Mandya News: ಶಾಲೆಯಲ್ಲಿ ಮಕ್ಕಳಿಗೆ ಪೌಷ್ಠಿಕಾಂಶದ ಸಮಸ್ಯೆ ಬಾರದಿರಲಿ ಎಂದು ಆರೋಗ್ಯಕರ ಆಹಾರ ನೀಡುವ ಸಲುವಾಗಿ, ತತ್ತಿ, ಕಡ್ಲೆ ಮಿಠಾಯಿ ಮತ್ತು ಬಾಳೆಹಣ್ಣು ನೀಡಲಾಗುತ್ತಿದೆ. ತತ್ತಿ ತಿನ್ನದ ಮಕ್ಕಳಿಗಾಗಿ ಬಾಳೆಹಣ್ಣು ಮತ್ತು ಕಡ್ಲೆ ಮಿಠಾಯಿ ನೀಡಲಾಗುತ್ತಿದೆ. ಆದೆ ಮಂಡ್ಯದ ಶಾಲೆಯ“ಂದರಲ್ಲಿ ತಕರಾರು ಶುರುವಾಗಿದ್ದು, ಶಾಲೆಯಲ್ಲಿ ಮೊಟ್ಟೆ ವಿತರಣೆ ಮಾಡಿದ್ದಕ್ಕೆ, 70ಕ್ಕೂ ಹೆಚ್ಚು ಮಕ್ಕಳು ಬೇರೆ ಶಾಲೆ ಸೇರಿದ್ದಾರೆ.
ಮಂಡ್ಯದ ಆಲಕೆರೆ ಗ್ರಾಮದಲ್ಲಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಮೊಟ್ಟೆ ವಿತರಣೆ ಮಾಡಲು ನಿರ್ಧರಿಸಿದಾಗ, ಗ್ರಾಮಸ್ಥರೆಲ್ಲ ಶಾಲೆಯಲ್ಲಿ ಮೊಟ್ಟೆ ವಿತರಣೆ ಬೇಡವೆಂದು ಹೇಳಿದ್ದರು. ಏಕೆಂದರೆ ಶಾಲೆಗೆ ಸಮೀಪವಾಗಿ ವೀರಭದ್ರಸ್ವಾಮೀ ದೇವಸ್ಥಾನವಿದೆ. ಮೊಟ್ಟೆ ಎಂದರೆ ಮಾಂಸಾಹಾರ. ದೇವಸ್ಥಾನ ಸಮೀಪವಿರುವಾಗ, ಮಾಂಸ ಸೇವಿಸುವುದು ಬೇಡವೆಂದು ಪೋಷಕರ ವಾದ. ಹಾಗಾಗಿ ಬರೀ ಶೇಂಗಾ ಚಿಕ್ಕಿ ಮತ್ತು ಬಾಳೆಹಣ್ಣು ಮಾತ್ರ ನೀಡಲಾಗುತ್ತಿತ್ತು.
ಆದರೆ ಇನ್ನು ಕೆಲ ಪೋಷಕರು ನಮ್ಮ ಮಕ್ಕಳಿಗೆ ಪೋಷಕಾಂಶದ ಅವಶ್ಯಕತೆ ಇದೆ. ಶಾಲೆಯಲ್ಲಿ ಮೊಟ್ಟೆ ನೀಡಬೇಕು ಎಂದು ವಾದಿಸಿದ್ದಾರೆ. ನಿಯಮದ ಪ್ರಕಾರ ಮೊಟ್ಟೆ ನೀಡಬೇಕಾದ ಕಾರಣ, ಶಾಲೆಯಲ್ಲಿ ಮೊಟ್ಟೆ ವಿತರಣೆ ಮಾಡಲು ಶುರು ಮಾಡಲಾಗಿದೆ. ಹಾಗಾಗಿ ಶಾಲೆಯಲ್ಲಿದ್ದ 124 ವಿದ್ಯಾರ್ಥಿಗಳಲ್ಲಿ 70ಕ್ಕೂ ಹೆಚ್ಚು ಮಕ್ಕಳನ್ನು ಅವರ ಪೋಷಕರು ಬೇರೆ ಶಾಲೆಗೆ ಸೇರಿಸಲು ನಿರ್ಧರಿಸಿದ್ದಾರೆ.



