Saturday, July 12, 2025

Latest Posts

ಎಸ್‌ಪಿಬಿಗೂ ಕೊರೊನಾ, ಬಾಬ್ರಿ ಮಸೀದಿ ಬಗ್ಗೆ ಓವೈಸಿ ಟ್ವೀಟ್, ರಾಣಾ ಮದುವೆಗೆ 30 ಮಂದಿಗಷ್ಟೇ ಆಹ್ವಾನ..!

- Advertisement -

ಸತತ ಎರಡು ಬಾರಿ ಶಾಸಕರಾಗಿದ್ದ ಸತ್ಯನಾರಾಯಣ್ ಕೊನೆಯುಸಿರೆಳೆದಿದ್ದು, ಪಿತ್ತಜನಕಾಂಗ ಕಾಯಿಲೆಯಿಂದ ಬಳಲುತ್ತಿದ್ದ ಶಾಸಕರು ಮಣಿಪಾಲ್ ಆಸ್ಪತ್ರೆ ನಿರ್ದೇಶಕರು ಮನೀಶ್ ರೈ ಶಾಸಕ ಸತ್ಯನಾರಾಯಣ ನಿಧನವನ್ನ ಖಚಿತ ಪಡಿಸಿದ್ದಾರೆ. ಮಾಜಿ ಪ್ರಧಾನಿ ದೇವೇಗೌಡ, ಮಲ್ಲಿಕಾರ್ಜುನ ಖರ್ಗೆ ಸೇರಿ ಹಲವು ರಾಜಕೀಯ ಮುಖಂಡರು ಅಂತಿಮ ದರ್ಶನ ಪಡೆದಿದ್ದಾರೆ.

ಗಾಯಕ ಎಸ್‌.ಪಿ.ಬಾಲಸುಬ್ರಹ್ಮಣ್ಯಂಗೂ ಕೊರೊನಾ ಬಂದಿದ್ದು, ಈ ಬಗ್ಗೆ ಸ್ವತಃ ಎಸ್‌ಪಿಬಿ ಫೇಸ್‌ಬುಕ್‌ನಲ್ಲಿ ಹೇಳಿಕೆ ಕೊಟ್ಟಿದ್ದಾರೆ. ನನಗೆ ಸ್ವಲ್ಪ ಜ್ವರವಿದ್ದು, ನಾನು ವೈದ್ಯರಲ್ಲಿ ಹೋಗಿ ಪರೀಕ್ಷಿಸಿಕೊಂಡ ಬಳಿಕ ನನಗೆ ಕೊರೊನಾ ಪಾಸಿಟಿವ್ ಎಂದು ತಿಳಿದು ಬಂದಿದೆ. ನನಗೆ ಮನೆಯಲ್ಲೇ ಕ್ವಾರಂಟೈನ್ ಆಗಿರಲು ಸೂಚಿಸಿದ್ದರು. ಆದ್ರೆ ನಾನು ಆಸ್ಪತ್ರೆಯಲ್ಲಿ ಬಂದು ಚಿಕಿತ್ಸೆ ಪಡಿಯುತ್ತಿದ್ದೇನೆ ಎಂದು ಹೇಳಿದ್ದಾರೆ.

ಬಾಬ್ರಿ ಮಸೀದಿ ಬಗ್ಗೆ ಅಸಾವುದ್ದೀನ್ ಓವೈಸಿ ಟ್ವೀಟ್ ಮಾಡಿದ್ದು, ಬಾಬ್ರಿ ಮಸೀದಿ ಇದ್ದೇ ಇರುತ್ತೆ, ಅಂದು ಇತ್ತು ಇಂದೂ ಇರತ್ತೆ ಎಂದಿದ್ದಾರೆ. ಅಲ್ಲದೇ ನಿನ್ನೆ ಪ್ರಿಯಾಂಕಾ ವಾದ್ರಾ ಶ್ರೀರಾಮ ಎಲ್ಲರೊಂದಿಗೆ ಇದ್ದಾನೆ ಎಂದು ಟ್ವೀಟ್ ಮಾಡಿದ್ದರ ಬಗ್ಗೆಯೂ ಓವೈಸಿ ಆಕ್ರೋಶ ಹೊರಹಾಕಿದ್ದಾರೆ.

ಬಾಹುಬಲಿ ಸಿನಿಮಾದ ಬಲ್ಲಾಳದೇವ ಖ್ಯಾತಿ ರಾಣಾದಗ್ಗುಬಾಟಿ ಆಗಸ್ಟ್ 8 ರಂದು ವೈವಾಹಿಕ ಜೀವನಕ್ಕೆ ಕಾಲಿಡುತ್ತಿದ್ದು, ಇವರ ಮದುವೆಗೆ 30 ಜನರನ್ನಷ್ಟೇ ಇನ್ವೈಟ್ ಮಾಡಿದ್ದಾರೆ. ವಧು ವರರ ಸಂಬಂಧಿಕರಷ್ಟೇ ಮದುವೆಗೆ ಹಾಜರಾಗಲಿದ್ದು, ಕೊರೊನಾ ಕಾರಣವಾಗಿ ಈ ನಿರ್ಧಾರ ಕೈಗೊಳ್ಳಲಾಗಿದೆ. ಇನ್ನು ರಾಣಾ ಮತ್ತು ಮಿಹಿಕಾ ಇದೇ ಮೇನಲ್ಲಿ ಎಂಗೇಜ್‌ಮೆಂಟ್ ಮಾಡಿಕೊಂಡಿದ್ದರು.

ಲಾಕ್‌ಡೌನ್ ಟೈಮಲ್ಲಿ ಹಲವು ಸೆಲೆಬ್ರಿಟಿಗಳ ಖಾತೆ ಹ್ಯಾಕ್ ಆಗಿದ್ದು ಎಲ್ಲರಿಗೂ ಗೊತ್ತೇ ಇದೆ. ಕೆಲವರ ಇನ್‌ಸ್ಟಾಗ್ರಾಮ್ ಆದ್ರೆ ಇನ್ನು ಕೆಲವರ ಟ್ವೀಟರ್, ಫೇಸ್ಬುಕ್ ಹೀಗೆ ಎಲ್ಲ ಖಾತೆಗಳು ಹ್ಯಾಕ್ ಆಗಿದ್ದವು. ಇದೀಗ ನಟಿ ಶಾನ್ವಿ ಶ್ರೀವಾತ್ಸವ್‌ ಅವರ ಫೇಸ್‌ಬುಕ್‌ ಖಾತೆಯನ್ನ ಕೂಡ ಯಾರೋ ಕಿಡಿಗೇಡಿಗಳು ಹ್ಯಾಕ್ ಮಾಡಿದ್ದಾರಂತೆ. ಈ ಬಗ್ಗೆ ಸ್ವತಃ ಶಾನ್ವಿ ಶ್ರೀವಾತ್ಸವ್ ಟ್ವೀಟ್ ಮೂಲಕ ತಿಳಿಸಿದ್ದಾರೆ.

- Advertisement -

Latest Posts

Don't Miss