Special Interview: ಚಿತ್ರಾಲ್ ರಂಗಸ್ವಾಮಿ. ಸೋಶಿಯಲ್ ಮೀಡಿಯಾದಲ್ಲಿ ಸಖತ್ ಮಿಂಚುತ್ತಿರುವ ಇವರು, ಕಿರುತೆರೆ ಕಲಾವಿದೆ. ಕರ್ನಾಟಕ ಟಿವಿ ಜತೆ ಇವರು ಮಾತನಾಡಿದ್ದು, ತಮ್ಮ ಜೀವನದ ಬಗ್ಗೆ ಮತ್ತು ಸಿನಿ ಪಯಣದ ಬಗ್ಗೆ ಮಾತನಾಡಿದ್ದಾರೆ.
ಚಿತ್ರಾಲ್ ರಂಗಸ್ವಾಮಿ ಮುಂಗಾರುಮಳೆ ಸಿನಿಮಾದಲ್ಲಿ ನಟನೆ ಮಾಡಿದ್ರು. ಆದರೆ ಅದಾದ ಬಳಿಕ ಅವರಿಗೆ ಯಾವ ಅವಕಾಶವೂ ಸಿಗಲಿಲ್ಲ. ಆಗಲೇ ಸಿನಿರಂಗದಲ್ಲಿ ಚಾನ್ಸ್ ಸಿಗೋದು ಸುಲಭವಲ್ಲ ಅನ್ನೋ ಸತ್ಯ ತಿಳಿದಿದ್ದು ಅಂತಾರೆ ಚಿತ್ರಾಲ್.
ಅದಾದ ಬಳಿಕ ಹಲವು ಆಡಿಷನ್ ನೀಡೋದು ಬೆಂಗಳೂರಿನಿಂದ ಮೈಸೂರಿಗೆ ಹೋಗೋದು ಇದೇ ಚಿತ್ರಾಲ್ ಕೆಲಸವಾಗಿತ್ತು. ಅದಾಗಲೇ ಸಿನಿಮಾದಲ್ಲೇ ಕೆಲಸ ಮಾಡಬೇಕು ಅಂತಾ ಡಿಸೈಡ್ ಆಗಿದ್ದ ಚಿತ್ರಾಲ್‌ಗೆ ಬೇರೆ ಕೆಲಸಕ್ಕೆ ಹೋಗಲು ಆಸೆಯೂ ಇರಲಿಲ್ಲ. ಬಳಿಕ ಚಿತ್ರಾಲ್ ಬೇರೆ ಬೇರೆ ಆಲ್ಬಮ್ ಸಾಂಗ್ಸ್, ಗಣೇಶೋತ್ಸವ ಕಾರ್ಯಕ್ರಮ ಸೇರಿ ಬೇರೆ ಬೇರೆ ಕಾರ್ಯಕ್ರಮದಲ್ಲಿ ಪರ್ಫಾರ್ಮ್ ಮಾಡುತ್ತಿದ್ದರು.
ಬಳಿಕ ಅವರಿಗೆ ಎಸ್‌ಎಲ್‌ಸಿ ನನ್ಮಕ್ಳು ಸಿನಿಮಾ ಸೇರಿ, ಬೇರೆ ಬೇರೆ ಸಿರಿಯಲ್‌ನಲ್ಲಿ ನಟಿಸಲು ಅವಕಾಶ ಸಿಕ್ಕಿತು. ಚಿತ್ರಾಲ್ ಸಿನಿಜರ್ನಿಯ ಕುತೂಹಲಕಾರಿ ವಿಷಯ ತಿಳಿಯಲು ಈ ವೀಡಿಯೋ ನೋಡಿ.