- Advertisement -
Dharwad News: ಧಾರವಾಡ: ಧಾರವಾಡದ ಕೇಂದ್ರ ಕಾರಾಗೃಹದಲ್ಲಿ ಅಕ್ರಮ ಚಟುವಟಿಕೆ ಎಲ್ಲವೂ ಮುಂದವರೆದಿದ್ದು, ಇಲ್ಲಿ ದುಡ್ಡು ನೀಡಿದ್ರೆ, ಬೇಕಾದ ಕೆಲಸ ಮಾಡಲು ಅನುಮತಿ ನೀಡಲಾಗುತ್ತಿದೆ.
ದುಡ್ಡು ಕೊಟ್ರೆ ಮೋಬೈಲ್ ಪೋನ್, ಗಾಂಜಾ, ಸಿಗರೇಟು ಎಲ್ಲವೂ ಲಭ್ಯವಾಗುತ್ತಿದೆ. ಇದಕ್ಕೆ ಉತ್ತಮ ಉದಾಹರಣೆ ಅಂದ್ರೆ, ಯುವಕನ ಮೇಲೆ ಹಲ್ಲೆ ಮಾಡಿ ಜೈಲು ಸೇರಿದ್ದ ಜಮೀರ್ ಜಮ್ಮು ಎಂಬ ರೌಡಿ, ವೀಡಿಯೋ ಕಾಲ್ ಮಾಡಿ, ತನ್ನ ಬೆಂಬಲಿಗರ ಜತೆ ಮಾತನಾಡಿದ್ದಾರೆ.
ಇವನ ಬೆಂಬಲಿಗರು ಈ ವೀಡಿಯೋ ಕಾಲ್ ಸ್ಕ್ರೀನ್ ರೆಕಾರ್ಡಿಂಗ್ ಮಾಡಿ, ಅದನ್ನು ಸೋಶಿಯಲ್ ಮೀಡಿಯಾದಲ್ಲಿ ಹಾಕಿದ್ದಾರೆ. ಈ ಮೂಲಕ ಧಾರವಾಡ ಕಾರಾಗೃಹದಲ್ಲಿ ನಡೆಯುತ್ತಿರುವ ಕೆಲಸವೆಲ್ಲ ಬೆಳಕಿಗೆ ಬಂದಿದೆ.
ಧಾರವಾಡ ಉಪನಗರ ಪೋಲಿಸ್ ಠಾಣಾ ವ್ಯಾಪ್ತಿಯಲ್ಲಿ ಈ ಘಟನೆ ನಡೆದಿದ್ದು, ಈ ಬಗ್ಗೆ ಗೃಹಸಚಿವರು ಗಮನ ಹರಿಸಬೇಕಿದೆ.
- Advertisement -