Hubli News: ಹುಬ್ಬಳ್ಳಿ: ರಾಜ್ಯದಲ್ಲಿ ಪದೇ ಪದೇ ಹಿಂದೂ ಧರ್ಮಕ್ಕೆ ಅವಮಾನ ಮಾಡೋ ಕೆಲಸ ಆಗುತ್ತಿದೆ.
ಜೆಸಿಬಿಯನ್ನು ಧರ್ಮಸ್ಥಳ ಹೆಬ್ಬಾಗಿಲಿಗೆ ನುಗ್ಗಿಸ್ತೇನೆ ಅಂತಿದ್ದಾರೆ. ಮತಾಂದರು ಮತ್ತು ನಗರ ನಕ್ಸಲರು ಬಂದಿದ್ದಾರೆ. ಸಿದ್ದರಾಮಯ್ಯ ಸರ್ಕಾರದಲ್ಲಿ ಕಾಡು ಬಿಟ್ಟು ನಾಡಿಗೆ ಬಂದಿದ್ದಾರೆ. ಟಿಪ್ಪು ಪ್ರೇರಿತ ಗ್ಯಾಂಗ್ ಗೆ ಸಿದ್ದರಾಮಯ್ಯ ಬೆಂಬಲ ನೀಡ್ತಿದ್ದಾರೆ ಎಂದು ವಿರೋಧ ಪಕ್ಷದ ನಾಯಕ ಆರ್ ಅಶೋಕ್ ಹೇಳಿದರು.
ಹುಬ್ಬಳ್ಳಿಯ ವರೂರ ಗ್ರಾಮದಲ್ಲಿ ಮಾತನಾಡಿದ ಅವರು, ಯ್ಯೂಟುಬರ್ ಸಮೀರ್, ಪಿಎಪ್ಐ , ಎಸ್‌ಡಿಪಿ ಕಾರ್ಯಕರ್ತ ಸಿಎಂ ಆಪೀಸ್ ಅವರಿಂದ ಸುತ್ತುವರದಿದೆ. ಧರ್ಮಸ್ಥಳದ ಪ್ರಕರಣದಲ್ಲಿ ಷಂಡ್ಯಂತ್ರ ಇದೆ ಅಂತ ಡಿ.ಕೆ ಹೇಳ್ತಿದ್ದಾರೆ. ಆದ್ರೆ ಸಿದ್ದರಾಮಯ್ಯ ನವರ ಬಾಯಲ್ಲಿ ಒಂದು ಮಾತು ಬಂದಿದೆಯಾ..? ಡಿ.ಕೆ ಶಿವಕುಮಾರ್ ಮ್ಯಾನೇಜ್ ಮಾಡ್ತಿದ್ದಾರೆ. ಕಾಂಗ್ರೆಸ್ ನಲ್ಲಿ ಈ ಬಗ್ಗೆ ಒಡಕಿದೆ. ಕಾಂಗ್ರೆಸ್ ನಲ್ಲಿ ಹಿಂದೂ ವಿರೋಧಿ ಹಿಂದೂ ಪರ ಗ್ಯಾಂಗ ಇದೆ. ಪೋಲೀಸರೇ ಕೋರ್ಟ್ ಗೆ ಅರ್ಜಿ ಹಾಕಿದ್ದಾರೆ. ಎಲ್ಲಾ ಕೇಸ್ ಗೂ ಇದೇ ರೀತಿ ಮಾಡ್ತಾರಾ? ಒಂದೇ ಸಲ ನೂರು ಅಡಿ ಹೋಗಿ ತನಿಖೆ ಮಾಡಬೇಡಿ ಎಂದರು.