ಧರಣಿಗೆ ಕಾಂಗ್ರೆಸ್ ಬಂದೋಬಸ್ತ್!

- Advertisement -

ಲೋಕಸಭಾ ಚುನಾವಣೆಯಲ್ಲಿ ಮತಗಳ್ಳತನ ನಡೆದಿದೆ. ಕರ್ನಾಟಕದ ಕೆಲವು ಕ್ಷೇತ್ರಗಳಲ್ಲಿ ಗೋಲ್ಮಾಲ್ ನಡೆದಿದೆ ಎಂದು ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಆರೋಪಿಸಿದ್ದಾರೆ. ಮತಗಳ್ಳತನದ ಆಟಂ ಬಾಂಬ್‌ಗೆ ಸಾಕ್ಷಿ ಬಿಡುಗಡೆ ಮಾಡುವುದಾಗಿ ರಾಹುಲ್ ಗಾಂಧಿ ಹೇಳಿದ್ದಾರೆ.

ಆಗಸ್ಟ್‌ 5ರಂದು ಬೆಂಗಳೂರಿನ ಫ್ರೀಡಂ ಪಾರ್ಕ್‌ನಲ್ಲಿ ಕಾಂಗ್ರೆಸ್ ಧರಣಿ ಕಾರ್ಯಕ್ರಮ ನಡೆಸಲಾಗುತ್ತಿದೆ. ರಾಹುಲ್ ಗಾಂಧಿ ಕಾರ್ಯಕ್ರಮದ ಹಿನ್ನೆಲೆಯಲ್ಲಿ ಪೊಲೀಸ್ ಸರ್ಪಗಾವಲು ಹಾಕಲಾಗಿದೆ.

ಲೋಕಸಭಾ ಚುನಾವಣೆಯಲ್ಲಿ ನಡೆದಿದ್ದು ಎನ್ನಲಾಗುವ ಅಕ್ರಮಗಳಿಗೆ ವಿರೋಧ ವ್ಯಕ್ತಪಡಿಸುವುದು ಧರಣಿಯ ಉದ್ದೇಶವಾಗಿದೆ. ಧರಣಿಗೆ ದೇಶದ ವಿವಿಧ ಭಾಗಗಳಿಂದ ಕಾಂಗ್ರೆಸ್ ಕಾರ್ಯಕರ್ತರು, ಮುಖಂಡರು ಭಾಗವಹಿಸುವ ನಿರೀಕ್ಷೆಯಿದೆ.

ಈ ಪ್ರತಿಭಟನೆ ವೇಳೆ ಯಾವುದೇ ಅನಾಹುತ ಸಂಭವಿಸದಂತೆ ನೋಡಿಕೊಳ್ಳಲು ಒಟ್ಟು 4,459 ಪೊಲೀಸ್ ಸಿಬ್ಬಂದಿಯನ್ನು ಬಂದೋಬಸ್ತ್‌ಗೆ ನಿಯೋಜಿಸಲಾಗಿದೆ. ಈ ತಂಡದಲ್ಲಿ 12 ಡಿಸಿಪಿ, 45 ಎಸಿಪಿ, 128 ಪಿಐ, 421 ಎಎಸ್‌ಐ/ಪಿಎಸ್‌ಐ, 3,272 ಪಿಸಿ/ಹೆಡ್‌ ಕಾನ್ಸ್‌ಟೇಬಲ್‌, 591 ಮಹಿಳಾ ಸಿಬ್ಬಂದಿ ಬಂದೋಬಸ್ತ್‌ ಕರ್ತವ್ಯಕ್ಕೆ ಹಾಜರಾಗಲಿದ್ದಾರೆ.

ಇದರೊಂದಿಗೆ 14 ಪುರುಷ ಕೆಎಸ್‌ಆರ್‌ಪಿ, 2 ಮಹಿಳಾ ಕೆಎಸ್ಆರ್‌ಪಿ, 3 ವಾಟರ್‌ ಜೆಟ್‌ ವಾಹನ, 4 ಅಗ್ನಿಶಾಮಕ ವಾಹನ, 6 ಆ್ಯಂಬುಲೆನ್ಸ್‌, 15 DSMD/HHMD, 1 ಡಿ ಸ್ಕ್ವಾಡ್‌, 1 ಗರುಡಾ ಪಡೆ, 1 ಆ್ಯಂಟಿ ಸ್ಟ್ಯಾಂಪೆಡ್‌ ಸ್ಕ್ವಾಡ್‌, 1 QRT ತಂಡ, 1 ಕಬ್ಬಡಿ ತಂಡ ಸೇರಿದಂತೆ ವಿಶೇಷ ಪಡೆಗಳನ್ನು ಪ್ರತಿಭಟನೆಯ ಬಂದೋಬಸ್ತ್‌ ಕರ್ತವ್ಯಕ್ಕೆ ನಿಯೋಜಿಸಲಾಗಿದೆ.

- Advertisement -

Latest Posts

Don't Miss