Friday, August 29, 2025

Latest Posts

K.N ರಾಜಣ್ಣ ವಜಾ – ಡಿಕೆಶಿ ಕಾರಣನಾ?

- Advertisement -

ಕಾಂಗ್ರೆಸ್ ಪಕ್ಷದ ಬೆಳವಣಿಗೆಗಳು ಕ್ಷಣಕ್ಕೊಂದು ರಾಜಕೀಯ ಬೆಳವಣಿಗೆಗಳಿಗೆ ಕಾರಣವಾಗುತ್ತಿದೆ. ಸಿದ್ದು-ಡಿಕೆಶಿ ನಡುವೆ ಆಂತರಿಕ ಬಿಕ್ಕಟ್ಟು, ರಾಜ್ಯ ಕಾಂಗ್ರೆಸ್‌ ಪಾಳಯದಲ್ಲಿ ರಾಜೀನಾಮೆ ಪರ್ವ ಇದೀಗ ಬಿಜೆಪಿಗೆ ಬ್ರಹ್ಮಾಸ್ತ್ರವಾಗಿದೆ. ವಿರೋಧ ಪಕ್ಷದ ನಾಯಕ ಆರ್ ಅಶೋಕ್ ಅವರು ಕೆ.ಎನ್ ರಾಜಣ್ಣ ಅವರ ರಾಜೀನಾಮೆ ವಿಷಯದಲ್ಲಿ ತೀಕ್ಷ್ಣವಾದ ಪ್ರತಿಕ್ರಿಯೆ ಮಾಡಿದ್ದಾರೆ.

ಕೆ.ಎನ್ ರಾಜಣ್ಣ ರಾಜೀನಾಮೆ, ಮತ್ತು ಇದರ ಹಿಂದಿರುವ ರಾಜಕೀಯ ಪ್ರಚೋದನೆಗಳ ಕುರಿತಂತೆ ವಿರೋಧ ಪಕ್ಷದ ನಾಯಕ ಆರ್. ಅಶೋಕ್ ತೀವ್ರ ವಾಗ್ದಾಳಿ ನಡೆಸಿದ್ದಾರೆ. ವಿರೋಧ ಪಕ್ಷದ ನಾಯಕ ಆರ್ ಅಶೋಕ್ ಮಾಧ್ಯಮಗಳೊಂದಿಗೆ ಮಾತನಾಡುತ್ತಾ ತೀವ್ರ ಪ್ರತಿಕ್ರಿಯೆ ನೀಡಿದ್ದಾರೆ. ಅಕ್ಟೋಬರ್‌ನಲ್ಲಿ ಕ್ರಾಂತಿ ಆಗುತ್ತದೆ ಎಂದು ನಾನು ಈಗಾಗಲೇ ಹೇಳಿದ್ದೆ. ಈಗ ಕಾಣಿಸುತ್ತಿರುವುದು ಕ್ರಾಂತಿಯ ಮೊದಲ ಸೂಚನೆಗಳು. ಸದಾ ಸಿದ್ದರಾಮಯ್ಯ ಪರ ಬ್ಯಾಟು ಬೀಸುತ್ತಿದ್ದ ರಾಜಣ್ಣ ಅವರು ಈಗ ಹೈಕಮಾಂಡ್ ಸೂಚನೆಯ ಮೇರೆಗೆ ರಾಜೀನಾಮೆ ನೀಡಿದ್ದಾರೆ.

ಆರ್ ಅಶೋಕ್ ಪ್ರಕಾರ, ಈ ರಾಜೀನಾಮೆ ಏಕಾಏಕಿ ಆಗಿಲ್ಲ. ಡಿಸಿಎಂ ಡಿ.ಕೆ. ಶಿವಕುಮಾರ್ ಈಗ ಕಾಂಗ್ರೆಸ್‌ನಲ್ಲಿ ಬಲಾಢ್ಯ ಆಗ್ತಿದ್ದಾರೆ. ಹಿಂದುಳಿದ ವರ್ಗ ವರದಿಯನ್ನು ಡಿಕೆ ರದ್ದು ಮಾಡಿಸಿದರು. ಅದರಿಂದ ಸಿದ್ದರಾಮಯ್ಯನವರಿಗೆ ದೊಡ್ಡ ಮುಖಭಂಗವಾಯಿತು. ಪ್ರತಿ ದಿನ ಸಿದ್ದು ಪರ ರಾಜಣ್ಣ ಬ್ಯಾಟಿಂಗ್‌ ಮಾಡ್ತಿದ್ರು. ಈಗ ಸಿದ್ದರಾಮಯ್ಯ ಪರ ಇರುವ ರಾಜಣ್ಣ ವಜಾಗೊಂಡಿದ್ದಾರೆ.

ಮತಗಳ್ಳತನ ವಿರುದ್ಧ ರಾಜಣ್ಣ ಸತ್ಯ ಹೇಳಿದ್ರು. ಸತ್ಯ ಹೇಳಿದ ತಕ್ಷಣ ಮೆಣಸಿನಕಾಯಿ ಬಿದ್ದಂತೆ ಉರಿ ಶುರುವಾಗಿದೆ. ಕಾಂಗ್ರೆಸ್‌ನಲ್ಲಿ ಭವಿಷ್ಯದಲ್ಲಿನ ಪ್ರಳಯದ ಮುನ್ಸೂಚನೆ ಎದ್ದು ಕಾಣಿಸ್ತಾಯಿದೆ. ಸತ್ಯ ಹೇಳಿದ್ರೆ ಕಾಂಗ್ರೆಸ್ಸಿರಿಗೆ ಆಗಲ್ಲ. ಅಂತ ವಿಪಕ್ಷ ನಾಯಕ ಆರ್‌. ಅಶೋಕ್‌ ಕಾಂಗ್ರೆಸ್ ನ ಕಾಲೆಳೆದಿದ್ದಾರೆ.

ಸಿಎಂ ಸಿದ್ದರಾಮಯ್ಯ ಕುರ್ಚಿಯ 2 ಕಾಲು ಕಿತ್ತಾಯ್ತು. ಈಗ ಇನ್ನೆರಡು ಕಾಲು ಉಳಿದಿವೆ. 3ನೇ ಕಾಲನ್ನು ಕಿತ್ತರೆ ಸಿದ್ದರಾಮಯ್ಯ ಕುರ್ಚಿ ಬಿದ್ದೇ ಬೀಳುತ್ತದೆ ಅಂತ ರಾಜಕೀಯ ಅರ್ಥವಿರುವ ಹೇಳಿಕೆ ನೀಡಿದ್ದಾರೆ. ಡಿಕೆಶಿಗೆ ಸಿಎಂ ಆಗುವ ಕನಸು ಇದೆ. ಸಿದ್ದು ಆಪ್ತರ ರಾಜೀನಾಮೆಗೆ ಡಿಕೆಶಿ ಪರೋಕ್ಷವಾಗಿ ಗೇಮ್‌ಪ್ಲಾನ್ ಮಾಡಿದ್ದಾರಾ ಅನ್ನೋದು ಗೊತ್ತಿಲ್ಲ. ಕೆ.ಎನ್ ರಾಜಣ್ಣ ಅವರ ದಿಢೀರ್ ರಾಜೀನಾಮೆ ಸಿಎಂ ಸಿದ್ದರಾಮಯ್ಯ ಅವರಿಗೆ ಶಾಕ್ ಆಗಿರೋದಂತೂ ಸುಳ್ಳಲ್ಲ.

ವರದಿ : ಲಾವಣ್ಯ ಅನಿಗೋಳ

- Advertisement -

Latest Posts

Don't Miss