Dharwad News: ಸರ್ಕಾರಿ ಸಾರಿಗೆ ಬಸ್ ನಿಲ್ದಾಣದಲ್ಲಿಯೇ ಬಸ್ ಬ್ರೆಕ್ ಫೆಲ್ ಆದ ಕಾರಣ ಎರಡು ಬಸ್‌ಗಳ ನಡುವೆ ಡಿಕ್ಕಿಯಾಗಿ ಎರಡು ಬಸ್ ಹಾನಿಯಾದ ಘಟನೆ ಧಾರವಾಡ ಕೇಂದ್ರೀಯ ಪ್ರಾದೇಶಿಕಬಸ್ ನಿಲ್ದಾಣದಲ್ಲಿ ಇಂದು ನಡೆದಿದ್ದು, ಬಾರಿ ಅನಾಹುತವೊಂದು ತಪ್ಪಿದೆ.
ಹೌದು.. ಧಾರವಾಡ ಹಳೇ ಬಸ್ ನಿಲ್ದಾಣದಲ್ಲಿ ಈ ಘಡನೆ ಸಂಭವಿಸಿದ್ದು, ಅದೃಷ್ಟವಶಾತ್ ಯಾವುದೇ ಪ್ರಾಣ ಹಸನಿ ಸಂಭವಿಸಿಲ್ಲ. ಇನ್ನೂ ಅಪಘಾತಗೊಂಡ ಎರಡು ಬಸ್‌ಗಳು ಹಿಂದೆ ಮುಂದೆ ಬೇರೆ ಊರುಗಳಿಗೆ ತೆರಳಲು ನಿಲ್ದಾಣದಲ್ಲಿ ನಿಲ್ಲಿಸಲಾಗಿತ್ತು. ಆದರೆ ಮುಂದೆ ನಿಂತಿದ್ದ ಸಾರಿಗೆ ಬಸ್ ಬ್ರೆಕ್ ಪೇಲ್ ಆದ ಕಾರ ಉರುಳಿ ಬಂದು ಹಿಂಬದಿಯ ಬಸ್‌ಗೆ ಡಿಕ್ಕಿಯಾಗಿದೆ. ಇದರಿಂದಾಗಿ ಎರಡು ಬಸಗಳಿಗೆ ಹಾನಿಯಾಗಿದೆ.
ಇನ್ನೂ ಘಟನೆ ಸಂಭವಿಸುವ ವೇಳೆ ಬಸ್ ಹತ್ತಲು ಹೋಗಿದ್ದ ಓರ್ವ ಮಹಿಳೆ ಸಣ್ಣಪುಟ್ಟ ಗಾಯವಾಗಿದೆ ಎಂದು ಹೇಳಲಾಗುತ್ತದೆ. ಜನನಿಬಿಡ ಹೊಂದಿರುವ ಬಸ್ ನಿಲ್ದಾಣದಲ್ಲಿ ಘಟನೆ ಸಂಭವಿಸಿದ್ದು, ಯಾರಾದರೂ ಪ್ರಾಣ ಕಳೆದುಕೊಂಡಿದ್ದರೆ ಯಾರು ಹೊಣೆ ಎಂಬುವುದು ಸ್ಥಳೀಯ ಪ್ರಯಾಣಿಕರು ಪ್ರಶ್ನೆಯಾಗಿದೆ.
ಕಳೆ ದಿನವಷ್ಟೇ ಧಾರವಾಡ ಜೆಎಸ್ಎಸ್ ಬಳಿ ಹೆಚ್ ಡಿ ಬಿಆರ್‌ಟಿಎಸ್ ಚಿಗರಿ ಬಸ್ ಬ್ರೆಕ್ ಫೆಲ್ ಆಗಿ ಕಾಲೇಜ ಆವರಣಕ್ಕೆ ನುಗ್ಗಿದ ಘಟನೆ ಮಾಸುವ ಮುನ್ನವೇ ಇಂದು ಮತ್ತೊಂದು ಘಟನೆ ಸಂಬಂವಿಸಿದ್ದರಿಂದ ಅವಳಿ ನಗರ ಪ್ರಯಾಣಿಕ ರಲ್ಲಿ ಆತಂಕ ತಂದೊಡ್ಡಿದೆ. ಧಾರವಾಡ ಸಂಚಾರಿ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಘಟನೆ ಸಂಭವಿಸಿದೆ.