Friday, October 31, 2025

Latest Posts

ಧರ್ಮಸ್ಥಳದ ವಿರುದ್ಧ ಅವಹೇಳನಕಾರಿ ಹೇಳಿಕೆ ಆರೋಪ: ಮಟ್ಟಣ್ಣನವರ್, ಯೂಟ್ಯುಬರ್ ವಿರುದ್ಧ ದೂರು

- Advertisement -

Hubli News: ಹುಬ್ಬಳ್ಳಿ: ಧರ್ಮಸ್ಥಳದಲ್ಲಿ ಮಹಿಳೆಯರನ್ನು ಹತ್ಯೆ ಮಾಡಿ, ಅವರ ಶವವನ್ನು ಹೂತಿಡಲಾಗಿದೆ. ಅದನ್ನು ಹೂತಿರಿಸಿದ್ದು ನಾನೇ ಎಂದು ಅನಾಮಿಕ ಬಂದಿದ್ದು, ಕೆಲವು ಕಡೆ ಕಾರ್ಯಾಚರಣೆ ನಡೆದಿದೆ. ಈ ಮಧ್ಯೆ ಸುಮ್ಮ ಸುಮ್ಮನೆ ಧರ್ಮಸ್ಥಳದ ಹೆಸರನ್ನು ಹಾಳು ಮಾಡಲಾಗುತ್ತಿದೆ ಎಂದು ಆರೋಪಿಸಿ, ಗಿರೀಶ್ ಮಟ್ಟಣ್ಣನವರ್ ಮತ್ತು ಯೂಟ್ಯುಬರ್ ವಿರುದ್ಧ ಹುಬ್ಬಳ್ಳಿಯಲ್ಲಿ ದೂರು ದಾಖಲಿಸಲಾಗಿದೆ.

ಸಾಮಾಜಿಕ ಹೋರಾಟಗಾರ ಗಿರೀಶ್ ಮಟ್ಟೆಣ್ಣವರ, ಕುಡ್ಲಾ ರ‌್ಯಾಮ್ಪೇಜ್ ಯೂಟ್ಯೂಬ್ ಚಾನೆಲ್ ಮಾಲೀಕನ ವಿರುದ್ಧ, ಹುಬ್ಬಳ್ಳಿ ಗ್ರಾಮೀಣ ಪೊಲೀಸ್ ಠಾಣೆಯಲ್ಲಿ ಜೈನ್ ಸಮಾಜದ ಮುಖಂಡ ಅಜೀತ್ ಬಸಾಪುರ ದೂರು ದಾಖಲಿಸಿದ್ದಾರೆ. ಗಿರೀಶ್ ಮಟ್ಟೆಣ್ಣವರ ಜೈನ್ ಧರ್ಮದ ಬಗ್ಗೆ ಅವಹೇಳನಕಾರಿ ಮಾತನಾಡುತ್ತಿದ್ದಾರೆ. ಜೈನ್ ಧರ್ಮೀಯರು ಕ್ರೂರಿಗಳು,ಸ್ತ್ರೀಲೋಲರು, ಮತಾಂಧರು ಇತ್ಯಾದಿ ಪದ ಬಳಕೆ ಮಾಡಿದ್ದಾರೆ.

ಈ ಹೇಳಿಕೆಯನ್ನ ವರದಿ ಮಾಡಿದ್ದ ಕುಡ್ಲಾ ರ‌್ಯಾಮ್ಪೇಜ್ ಯೂಟ್ಯೂಬ್ ಚಾನೆಲ್ ಮಾಲೀಕ ಆಧಾರ ರಹಿತ್ ಹೇಳಿಕೆ ಪ್ರಸಾರ ಮಾಡಿದ್ದಾರೆ. ಅದಕ್ಕಾಗಿ ಗಿರೀಶ ಮಟ್ಟೆಣ್ಣವರ, ಯೂಟ್ಯೂಬರ್ ವಿರುದ್ಧ FIR no: 01/2025 ಕಲಂ: 299, 196(1)(ಎ) ಬಿ. ಎನ್. ಎಸ್ 2023 ಅಡಿಯಲ್ಲಿ ದೂರು ದಾಖಲಿಸಲಾಗಿದೆ.

- Advertisement -

Latest Posts

Don't Miss