ಶಾಸಕ ಅರವಿಂದ್ ಬೆಲ್ಲದ್ ಬರ್ತ್‌ಡೇ ಬ್ಯಾನರ್‌ನಲ್ಲಿದ್ದ ಅಧ್ಯಕ್ಷ ಮಹ್ಮದ್‌ ಶಫಿ ಭಾವಚಿತ್ರಕ್ಕೆ ಕಪ್ಪು ಮಸಿ..!

Dharwad News: ಧಾರವಾಡ: ಶಾಸಕ ಅರವಿಂದ ಬೆಲ್ಲದ ಅವರ ಹುಟ್ಟು ಹಬ್ಬಕ್ಕೆ ಶುಭಾಶಯ ಕೋರಿ ಬಿಜೆಪಿ ಅಲ್ಪಸಂಖ್ಯಾತರ ಮಂಡಲ ಮೋರ್ಚಾ ವತಿಯಿಂದ ಹಾಕಲಾಗಿದ್ದ ಬ್ಯಾನರ್‌ನಲ್ಲಿದ್ದ ಅಧ್ಯಕ್ಷ ಮಹ್ಮದ್‌ ಶಫಿ ಬಿಜಾಪುರಿ ಅವರ ಭಾವಚಿತ್ರಕ್ಕೆ ಕಿಡಿಗೇಡಿಗಳು ಕಪ್ಪು ಮಸಿ ಬಳಿದಿದ್ದರು. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಬಿಜೆಪಿ ಮುಖಂಡರು ಧಾರವಾಡ ಶಹರ ಠಾಣೆಗೆ ದೂರು ನೀಡಿದ್ದಾರೆ.

ಶಾಸಕ ಅರವಿಂದ ಬೆಲ್ಲದ ಅವರ ಹುಟ್ಟು ಹಬ್ಬಕ್ಕೆ ಶುಭಾಶಯ ಕೋರಿ ಧಾರವಾಡದ ಅಲ್ಲಲ್ಲಿ ಬ್ಯಾನರ್ ಹಾಕಲಾಗಿತ್ತು. ಅದರಲ್ಲಿ ಬಿಜೆಪಿ ಅಲ್ಪಸಂಖ್ಯಾತರ ಮಂಡಲ ಮೋರ್ಚಾ ಅಧ್ಯಕ್ಷ ಮಹ್ಮದ್‌ ಶಫಿ ಅವರ ಭಾವಚಿತ್ರ ಕೂಡ ಇತ್ತು. ಅವರ ಭಾವಚಿತ್ರಕ್ಕೆ ಕಿಡಿಗೇಡಿಗಳು ಕಪ್ಪು ಮಸಿ ಬಳಿದಿದ್ದರು.

ಧಾರವಾಡದ ಅಂಜುಮನ್ ಸರ್ಕಲ್ ಬಳಿ ಹಾಕಲಾಗಿದ್ದ ಬ್ಯಾನರ್‌ ನಲ್ಲಿನ ಭಾವಚಿತ್ರಕ್ಕೆ ಮಾತ್ರ ಕಿಡಿಗೇಡಿಗಳು ಕಪ್ಪು ಮಸಿ ಬಳಿದಿದ್ದರು. ಈ ಸಂಬಂಧ ಬಿಜೆಪಿ ಅಲ್ಪಸಂಖ್ಯಾತರ ಮಂಡಲ ಮೋರ್ಚಾ ವತಿಯಿಂದ ಪೊಲೀಸರಿಗೆ ದೂರು ನೀಡಲಾಗಿದೆ.

About The Author