Health Tips: ರಾತ್ರಿ ನಾವು ಸೇವಿಸುವ ಆಹಾರಕ್ಕೂ, ನಿದ್ರೆಗೂ ಏನು ಸಂಬಂಧ..?

Health Tips: ನಿಮಗೆ ಸರಿಯಾಗಿ ನಿದ್ದೆ ಬರುತ್ತಿಲ್ಲ. ರಾತ್ರಿಯಿಡೀ ಪದೆ ಪದೆ ಎಚ್ಚರಾಗುತ್ತಿದೆ. ಎಷ್ಟೇ ಪ್ರಯತ್ನಿಸಿದರೂ ನಿದ್ರೆ ಬರುತ್ತಿಲ್ಲ ಎಂದಲ್ಲಿ, ನೀವು ಸೇವಿಸಿದ ಆಹಾರದಲ್ಲೇನೋ ಸಮಸ್ಯೆ ಇದೆ ಎಂದರ್ಥ. ಹಾಗಾದ್ರೆ ರಾತ್ರಿ ನಾವು ಸೇವಿಸುವ ಆಹಾರಕ್ಕೂ ನಿದ್ರೆಗೂ ಏನು ಸಂಬಂಧವೆಂದು ತಿಳಿಯೋಣ ಬನ್ನಿ..

ಮಸಾಲೆಯುಕ್ತ ಆಹಾರ: ನಾವು ಮಲಗುವ ಮುನ್ನ ಖಾರ ಖಾರವಾದ ಅಥವಾ ಮಸಾಲೆಯುಕ್ತ ಆಹಾರವಾಗಿರುವ ಬಿರಿಯಾನಿ, ಪುಲಾವ್, ಕರ್ರಿ ಹೀಗೆ ಇಂಥ ಆಹಾರ ಸೇವನೆ ಮಾಡಿ, ರಾತ್ರಿ ನಿದ್ರಿಸಿದರೆ, ನಮಗೆ ಗಾಢವಾದ, ಆರೋಗ್ಯಕರವಾಗಿರುವ ನಿದ್ದೆ ಬರಲು ಸಾಧ್ಯವಿಲ್ಲ. ಏಕೆಂದರೆ ಇಂಥ ಆಹಾರ ಜೀರ್ಣಕ್ರಿಯೆಯನ್ನು ನಿಧಾನವಾಗಿಸುತ್ತದೆ. ಮತ್ತು ಎದೆ ಉರಿ, ಉದರ ಸಮಸ್ಯೆ ಬರುವಂತೆ ಮಾಡುತ್ತದೆ. ಹಾಗಾಗಿ ರಾತ್ರಿ ಮಲಗುವ ವೇಳೆ ನೀವು ಖಾರವಲ್ಲದ, ಸಪ್ಪೆಯಾದರೂ ಆರೋಗ್ಯವಾಗಿರುವ ಆಹಾರ ಸೇವನೆ ಮಾಡುವುದು ಉತ್ತಮ.

ಎರಡನೇಯದಾಗಿ ಕಾಫಿ ಅಥವಾ ಚಹಾ. ನೀವು ರಾತ್ರಿ ಮಲಗುವಾಗ ಯಾವಾಗಲೂ ಹಾಲು ಕುಡಿದು ಮಲಗಬೇಕು. ಅದರಲ್ಲೂ ಬಿಸಿ ಬಿಸಿಯಾಗಿರುವ ಹಾಲು ಕುಡಿಯಬೇಕು. ಆದರೆ ನೀವು ಕಾಫಿ ಅಥವಾ ಚಹಾ ಸೇವನೆ ಮಾಡಿ, ನಿದ್ರಿಸಬೇಕು ಎಂದಿದ್ದರೆ, ಆ ಕಾಫಿ ಅಥವಾ ಚಹಾದಲ್ಲಿರುವ ಕೆಫೆನ್ ನಿಮ್ಮ ನಿದ್ದೆಯನ್ನು ಹಾಳು ಮಾಡುತ್ತದೆ. ಹಾಗಾಗಿಯೇ ರಾತ್ರಿ ಕೆಲಸ ಮಾಡುವವರು ನಿದ್ರೆಗೆಡಬೇಕು ಎಂಬ ಕಾರಣಕ್ಕಾಗಿಯೇ ಹೆಚ್ಚಾಗಿ, ಚಹಾ, ಕಾಫಿ ಸೇವಿಸುತ್ತಾರೆ.

ಮೂರನೇಯದಾಗಿ ಕುಕೀಸ್, ಕೇಕ್, ಚಾಕೋಲೆಟ್ಸ್ ಸೇರಿ ಇತರೆ ಸಿಹಿ ತಿಂಡಿಗಳನ್ನು ನೀವು ರಾತ್ರಿ ಸೇವಿಸುವುದನ್ನು ಅವೈಡ್ ಮಾಡಬೇಕು. ಇದರಿಂದ ನಿದ್ರೆ ಸರಿಯಾಗಿ ಬರದಿರುವುದಲ್ಲದೇ, ನಿಮ್ಮ ದೇಹದ ತೂಕವೂ ಅನಾರೋಗ್ಯಕರ ರೀತಿಯಿಂದ ಹೆಚ್ಚಾಗುತ್ತದೆ. ಹಾಗಾಗಿ ರಾತ್ರಿ ಹೆಚ್ಚು ಸಿಹಿ ತಿಂಡಿ ಸೇವಿಸಬೇಡಿ.

About The Author