ಮೊದಲ ದಿನ ಸಾಧಾರಣ ಓಪನಿಂಗ್ ಪಡೆದ ಸು ಫ್ರಮ್ ಸೋ ಚಿತ್ರ, ನಂತರದ ದಿನಗಳಲ್ಲಿ ಅಬ್ಬರಿಸಿತು. ದಿನ ಕಳೆದಂತೆ ಈ ಸಿನಿಮಾದ ಕ್ರೆಜ್ ಹೆಚ್ಚುತ್ತಿದೆ. ಕನ್ನಡ ಚಿತ್ರರಂಗವನ್ನು ಮತ್ತೊಮ್ಮೆ ತಲೆ ಎತ್ತೋ ಹಾಗೆ ತೋರಿಸಿದ ಚಿತ್ರ ‘ಸು ಫ್ರಮ್ ಸೋ’.
ರಾಜ್ ಬಿ ಶೆಟ್ಟಿ ನಿರ್ಮಾಣದ ಈ ಸಿನಿಮಾ, ಕೇವಲ 2 ವಾರಗಳಲ್ಲಿ ಕನ್ನಡದ ಮಾತ್ರವಲ್ಲ, ದಕ್ಷಿಣ ಭಾರತದ ಚಿತ್ರರಂಗದ ಮೇಲೆ ದೊಡ್ಡ ಪ್ರಭಾವ ಬೀರಿದೆ. ಸೋಶಿಯಲ್ ಮೀಡಿಯಾ ದಲ್ಲಿ ಭಾರಿ ಸದ್ದು ಮಾಡಿದೆ.
ಜುಲೈ 25ರಂದು ಸು ಫ್ರಮ್ ಸೋ ಸಿನೆಮಾ ತೆರೆಗೆ ಬಂತು. ರಾಜ್ ಬಿ ಶೆಟ್ಟಿ, ಈ ಬಾರಿ ನಿರ್ದೇಶಕ ಜೆಪಿ ತುಮಿನಾಡರ ಸಹಕಾರದಿಂದ, ವಿಶಿಷ್ಟ ಸಿನೆಮಾ ಮಾಡಿದ್ದಾರೆ. ಮೂಲತಃ ಕನ್ನಡದಲ್ಲಿ ಬಿಡುಗಡೆಯಾಗಿ, ನಂತರದ ದಿನಗಳಲ್ಲಿ ಚಿತ್ರ ಮಲಯಾಳಂ ಹಾಗೂ ತೆಲುಗು ಭಾಷೆಗಳಲ್ಲೂ ಬಿಡುಗಡೆಯಾಗಿದೆ. ಸದ್ಯ ಎರಡು ವಾರಗಳಲ್ಲಿ ಸಿನಿಮಾ ಎಷ್ಟು ಗಳಿಸಿದೆ ಅನ್ನೋದು ಕುತೂಹಲ ಮೂಡಿಸಿದೆ.
ಸು ಫ್ರಮ್ ಸೋ ಸಿನೆಮಾದ ವಿಶ್ವ ಬಾಕ್ಸ್ ಆಫೀಸ್ ಕಲೆಕ್ಷನ್ ₹57.5 ಕೋಟಿ.
ಇದರಲ್ಲಿ ಕನ್ನಡದಲ್ಲಿ ಒಟ್ಟಾರೆ ₹45.78 ಕೋಟಿ ಬಂದಿದೆ. ಮಲಯಾಳಂನಿಂದ ₹2 ಕೋಟಿ, ಮತ್ತು ವಿದೇಶೀಯ ಶೋಗಳಿಂದ ಕೂಡಾ ಲಕ್ಷಾಂತರ ರೂಪಾಯಿ ಹರಿದುಬಂದಿವೆ. 10ನೇ ದಿನ, ಭಾನುವಾರದಂದು ಸಿನಿಮಾ ₹6.15 ಕೋಟಿ ಗಳಿಸಿ ತನ್ನದಾಗಿ ಅತ್ಯಧಿಕ ದೈನಂದಿನ ಕಲೆಕ್ಷನ್ ಸಾಧಿಸಿದೆ.
‘ಸು ಫ್ರಮ್ ಸೋ’ ಸಿನಿಮಾ ಬಿಡುಗಡೆ ಆಗಿ ಎರಡು ವಾರಗಳಲ್ಲಿ ವಿಶ್ವದಾದ್ಯಂತ ಕೋಟಿ ಕೋಟಿ ಹಣ ಗಳಿಸಿದೆ. ಮುಂದಿನ ದಿನಗಳಲ್ಲಿ ಕಲೆಕ್ಷನ್ ಮತ್ತಷ್ಟು ಹೆಚ್ಚೋ ನಿರೀಕ್ಷೆ ಇದೆ. ಚಿತ್ರದ ಯಶಸ್ಸಿಗೆ ನಿರ್ಮಾಪಕರು ಮತ್ತು ತಂಡದ ಸದಸ್ಯರು ಧನ್ಯವಾದ ಹೇಳಿದ್ದಾರೆ.
ವರದಿ : ಲಾವಣ್ಯ ಅನಿಗೋಳ