ಸೂಪರ್‌ಸ್ಟಾರ್ ರಜಿನಿಕಾಂತ್ ಅಭಿನಯದ ಬಹು ನಿರೀಕ್ಷಿತ ಚಿತ್ರ ‘ಕೂಲಿ’ ಬಿಡುಗಡೆಯಾದ ಮೊದಲ ದಿನವೇ ಬಾಕ್ಸ್ ಆಫೀಸ್‌ನಲ್ಲಿ ಭರ್ಜರಿ ಆರಂಭವನ್ನು ದಾಖಲಿಸಿದೆ. ಲೋಕೇಶ್ ಕನಕರಾಜ್ ನಿರ್ದೇಶನದಲ್ಲಿ ಮೂಡಿಬಂದ ಈ ಚಿತ್ರವು ವಿಶ್ವಾದ್ಯಂತ ₹ 151 ಕೋಟಿ ಗಳಿಸಿದೆ ಎಂದು ಘೋಷಿಸಿದ್ದು, ಇದು ಇತಿಹಾಸದಲ್ಲಿಯೇ ಅತ್ಯುತ್ತಮ ಆರಂಭಿಕ ತಮಿಳು ಚಿತ್ರವಾಗಿದೆ.
‘ಕೂಲಿ’ ರಜಿನಿಕಾಂತ್ ಅವರ 171ನೇ ಚಿತ್ರ ಆಗಿದ್ದು, ಈ ಚಿತ್ರದಲ್ಲಿ ನಾಗಾರ್ಜುನ, ಶ್ರುತಿ ಹಾಸನ್, ಉಪೇಂದ್ರ, ಹಾಗೂ ಸತ್ಯರಾಜ್ ಪ್ರಮುಖ ಪಾತ್ರಗಳಲ್ಲಿ ಕಾಣಿಸಿಕೊಂಡಿದ್ದಾರೆ. ನಟ ಅಮೀರ್ ಖಾನ್ ಅತಿಥಿ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಚಿತ್ರವನ್ನು ಸನ್ ಪಿಕ್ಚರ್ಸ್ ನಿರ್ಮಾಣ ಮಾಡಿದ್ದು, ಕಲಾನಿಧಿ ಮಾರನ್ ನಿರ್ಮಾಪಕರಾಗಿದ್ದಾರೆ.
ಕೂಲಿ’ ಚಿತ್ರವು ರಜನಿಕಾಂತ್ ಅವರ ಹಿಂದಿನ ಬ್ಲಾಕ್‌ಬಸ್ಟರ್ ‘2.0’ ಚಿತ್ರ ₹151 ಕೋಟಿಗೆ ಮೀರಿದ ಮೊದಲ ದಿನದ ಕಲೆಕ್ಷನ್ ಮೂಲಕ ಹೊಸ ದಾಖಲೆ ಬರೆಯುವಲ್ಲಿ ಯಶಸ್ವಿಯಾಗಿದೆ. ಆದರೆ, ಈ ಚಿತ್ರವು ಲಿಯೋ ಚಿತ್ರ ದಾಖಲಿಸಿದ ₹66 ಕೋಟಿಯ ಮೊದಲ ದಿನದ ಕಲೆಕ್ಷನ್ ಅನ್ನು ಮೀರಿಸಲು ಸಾಧ್ಯವಾಗಿಲ್ಲ. ‘ಲಿಯೋ’ ತಮಿಳು ಚಿತ್ರರಂಗದ ಅತಿ ಹೆಚ್ಚು ಮೊದಲ ದಿನದ ಕಲೆಕ್ಷನ್ ದಾಖಲೆ ಹೊಂದಿರುವ ಚಿತ್ರವಾಗಿದೆ.
ತಮಿಳಿನಲ್ಲಿ ಬೆಳಗಿನ ಪ್ರದರ್ಶನಗಳಿಗೆ ಸುಮಾರು ಶೇ 81.95 ರಷ್ಟು ಜನರು ಭೇಟಿ ನೀಡಿದ್ದಾರೆ. ಮಧ್ಯಾಹ್ನದ ಪ್ರದರ್ಶನಗಳಲ್ಲಿ ಶೇ 85.13, ಸಂಜೆ ಪ್ರದರ್ಶನಗಳಲ್ಲಿ ಶೇ 86.57 ಮತ್ತು ರಾತ್ರಿ ಪ್ರದರ್ಶನಗಳಲ್ಲಿ ಶೇ 94.32 ರಷ್ಟು ಜನರು ಚಿತ್ರಮಂದಿರಗಳಿಗೆ ಭೇಟಿ ನೀಡಿದ್ದಾರೆ.
ರಜಿನಿಕಾಂತ್ ನಟನೆಯ ಚಿತ್ರ ಹಿಂದಿ ಚಿತ್ರಗಳ ಪಟ್ಟಿಯಲ್ಲಿಯೂ ತನ್ನ ಅಸ್ತಿತ್ವವನ್ನು ಕಂಡುಕೊಂಡಿತು. ಬೆಳಗಿನ ಪ್ರದರ್ಶನಗಳಲ್ಲಿ ಮುಂಬೈನಲ್ಲಿ ಶೇ 35ರಷ್ಟು ಜನರು ಭಾಗವಹಿಸಿದ್ದರು. ಬೆಂಗಳೂರಿನಲ್ಲಿ ಶೇ 41 ರಷ್ಟು ಜನರು ಮತ್ತು ಕೋಲ್ಕತ್ತಾದಲ್ಲಿ ಶೇ 41 ರಷ್ಟು ಜನರು ಚಿತ್ರಮಂದಿರಗಳಿಗೆ ಬಂದಿದ್ದರು. ಪ್ರಸ್ತುತ ಟ್ರೆಂಡ್ ಹಾಗೂ ಪ್ರೇಕ್ಷಕರ ಸ್ಪಂದನೆಯ ಆಧಾರದ ಮೇಲೆ ‘ಕೂಲಿ’ ಚಿತ್ರವು ವಾರಾಂತ್ಯದಲ್ಲಿ ಇನ್ನಷ್ಟು ಭರ್ಜರಿ ಕಲೆಕ್ಷನ್ ಸಾಧಿಸಲಿದೆ ಎಂಬ ನಿರೀಕ್ಷೆ ವ್ಯಕ್ತವಾಗಿದೆ.