Sandalwood News: ಕನ್ನಡಿಗ ರ್ಯಾಪರ್ ಚಂದನ್ ಶೆಟ್ಟಿ ಗುಡ್ ನ್ಯೂಸ್ ನೀಡಿದ್ದು, ಸದ್ಯದಲ್ಲೇ ತಮ್ಮ ನೂತನ ಆಲ್ಬಮ್ ಜತೆ ಬರಲಿದ್ದಾರೆ. ಆದರೆ ಇದರಲ್ಲಿ ಅವರು ಯಾರ ಜತೆ ಹಾಡಿದ್ದಾರೆ ಅಂತಾ ತಿಳಿದ್ರೆ, ನೀವು ಆಶ್ಚರ್ಯ ಪಡೋದು ಗ್ಯಾರಂಟಿ. ಯಾಕಂದ್ರೆ ಇದರಲ್ಲಿ ಚಂದನ್ ಜತೆ ಇರೋದು ವೆಸ್ಟ್ ಇಂಡೀಸ್ ಆಟಗಾರ ಕ್ರಿಸ್ ಗೇಲ್.
ಹೌದು… ಆರ್‌ಸಿಬಿ ಮಾಜಿ ಆಟಗಾರ ಕ್ರಿಸ್ ಗೇಲ್ ಈ ಆಲ್ಬಮ್‌ನಲ್ಲಿ ಇರಲಿದ್ದಾರೆ. ಕ್ರಿಸ್‌ಗೇಲ್‌ಗೆ ಆರ್‌ಸಿಬಿ ಮತ್ತು ಕನ್ನಡಿಗರೆಂದರೆ ಬಲು ಪ್ರೀತಿ. ಕೆಲ ತಿಂಗಳ ಹಿಂದೆ ನಡೆದಿದ್ದ ಆರ್‌ಸಿಬಿ ಫೈನಲ್ ಮ್ಯಾಚ್‌ಗೆ ಬಂದು ಅವರು ಚಿಯರ್ ಅಪ್ ಕೂಡ ಮಾಡಿದ್ದರು. ಕಪ್ ಗೆದ್ದಿದ್ದಕ್ಕೆ ಖುಷಿಯೂ ಪಟ್ಟಿದ್ದರು.
ಇದೀಗ ಗೇಲ್ ಚಂದನ್ ಜತೆ ಸೇರಿ ಹಾಡು ಹಾಡೋಕ್ಕೆ ಸಿದ್ಧರಾಗಿದ್ದಾರೆ. ಈ ಬಗ್ಗೆ ಚಂದನ್ ಸೋಶಿಯಲ್ ಮೀಡಿಯಾದಲ್ಲಿ ಹೇಳಿದ್ದು, ನಾವು ಹಾಡು ಮಾಡಿದ್ದೇವೆ. ಅದರ ಹೆಸರು ಲೈಫ್ ಈಸ್ ಕ್ಯಾಸಿನೋ. ನಾನು ತುಂಬಾ ಎಕ್ಸೈಟ್ ಆಗಿದ್ದೇನೆ. ಈ ಹಾಡಿನ ಫ್ಯಾನ್ ಆಗಿದ್ದೇನೆ ಎಂದಿದ್ದಾರೆ.
ಸದ್ಯ ಚಂದನ್ ಸಾಂಗ್ ಶೂಟಿಂಗ್‌ಗಾಗಿ ವಿದೇಶಕ್ಕೆ ತೆರಳಿದ್ದಾರೆ. 1 ಕಾರ್‌ನಲ್ಲಿ ಇಬ್ಬರೂ ಕೂಡ ಈ ಹಾಡಿದ ಬಗ್ಗೆ ಮಾಹಿತಿ ನೀಡಿದ್ದು, ಹಾಡು ಹೇಗಿರಲಿದೆ..? ಹೇಗೆ ಮೋಡಿ ಮಾಡಲಿದೆ ಅನ್ನೋದು ಕಾದು ನೋಡಬೇಕು..