Thursday, August 7, 2025

Latest Posts

Spiritual: ವರಮಹಾಲಕ್ಷ್ಮಿ ವ್ರತಕ್ಕೆ ಯಾವ ಕಲಶ ಬಳಸಬೇಕು? ಬೇಕಾಗಿರುವ ವಸ್ತುಗಳು ಏನೇನು?

- Advertisement -

Spiritual: ಪ್ರಸಿದ್ಧ ಆಧ್ಯಾತ್ಮಿಕ ಸಲಹೆಗಾರರು ಮತ್ತು ಜ್ಯೋತಿಷಿಯಾಗಿರುವ ಚಂದಾ ಪಾಂಡೆ ಅಮ್ಮಾಜಿ ಕರ್ನಾಟಕ ಟಿವಿ ಜತೆ ಮಾತನಾಡಿದ್ದು, ಶ್ರಾವಣ ಮಾಸದಲ್ಲಿ ಬರುವ ಹಬ್ಬಗಳ ಬಗ್ಗೆ ಸಲಹೆ ನೀಡಿದ್ದಾರೆ. ವರಮಹಾಲಕ್ಷ್ಮೀ ಹಬ್ಬದ ದಿನ ನಾವು ಯಾವ ಕಲಶ ಬಳಸಬೇಕು ಅಂತಾ ವಿವರಿಸಿದ್ದಾರೆ.

ಶ್ರಾವಣ ಮಾಸದಲ್ಲಿ ಬರುವ ಪ್ರಮುಖ ಹಬ್ಬಗಳಲ್ಲಿ ವರಮಹಾಲಕ್ಷ್ಮೀ ಹಬ್ಬ ಕೂಡ 1. ಲಕ್ಷ್ಮೀಯನ್ನು ಬರಮಾಡಿಕ“ಳ್ಳುವ ದಿನ ಇದಾಗಿದ್ದು, ಈ ದಿನ ಪದ್ಧತಿ ಪ್ರಕಾರವಾಗಿ ಪೂಜೆ ಮಾಡಿದರೆ, ಆರ್ಥಿಕ ಸಮಸ್ಯೆಗೆ ಪರಿಹಾರ ಸಿಗುತ್ತದೆ. ಲಕ್ಷ್ಮೀ ಕೃಪೆ ನಮ್ಮ ಮೇಲಿರುತ್ತದೆ. ಅಷ್ಟಲಕ್ಷ್ಮೀಯ ದಯೆ ನಮ್ಮ ಮೇಲಿರಬೇಕು ಅಂದ್ರೆ ನಾವು ವರಮಹಾಲಕ್ಷ್ಮೀ ಹಬ್ಬವನ್ನು ನಾವು ನಿಯಮದ ಪ್ರಕಾರ ಆಚರಿಸಬೇಕು.

ಈ ದಿನ ಬ್ರಾಹ್ಮಿ ಮುಹೂರ್ತದಲ್ಲಿ ಎದ್ದು ಸ್ನಾನಾದಿಗಳನ್ನು ಮಾಡಿ, ದೇವರಿಗೆ ಪೂಜೆ ಮಾಡಬೇಕು. ಹೀಗೆ ಪೂಜೆ ಮಾಡುವಾಗ ಕಳಶ ಬಳಸಲಾಗುತ್ತದೆ. ಅಲ್ಲದೇ, ಕೆಲವರು ಕಾಯಿನ್‌ಗಳನ್ನು, ನೋಟುಗಳನ್ನು ಜೋಡಿಸಿ, ಅಲಂಕಾರ ಮಾಡುವ ಕೆಲಸ ಮಾಡುತ್ತಾರೆ. ಆದರೆ ಇದು ತಪ್ಪು ಅಂತಾರೆ ಜ್ಯೋತಿಷಿ ಚಂದಾಪಾಂಡೆ ಅಮ್ಮಾಜಿ.

ಹಣ ಇದು ಬದಲು, ಹಣ್ಣು-ಹಂಪಲು, ಪೂವಿನಿಂದ ಮಾತ್ರ ಅಲಂಕರಿಸಬೇಕು. ಕಳಸದ ನೀರಿನಲ್ಲಿ ಪಂಚಪಲ್ಲವಗಳನ್ನು ಹಾಕಬೇಕು. ಮಾವು-ಬೇವು, ಅತ್ತಿ-ಅರಳಿ, ಆಲದ ಚಿಗುರುಗಳನ್ನು ಪಂಚಪಲ್ಲವ ಎನ್ನುತ್ತಾರೆ. ಇದರ ಜತೆಗೆ ಒಣ ದ್ರಾಕ್ಷಿ, ಒಣ ಖರ್ಜೂರ ಅಂದ್ರೆ ಉತ್ತುತ್ತೆ, ಮತ್ತು ಅಂಜೂರವನ್ನು ಕಳಸದ ನೀರಿಗೆ ಹಾಕಬೇಕು. ಅದಕ್ಕೆ ಎಲೆಯನ್ನು ಇರಿಸಿ, ನಿಮ್ಮ ಪದ್ಧತಿ ಪ್ರಕಾರ ಕಳಸ ಸ್ಥಾಪನೆ ಮಾಡಬೇಕು. ಆದರೆ ಯಾವ ಕಳಸ ಬಳಸಬೇಕು ಎಂದು ತಿಳಿಯಲು ಮತ್ತು ಹಬ್ಬದ ಬಗ್ಗೆ ಸಂಪೂರ್ಣ ಮಾಹಿತಿ ತಿಳಿಯಲು ವೀಡಿಯೋ ನೋಡಿ.

- Advertisement -

Latest Posts

Don't Miss