ಅಂತೂ ಇಂತೂ ಹಲವು ವರ್ಷದ ಹೋರಾಟಕ್ಕೆ ಇಂದು ಗೆಲುವು ಸಿಕ್ಕಿದ್ದು, ರಾಮಮಂದಿರ ನಿರ್ಮಾಣಕ್ಕೆ ಭೂಮಿ ಪೂಜೆ ನಡೆದಿದೆ. ಇಷ್ಟು ವರ್ಷಗಳ ಕಾಲ ಹೋರಾಡಿದವರ ಹೋರಾಟಕ್ಕೆ ಬೆಲೆ ಸಿಕ್ಕಿದೆ. ಆದ್ರೆ ನಾವಿಂದು ಹೇಳ ಹೊರಟಿರುವ ಅಜ್ಜಿಯೊಬ್ಬರು ಹಲವು ವರ್ಷಗಳಿಂದ ರಾಮಮಂದಿರ ನಿರ್ಮಾಣವಾಗಲಿ ಎಂದು ಉಪವಾಸ ಮಾಡಿದ್ದಾರೆ. ಅವರ ಉಪವಾಸದ ಫಲವಾಗಿ ಇಂದು ಅವರ ಆಸೆ ಈಡೇರಿದೆ.
ಮಧ್ಯಪ್ರದೇಶದವರಾದ ಉರ್ಮೀಳಾ ಚತುರ್ವೇದಿ ಎಂಬ 88 ವರ್ಷದ ಅಜ್ಜಿಯೊಬ್ಬರು 1992ರಿಂದ ರಾಮಮಂದಿರ ನಿರ್ಮಾಣಕ್ಕಾಗಿ ಉಪವಾಸ ಮಾಡುತ್ತಿದ್ದರು. ರಾಮಮಂದಿರ ನಿರ್ಮಾಣದ ತನಕ ಊಟ ಮಾಡುವುದಿಲ್ಲ ಎಂದು ನಿರ್ಧರಿಸಿದ್ದ ಇವರು ಬರೀ ಹಣ್ಣು ಹಂಪಲನ್ನಷ್ಟೇ ಸೇವಿಸುತ್ತಿದ್ದರಂತೆ.
ಇನ್ನು ರಾಮಮಂದಿರದ ಭೂಮಿ ಪೂಜೆಗೆ ಆಗಮಿಸಬೇಕೆಂದು ತುಂಬ ಆಸೆಯಿಂದಿದ್ದ ಅಜ್ಜಿ ಕೊರೊನಾ ಕಾರಣದಿಂದ ಅಯೋಧ್ಯೆಗೆ ಬರಲಾಗಲಿಲ್ಲ. ಆದ್ರೆ ಇವರು ತಮ್ಮ ಉಪವಾಸವನ್ನು ಅಯೋಧ್ಯೆಯಲ್ಲೇ ಮುರಿಯಬೇಕೆಂದು ಪಣತೊಟ್ಟಿದ್ದಾರಂತೆ.
ಈ ಬಗ್ಗೆ ಮಾತನಾಡಿರುವ ಊರ್ಮೀಳಾ ಚತುರ್ವೇದಿ, ನಾನು ಅಯೋಧ್ಯೆಗೆ ಹೋಗಬೇಕೆಂದು ಆಸೆ ಹೊಂದಿದ್ದೆ, ನನ್ನ ಕುಟುಂಬಸ್ಥರೂ ನನ್ನನ್ನು ಅಲ್ಲಿಗೆ ಕರೆದೊಯ್ಯುತ್ತೇವೆ ಎಂದಿದ್ದರು. ಮಿನಿಸ್ಟರ್ ಬಳಿಯೂ ನಾನು ಮಾತನಾಡಿದ್ದೆ, ಆದ್ರೆ ಹೋಗಲಾಗಲಿಲ್ಲ ಎಂದು ಬೇಸರ ವ್ಯಕ್ತಪಡಿಸಿದರು.
ಶ್ರೀ ಸಾಯಿ ಕೃಷ್ಣ ಜ್ಯೋತಿಷ್ಯಾಲಯ, ಪಂಡಿತ್ ಡಿ.ಎಸ್ ಜೋಷಿ – 9731355538
ನಿಮ್ಮ ಸಮಸ್ಯೆಗಳಾದ ಉದ್ಯೋಗ, ಸತಿ-ಪತಿ ಕಲಹ, ಮದುವೆ, ಪ್ರೇಮ ವಿಚಾರ, ವಶೀಕರಣ ಯಾವುದೇ ಕಠಿಣ-ಕ್ಲಿಷ್ಟ ಸಂಕಷ್ಟಗಳಿಗೆ ಸಂಪರ್ಕಿಸಿ.
ವಿಳಾಸ : ಸಾಯಿಬಾಬಾ ದೇವಸ್ಥಾನ ಎದುರು, 15ನೇ ಕ್ರಾಸ್, ಬಸ್ ನಿಲ್ದಾಣದ ಪಕ್ಕ, ಸಂಪಿಗೆ ರೋಡ್, ಮಲ್ಲೇಶ್ವರಂ, ಬೆಂಗಳೂರು
ನಿಮ್ಮ ಸಮಸ್ಯೆಗಳಿಗೆ ಕಾಶಿ ತಾಂತ್ರಿಕ ಅಘೋರಿ, ನಾಗಸಾಧುಗಳ ವಿಶೇಷ ಪ್ರಯೋಗಗಳಾದ ಮಹಾರುದ್ರ ಪೂಜೆ, ಮಂಡಲ ಪೂಜೆ, ಅಷ್ಟ ದಿಗ್ಬಂಧನೆಯ ಪೂಜೆಯಿಂದ 11 ದಿನಗಳಲ್ಲಿ ಪರಿಹಾರ ಶತಸಿದ್ಧ.
ಹೆಸರಾಂತ ವಂಶಪಾರಂಪರ್ಯ ಜ್ಯೋತಿಷ್ಯರು ಪಂಡಿತ್ ಡಿ.ಎಸ್ ಜೋಷಿ ತಮ್ಮ 25 ವರ್ಷಗಳ ಅನುಭವದಲ್ಲಿ 20,000 ಕ್ಕೂ ಹೆಚ್ಚು ಸಮಸ್ಯೆಗಳನ್ನ ಇತ್ಯರ್ಥ ಮಾಡಿ ಸಾವಿರಾರು ಕುಟುಂಬಗಳ ನೆಮ್ಮದಿಯ ಬದುಕಿಗೆ ನೆರವಾಗಿದ್ದಾರೆ.