Tuesday, October 7, 2025

Latest Posts

Spiritual: ರಾವಣನಿಗೆ ಹೆಣ್ಣನ್ನು ಮುಟ್ಟದಂತೆ ಶಾಪ ನೀಡಿದವರು ಯಾರು..?

- Advertisement -

Spiritual: ಇತ್ತೀಚಿನ ದಿನಗಳಲ್ಲಿ ರಾವಣನನ್ನು ದೇವರು ಅನ್ನೋ ರೀತಿ ಕೆಲವರು ನೋಡುತ್ತಾರೆ. ಆತ ಬ್ರಹ್ಮನ ಅಂಶವೇ ಆಗಿದ್ದರು, ಅವರು ಮಾಡಿದ್ದೆಲ್ಲವೂ ರಾಕ್ಷಸ ಕೃತ್ಯ. ಹಾಗಾಗಿಯೇ ಅವನಿಗೆ ಶ್ರೀರಾಮನಿಂದ ಸಾವು ಬಂದಿದ್ದು.

ಇನ್ನು ಯಾಕೆ ರಾವಣನನ್ನು ಉತ್ತಮನನ್ನಾಗಿ ತೋರಿಸುತ್ತಿದ್ದಾರೆಂದರೆ, ಆತ ಸೀತೆಯನ್ನು ಬರೀ ಅಪಹರಣ ಮಾಡಿದ್ದ. ಆದರೆ ಆಕೆಯ ಮೈ ಮುಟ್ಟಿರಲಿಲ್ಲವೆಂದು. ಆದರೆ ರಾವಣ ಆಕೆಯ ದೇಹ ಮುಟ್ಟದಿರಲು ಕಾರಣವಿತ್ತು. ಅದೇನೆಂದರೆ, ರಾವಣನಿಗೆ ಓರ್ವ ಶಾಪ ನೀಡಿದ್ದ. ಅದೇನು ಶಾಪ..? ಅದೇಕೆ ಶಾಪ ನೀಡಿದ್ದ ಅಂತಾ ತಿಳಿಯೋಣ ಬನ್ನಿ..

1 ದಿನ ಅಪ್ಸರೆಯಾಗಿದ್ದ ರಂಭಾ ತನ್ನ ಪತಿಯಾದ ನಳಕುಬೇರನನ್ನು ಭೇಟಿಯಾಗಲು ಹೋಗುತ್ತಿದ್ದಳು. ಆಗ ಆಕೆಗೆ ದಾರಿಗೆ ಅಡ್ಡವಾಗಿ ನಳಕುಬೇರ ಸಿಕ್ಕ. ಆಕೆಯ ಸೌಂದರ್ಯವನ್ನು ಕಂಡ ರಾವಣ, ಆಕೆಯ ಜತೆ ಅನುಚಿತವಾಗಿ ವರ್ತಿಸಲು ಶುರು ಮಾಡಿದ. ರಂಭಾ ಎಷ್ಟೇ ಬೇಡವೆಂದರೂ ಆಕೆಯ ಮಾನಹರಣ ಮಾಡಲು ಯತ್ನಿಸಿದ.

ರಂಭಾಗೆ ರಾವಣ ಮಾವನಾಗಬೇಕು. ಅಂದರೆ ತಂದೆ ಸಮಾನ. ಆದರೂ ರಾವಣ ಈ ರೀತಿ ನಡೆದುಕ“ಂಡಿದ್ದಕ್ಕಾಗಿ, ನಳಕುಬೇರನಿಗೆ ಕೋಪ ಬಂದು, ನೀನು ಇನ್ನು ಮುಂದೆ ಯಾವ ಹೆಣ್ಣನ್ನು ಮುಟ್ಟಿದರೂ ನಿನ್ನ ತಲೆ 100 ಹೋಳಾಗಲಿ ಎಂದು ಶಾಪ ನೀಡಿದ. ಇದೇ ಕಾರಣಕ್ಕೆ ರಾವಣ ಸೀತೆಯನ್ನು ಮುಟ್ಟಿರಲಿಲ್ಲ.

ರಾವಣ ಯಾರು..?

ದಶಾನನ ರಾವಣ ಬ್ರಹ್ಮನ ಮರಿ ಮಮ್ಮಗನಾಗಬೇಕು. ಬ್ರಹ್ಮನ ಮಗನ ಮಗನ ಮಗನೇ ರಾವಣ. Ravanaನ ತಂದೆ ಹೆಸರು vishrava muni. ಇವರು ಬ್ರಾಹ್ಮಣರಾಗಿದ್ದರು. ತಾಯಿ ರಾಕ್ಷಸ ಕುಲದವಳಾದ ಕೈಕಸಿ. ಕೈಕಸಿ ಮುಸ್ಸಂಜೆ ವೇಳೆಗೆ ವೈಶ್ರವ ಮುನಿಯ ಜತೆ ಸಂಭೋಗ ನಡೆಸಲು ಕೇಳಿದಳು. ಆದರೆ ಮುನಿಗಳು ಇದರಿಂದ ಉತ್ತಮ ಸಂತಾನ ಆಗುವುದಿಲ್ಲವೆಂದು ತಿಳಿಹೇಳುತ್ತಾರೆ. ಆದರೂ ಕೇಳದ ಕೈಕಸಿ ದೈಹಿಕ ಸಂಬಂಧಕ್ಕಾಗಿ ಪೀಡಿಸುತ್ತಾಳೆ.  ಹಾಗೆ ಜನಿಸಿದ ಸಂತಾನವೇ ಈ ರಾವಣ.

ರಾವಣ ಸಕಲ ಕಲಾವಲ್ಲದ. ಶಸ್ತ್ರ ವಿದ್ಯೆಯಿಂದ ಹಿಡಿದು, ಶಾಸ್ತ್ರ ವಿದ್ಯೆಯವರೆಗೂ ಎಲ್ಲ ಬಲ್ಲವ. ಆದರೆ ಆತನ ರಾಕ್ಷಸ ಬುದ್ಧಿಯಿಂದಲೇ ಆತ ದುರ್ಬುದ್ಧಿ ಕಲಿತು, ತನ್ನ ಸಾವಿಗೆ ತಾನೇ ಕಾರಣನಾದ.

- Advertisement -

Latest Posts

Don't Miss