ಸಂಪುಟದಿಂದ ವಜಾಗೊಂಡ 2 ದಿನಗಳ ಕಾಲ, ಬೆಂಗಳೂರಿನ ಅಪಾರ್ಟ್‌ಮೆಂಟ್‌ನಲ್ಲೇ ಕೆ.ಎನ್. ರಾಜಣ್ಣ ಇದ್ರು. ಇಂದು ತುಮಕೂರಿನ ಮಧುಗಿರಿಗೆ ಭೇಟಿ ಕೊಟ್ಟಿದ್ದಾರೆ. 79ನೇ ಸ್ವಾತಂತ್ರ್ಯೋತ್ಸವ ಕಾರ್ಯಕ್ರಮದಲ್ಲಿ ಧ್ವಜಾರೋಹಣ ಮಾಡಿದ್ದಾರೆ. ಸಚಿವ ಸ್ಥಾನದಿಂದ ವಜಾಗೊಂಡ ಬಳಿಕ ರಾಜಣ್ಣ ಅವರು ಮತ್ತೆ ತಮ್ಮ ಹಳೇ ಖದರ್‌ನಲ್ಲಿ ಮಾತನಾಡಿದ್ದಾರೆ.
ನನ್ನ ವಿರುದ್ಧ ಮೂವರಿಂದ ಪಿತೂರಿ ನಡೆದಿದೆ ಎಂದು ಕೆ.ಎನ್. ರಾಜಣ್ಣ ಆರೋಪಿಸಿದ್ದಾರೆ. ನಮಗೆ ವ್ಯವಸ್ಥಿತವಾಗಿ ಮುಗಿಸಲು ಬರಲ್ಲ. ಕಾಣದ ಕೈಗಳು ಕೆಲಸ ಮಾಡಿವೆ. ಇಲ್ಲಾಂದ್ರೆ ಹೇಗೆ ಏಕಾಏಕಿ ತೀರ್ಮಾನ ಬರುತ್ತೆ. ಅವರು ವಿಧಿ ಇಲ್ಲ ಕಣಯ್ಯ. ಹೈಕಮಾಂಡ್ ನಿರ್ಧಾರ ಸಿಎಂಗೂ ಗೊತ್ತಿರಲಿಲ್ಲ ಎಂದು ರಾಜಣ್ಣ ಹೇಳಿದ್ದಾರೆ.
ಮಧುಗಿರಿಯಲ್ಲಿ ಮಾತನಾಡಿದ ರಾಜಣ್ಣ, ಮಂತ್ರಿಗಿರಿ ಹೋಗಿದ್ದಕ್ಕೆ ನನಗ್ಯಾವುದೇ ಬೇಸರ ಇಲ್ಲ ಅಂತಾ ಮಾತು ಶುರು ಮಾಡಿದ್ರು. ಅಧಿಕಾರ ಶಾಶ್ವತ ಅಲ್ಲ. ದೇವರಾಜು ಅರಸು ಅವರಿಗೂ ಕೂಡ ಇದೇ ಅನುಭವ ಆಗಿತ್ತು. ಹಾಸನದಲ್ಲಿ ಸೂಟು ಬೂಟು ಟೈ ಹಾಕಿಕೊಂಡು, ಕಾರ್ಯಕ್ರಮದಲ್ಲಿ ಭಾಗವಹಿಸುತ್ತಿದ್ದೆ. ಈಗ ನನಗೆ ಮತ್ತೆ ನಿಮ್ಮ ಜೊತೆ ಸಾಮಾನ್ಯ ಮನುಷ್ಯನಾಗಿ ನಿಲ್ಲುವ ಅವಕಾಶ ಕಲ್ಪಿಸಿಕೊಟ್ಟಿದ್ದೀರಿ. ನಾನು ಅಧಿಕಾರಕ್ಕೆ ಅಂಟಿ ಕೂರುವವನು ನಾನಲ್ಲ. ನನಗೆ ಯಾವುದೇ ಬೇಸರವೂ ಇಲ್ಲ ಎಂದಿದ್ದಾರೆ.
ಸಿದ್ದರಾಮಯ್ಯ ಅವರ ಬಗ್ಗೆ ಯಾರೂ ಆಕ್ಷೇಪಣೆ ಮಾಡಬಾರದು. ಸಿದ್ದರಾಮಯ್ಯ ಹಾಗೂ ರಾಹುಲ್ ಗಾಂಧಿ ಅವರು ಯುವಜನತೆಯನ್ನೂ ಎಚ್ಚರಿಸುವ ಕೆಲಸ ಮಾಡ್ತಿದ್ದಾರೆ. ಹೀಗಂತ ಸಿಎಂ ಪರ ರಾಜಣ್ಣ ಬ್ಯಾಟಿಂಗ್ ಮಾಡಿದ್ದಾರೆ.

