Dharwad News: ಧಾರವಾಡ ಜಿಲ್ಲಾ ಪಂಚಾಯತ್, ಕುಂದಗೋಳ ತಾಲೂಕು ಪಂಚಾಯಿತಿಗೆ ಮಣ್ಣೇರೆಚಿ 15ನೇ ಹಣಕಾಸು ಕಾಮಗಾರಿಯನ್ನು ಗ್ರಾಮ ಪಂಚಾಯಿತಿ ಸದಸ್ಯರ ಮಗ ಮಾಡಿ ತನ್ನ ಖಾತೆಗೆ ಬಿಲ್ ತೆಗೆದುಕೊಂಡಿದ್ದಾನೆ.
ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆ ಹಳ್ಳಿ ಹಳ್ಳಿಗಳ ಅಭಿವೃದ್ಧಿ ಲಕ್ಷ ಲಕ್ಷ ಹಣ ನೀಡುತ್ತಲಿದೆ. ಆ ಹಣದ ಕಾಮಗಾರಿಗಳನ್ನ ಸ್ವತಃ ಗ್ರಾಮ ಪಂಚಾಯಿತಿ ಸದಸ್ಯರೇ ಮಕ್ಕಳೇ ಮಾಡಿ ಮುಗಿಸಿ ಅವರೇ ಬಿಲ್ ಪಡೆಯುತ್ತಿದ್ದಾರೆ.
ಇದಕ್ಕೆ ತಾಜಾ ಉದಾಹರಣೆ ಧಾರವಾಡ ಜಿಲ್ಲೆ ಕುಂದಗೋಳ ತಾಲೂಕಿನ ಗುಡೇನಕಟ್ಟಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಕಡಪಟ್ಟಿ ಗ್ರಾಮದ ಮಾಜಿ ಉಪಾಧ್ಯಕ್ಷೆ ಹಾಲಿ ಸದಸ್ಯೆ ಸರೋಜವ್ವಾ ಕಾಳೆ ಅವರ ಎರಡನೇ ಸುಪುತ್ರ ಪ್ರವೀಣ್ ಕಾಳೆ ಗುಡೇನಕಟ್ಟಿ ಗ್ರಾಮ ಪಂಚಾಯಿತಿ 15ನೇ ಹಣಕಾಸು ಕಾಮಗಾರಿಯನ್ನು ಮಾಡಿ ತಾನೇ ತನ್ನ ಅಕೌಂಟ್’ಗೆ ಬಿಲ್ ಪಡೆದಿದ್ದಾನೆ.
ಚರಂಡಿ ಸ್ವಚ್ಛತೆ, ರಸ್ತೆಗೆ ಮೊಹರಂ ಹಾಕು ಕ್ರಮವಾದ ಕಾಮಗಾರಿಗಮಲ್ಲಿ 99.224 ರೂಪಾಯಿ, 88709 ರೂಪಾಯಿ, 60.735 ರೂಪಾಯಿ , 99224, ರೂಪಾಯಿ 88709 ರೂಪಾಯಿ ಸೇರಿ 4 ಲಕ್ಷ 36 ಸಾವಿರದಾ 601 ರೂಪಾಯಿ ತನ್ನ ಖಾತೆಗೆ ಜಮಾ ಮಾಡಿಕೊಂಡಿದ್ದಾನೆ.
ಇದಕ್ಕೆ ಈಗಾಗಲೇ ಅಮಾನತುಗೊಂಡಿರುವ ಗ್ರಾಮ ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ಧರ್ಮಪ್ರಸಾದ್ ಕಾಲವಾಡ ಡಿ.ಎಸ್.ಸಿ (ಡಿಜಿಟಲ್ ಸಿಗ್ನೇಚರ್) ಮಾಡಿ ಹಣ ಮಂಜೂರು ಮಾಡಿದ್ದಾರೆ.
ಇಷ್ಟೆಲ್ಲಾ ಹಣ ತೆಗೆದ ಸದಸ್ಯೆ ಸರೋಜವ್ವಾ ಕಾಳೆ ಮಗ ಪ್ರವೀಣ್ ಕಾಳೆ ಕುಟುಂಬದ ರೇಷನ್ ಕಾರ್ಡ್’ನಿಂದ ಇತ್ತಿಚಿಗೆ ತಾನೇ ರಿಮ್ಯೂ ಆಗಿರೋದು ವ್ಯಾಪಕ ಸಂಶಯ ಹುಟ್ಟಿಸಿದೆ.
ಗ್ರಾಮ ಪಂಚಾಯಿತಿ ಸದಸ್ಯರ ರಕ್ತ ಸಂಬಂಧಿಗಳು ಯಾರು ಗ್ರಾಮ ಪಂಚಾಯಿತಿ ಕಾಮಗಾರಿ ಅನುಷ್ಠಾನದಲ್ಲಿ ಭಾಗಿಯಾಗಬಾರದು ಎಂಬ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆ ಆದೇಶವಿದ್ದರೂ ಕುಂದಗೋಳ ತಾಲೂಕು ಕಡಪಟ್ಟಿ ಗ್ರಾಮದ ಸದಸ್ಯೆ ಸರೋಜವ್ವಾ ಕಾಳೆ ಅವರ ಮಗ ಪ್ರವೀಣ್ ಕಾಳೆ ತಾನೇ ಲಕ್ಷ ಲಕ್ಷ ಹಣ ತೆಗೆದಿದ್ದಾನೆ.
ಈ ಬಗ್ಗೆ ತಾಲೂಕು ಪಂಚಾಯಿತಿ ಕಾರ್ಯ ನಿರ್ವಾಹಕ ಅಧಿಕಾರಿ ಜಗದೀಶ್ ಕಮ್ಮಾರ್ ಗಪ್ ಚುಪ್ ಇರೋದು ಸಂಶಯಕ್ಕೆ ಎಡೆ ಮಾಡಿಕೊಟ್ಟದೆ, ಇದಲ್ಲದೆ ಹಾಲಿ ಗ್ರಾಮ ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ಸುರೇಶ್ ಸಿಂಗನಳ್ಳಿ 15ನೇ ಹಣಕಾಸು ಕಾಮಗಾರಿಯಲ್ಲಿ ಸದಸ್ಯರು ಮಗ ಭಾಗಿಯಾದ ಬಗ್ಗೆ ಏನು ಕ್ರಮ ಕೈಗೊಳ್ಳುತ್ತಾರೆ ಕಾದು ನೋಡಬೇಕಿದೆ.