Tech News: ಮುಂದುವರಿದ ನಗರಗಳಲ್ಲಿ ಜೋಮ್ಯಾಟೋ, ಸ್ವಿಗ್ಗಿ, ಜೆಪ್ಟೋ, ಬ್ಲಿಂಕಿಟ್‌ನಂಥ ಆ್ಯಪ್‌ನಲ್ಲಿ ಜನ ತಮಗೆ ಬೇಕಾದ ವಸ್ತು, ಫುಡ್ ಎಲ್ಲವನ್ನೂ ಖರೀದಿಸುತ್ತಾರೆ. ಆರ್ಡರ್ ಮಾಡಿದ ಕೆಲವೇ ಸಮಯದಲ್ಲಿ ನಿಮಗೆ ಬೇಕಾದ್ದೆಲ್ಲವೂ, ನಿಮ್ಮ ಮನೆ ಬಳಿ ಬಂದಿರುತ್ತದೆ. ಹಾಗಾದ್ರೆ ಜೆಪ್ಟೋ, ಬ್ಲಿಂಕಿಟ್ ಹೇಗೆ ಅಷ್ಟು ಬೇಗ ವಸ್ತುಗಳನ್ನು ಡಿಲೆವರ್ ಮಾಡುತ್ತದೆ ಅಂತಾ ತಿಳಿಯೋಣ ಬನ್ನಿ..
ಇಂಥ ಕಂಪನಿಗಳೆಲ್ಲ ಡಾರ್ಕ್ ಸ್ಟೋರ್ ಕಾನ್ಸೆಪ್ಟ್ ಫಾಲೋ ಮಾಡುತ್ತದೆ. ಅಂದರೆ, ಬೆಂಗಳೂರಿನಂಥ ಸಿಟಿಯಲ್ಲಿ ಅಲ್ಲಲ್ಲಿ ಡಾರ್ಕ್ ಸ್ಟೋರ್ ಮಾಡಿ, ಅದರಲ್ಲಿ ತಲುಪಿಸಬಹುದಾದ ಹಲವು ವಸ್ತುಗಳನ್ನು ಸ್ಟೋರ್ ಮಾಡಲಾಗುತ್ತದೆ. ಇದನ್ನು ನಾವು ಗೋಡೌನ್ ಅಂತಲೂ ಕರಿಯಬಹುದು. ಯಾರಿಗೂ ಕಾಣದ ಜಾಗದಲ್ಲಿ ಇಂಥ ಸ್ಟೋರ್ ಓಪನ್ ಮಾಡಲಾಗುತ್ತದೆ.
ಇದರಲ್ಲಿ ಬೇಗ ಬೇಗ ಕೆಲಸ ಮಾಡುವ ಎಕ್ಸಪರ್ಟ್‌ಗಳನ್ನು ನೇಮಕ ಮಾಡಲಾಗಿರುತ್ತದೆ. ಡಿಲೆವರಿ ಬಾಯ್‌ಗಳು ಕೂಡ ಇದರಲ್ಲಿ ಹೋಗುವಂತಿಲ್ಲ. ಅವರು ಆಚೆ ನಿಂತು, ಆರ್ಡರ್ ಬಂದ ವಸ್ತುಗಳನ್ನು ತೆಗೆದುಕ“ಂಡು ಹೋಗಬೇಕಷ್ಟೇ. ನೀವು ನಿಮ್ಮ ಸೆಲ್ ಫೋನ್ ತೆಗೆದು ಆರ್ಡರ್ ಮಾಡಿ, ಕೆಳಗಿರಿಸುವುದರಲ್ಲಿ, ನಿಮಗೆ ಬೇಕಾದ ವಸ್ತು, ಅಲ್ಲಿ ಪ್ಯಾಕ್ ಆಗಲು ರೆಡಿಯಾಗಿರುತ್ತದೆ. ಹತ್ತಿರದ ಸ್ಟೋರ್‌ನಲ್ಲಿ ಪ್ಯಾಕ್ ಆಗಿ, ಆ ಸ್ಟೋರ್‌ಗೆ ಸಂಬಂಧಿಸಿದ ಡಿಲೆವರಿ ಬಾಯ್ ನಿಮ್ಮ ಮನೆಗೆ ಆ ವಸ್ತುವನ್ನು ತಲುಪಿಸುತ್ತಾರೆ. ಹಾಗಾಗಿಯೇ ಬ್ಲಿಂಕಿಟ್, ಜೆಪ್ಟೋ ಅಷ್ಟು ಫಾಸ್ಟ್ ಆಗಿರೋದು.