ನಾವು ನಮ್ಮ ದೇವರ ಕೋಣೆಯಲ್ಲಿ ಇರಿಸುವಂಥ ಫೋಟೋಗಳು ಕೂಡ ನಮ್ಮ ಜೀವನದ ಮೇಲೆ ಪರಿಣಾಮ ಬೀರುತ್ತದೆ. ದೇವರ ಕೋಣೆಯಲ್ಲಿ ಯಾವ ಫೋಟೋವನ್ನಿರಿಸಬೇಕು, ಮತ್ತು ಯಾವ ವಸ್ತುಗಳು ದೇವರ ಕೋಣೆಯಲ್ಲಿಡಬಾರದು ಎಂಬುದರ ಬಗ್ಗೆ ಈ ಮೊದಲೇ ಹೇಳಿದ್ದೆವು. ಈಗ ಅದರ ಬಗ್ಗೆ ಇನ್ನಷ್ಟು ಮಾಹಿತಿಯನ್ನ ನೀಡಲಿದ್ದೇವೆ.

ಎಲ್ಲರಿಗೂ ಪ್ರಿಯನಾದ ಶ್ರೀರಾಮನ ಫೋಟೋವನ್ನ ದೇವರ ಕೋಣೆಯಲ್ಲಿಡೇಕಾದ್ರೆ ಅದಕ್ಕೆ ತಕ್ಕ ನಿಯಮವನ್ನ ಅನುಸರಿಸಬೇಕು. ಶ್ರೀರಾಮ ಒಬ್ಬನೇ ಇರುವ ಮೂರ್ತಿ ಅಥವಾ ಫೋಟೋವನ್ನ ದೇವರಕೋಣೆಯಲ್ಲಿರಿಸಬಾರದು. ರಾಮ ಕುಟುಂಬ ಸಮೇತನಾಗಿ ಅಂದರೆ, ಸೀತೆ ಲಕ್ಷ್ಮಣ, ಹನುಮಂತನ ಜೊತೆ ಇರುವ ಫೋಟೋವನ್ನ ದೇವರಕೋಣೆಯಲ್ಲಿಡಬಹುದು.
ಉಗ್ರಸ್ವರೂಪಿ ದೇವಿಯ ಫೋಟೋವನ್ನ ದೇವರಕೋಣೆಯಲ್ಲಿ ಇರಿಸಬಾರದು. ಹಾಗೇನಾದರೂ ಇಂಥ ಫೋಟೋವನ್ನ ಇರಿಸಿದರೂ ಕೂಡ ಅದಕ್ಕೆ ಇರುವ ನೀತಿ ನಿಯಮವನ್ನು ಪಾಲಿಸಬೇಕಾಗುತ್ತದೆ. ಉಪವಾಸ ಮಾಡುವುದು, ಅಭಿಷೇಕ, ಪೂಜೆ- ಪುನಸ್ಕಾರ ಮಾಡಬೇಕಾಗುತ್ತದೆ. ಇಲ್ಲದಿದ್ದರೆ ಮನೆಯಲ್ಲಿ ನಿತ್ಯ ಕಲಹ, ಸಾಲ ಸೋಲ ಆಗುವುದು ಇತ್ಯಾದಿ ಸಮಸ್ಯೆಗಳು ಉದ್ಭವಿಸುತ್ತದೆ. ಹಾಗಾಗಿ ದೇವರ ಕೋಣೆಯಲ್ಲಿ ಉಗ್ರಸ್ವರೂಪಿ ದೇವರ ಫೋಟೋ ಇರಿಸಕೂಡದು.
ಯಾವುದೇ ದೇವಿ ರಾಕ್ಷಸನ ಸಂಹಾರ ಮಾಡುವ ಫೋಟೋ ಅಥವಾ ದೇವಿ ಹುಲಿ ಅಥವಾ ಸಿಂಹದ ಮೇಲೆ ಕೂತಿರುವ ಫೋಟೋವನ್ನ ದೇವರಕೋಣೆಯಲ್ಲಿರಿಸಬೇಡಿ. ಇದರಿಂದ ಮನೆಜನರಲ್ಲಿ ಸಿಟ್ಟಿನ ಸ್ವಭಾವ ಜಾಸ್ತಿಯಾಗುತ್ತದೆ.
ಇನ್ನು ಶಾಂತಸ್ವರೂಪಿಯಾದ ನರಸಿಂಹ ತನ್ನ ತೊಡೆಯ ಮೇಲೆ ಲಕ್ಷ್ಮೀಯನ್ನ ಇರಿಸಿರುವಂಥ ಫೋಟೋವನ್ನ ದೇವರಕೋಣೆಯಲ್ಲಿರಿಸಬಹುದು. ಆದ್ರೆ ಉಗ್ರನರಸಿಂಹನ ಫೋಟೋವನ್ನ ಇರಿಸಕೂಡದು. ನಿಂತಿರುವ ಲಕ್ಷ್ಮೀ ಫೋಟೋ ಇಡುವುದು ಕೂಡ ಉತ್ತಮವಲ್ಲ. ಇದರಿಂದ ಮನೆಯಲ್ಲಿ ಖರ್ಚುವೆಚ್ಚಗಳು ಹೆಚ್ಚಾಗುತ್ತದೆ.

ಚಾಮುಂಡೇಶ್ವರಿ ದೇವಿ ಜ್ಯೋತಿಷ್ಯ ಕೇಂದ್ರ
ಪಂಡಿತ್ ಶುಕ್ಲಾಚಾರ್ಯು ಗುರೂಜಿ, ದೂರವಾಣಿ ಸಂಖ್ಯೆ: 9886868111
ನಿಮ್ಮ ಸಮಸ್ಯೆಗಳಾದ ಸ್ತ್ರೀ ಪುರುಷ ವಶೀಕರಣ, ಗಂಡ ಹೆಂಡತಿ ಸಮಸ್ಯೆ, ಸಾಲಬಾಧೆ, ವ್ಯಾಪಾರ, ಶತ್ರುನಾಶ, ಮಾಟಮಂತ್ರ, ಜನವಶ, ಧನವಶ ಯಾವುದೇ ಸಮಸ್ಯೆಗಳಿದ್ದರೂ ಕೇವಲ ಮೂರು ದಿನಗಳಲ್ಲಿ ಪರಿಹಾರ..




