Hubli News: ಹುಬ್ಬಳ್ಳಿ: ವಾಣಿಜ್ಯ ನಗರಿ ಹುಬ್ಬಳ್ಳಿಯಲ್ಲಿ ಬೀದಿ ನಾಯಿಗಳ ಹಾವಳಿ ದಿನೇ ದಿನೇ ಹೆಚ್ಚಾಗುತ್ತಿದೆ. ಸಾರ್ವಜನಿಕರು ಮನೆ ಬಿಟ್ಟು ಹೊರಗೆ ಬರಲು ಭಯಪಡುವಂತಾಗಿದೆ. ಅದರಲ್ಲೂ ವಾರ್ಡ್ ನಂಬರ 76ರಲ್ಲಿ ಬರುವ ಹಳೇ ಹುಬ್ಬಳ್ಳಿ ಎನ್. ಎ ನಗರ ಮತ್ತು ವಾರ್ಡ್ ನಂಬರ 82ರಲ್ಲಿ ಬರುವ ಬಸವ ನಗರ ಅಂಚಟಗೇರಿ ಪ್ಲಾಟ್ ಬಿಡ್ನಾಳ ರಸ್ತೆಯಲ್ಲಿ ಬೀದಿ ನಾಯಿಗಳ ಹಾವಳಿ ಹೆಚ್ಚಾಗಿದೆ. ಮನೆ ಮನೆಗೆ ನಾಯಿಗಳು ನುಗ್ಗುತ್ತಿವೆ.
ಕೆಲವು ತಿಂಗಳ ಹಿಂದೆ ಒಂದು ಬಾಲಕಿ ಮೇಲೆ ಡೆಡ್ಲಿ ಅಟ್ಯಾಕ್ ಮಾಡಿದ್ದವು. ದೇವರ ಕೃಪೆಯಿಂದ ಪ್ರಾಣಕ್ಕೆ ಏನೂ ತೊಂದರೆಯಾಗಿಲ್ಲ. ಇಷ್ಟೇಲ್ಲಾ ಆದ್ರೂ ಪಾಲಿಕೆ ಮಾತ್ರ ಮೀಟಿಂಗ್ ಮಾಡೋದು, ಹೋಗೋದು ಮಾಡ್ತಿದ್ದಾರೆ. ಇದರ ಹೊರತು ಬೀದಿ ನಾಯಿಗಳಿಗೆ ಶಾಶ್ವತ ಪರಿಹಾರ ನೀಡುತ್ತಿಲ್ಲ. ಪಾಲಿಕೆ ವ್ಯಾಪ್ತಿಯಲ್ಲಿ ಬರುವ ವಾರ್ಡ್ ನಂಬರ 79 ಮತ್ತು 82 ರಲ್ಲಿ ಬೀದಿ ನಾಯಿಗಳ ಹಾವಳಿ ಹೆಚ್ಚಾಗಿದೆ. ಇಲ್ಲಿನ ಜನರು ಕಾರ್ಪೊರೇಟರ್‌ಗೆ ಪಾಲಿಕೆ ಅಧಿಕಾರಿಗಳಿಗೆ ತಿಳಿಸಿದ್ರೂ ಕ್ಯಾರೆ ಮಾಡ್ತಿಲ್ಲವಂತೆ. ಮಹಾನಗರ ಪಾಲಿಕೆ ಬೀದಿ ನಾಯಿಗಳ ಹಾವಳಿಯನ್ನು ತಪ್ಪಿಸಿ ಸಾರ್ವಜನಿಕರು ನೆಮ್ಮದಿಯಾಗಿ ಓಡಾಡಲು ಅನುಕೂಲ ಮಾಡಿಕೊಡಬೇಕಾಗಿದೆ.