Hubli News: ಗಣೇಶ ಚತುರ್ಥಿ ಹಾಗೂ ಈದ್ ಮಿಲಾದ್ ಹಬ್ಬ ಸಮೀಪ ಹಿನ್ನಲೆಯಲ್ಲಿ, ಯಾವುದೇ ಅಹಿತಕರ ಘಟನೆ ನಡೆಯಬಾರದು ಎಂಬ ನಿಟ್ಟಿನಲ್ಲಿ ಶನಿವಾರ ಸಂಜೆ ಹುಬ್ಬಳ್ಳಿ ಧಾರವಾಡ ಪೊಲೀಸ್ ಕಮಿಷನರ್ ನೇತೃತ್ವದಲ್ಲಿ ಧಾರವಾಡದಲ್ಲಿ ಪಥಸಂಚಲನ ಮಾಡುವ ಮೂಲಕ ದೊಂಬಿ ಗಲಭೆ ನಡೆಸುವ ದುಷ್ಟರಿಗೆ ಪೊಲೀಸ್ ಇಲಾಖೆ ಖಡಕ್ ಎಚ್ಚರಿಕೆ ನೀಡಿದೆ.
ಹೌದು ಅವಳಿನಗರ ಖಡಕ್ ಕಮಿಷನರ್ ಎನ್ ಶಶಿಕುಮಾರ ಅವರ ನೇತೃತ್ವದಲ್ಲಿ ಧಾರವಾಡ ಸೂಕ್ಷ್ಮ ಅತೀ ಸೂಕ್ಷ್ಮ ಪ್ರದೇಶಗಳಲ್ಲಿ ಕಮಿಷನರೇಟ್ ವ್ಯಾಪ್ತಿಯಲ್ಲಿ ಪಥಸಂಚಲನ ನಡೆಸಲಾಯಿತು. ರ್ಯಾಪಿಡ್ ಆ್ಯಕ್ಷನ್ ಫೋರ್ಸ್ ಹಾಗೂ ಪೊಲೀಸ್ ಅಧಿಕಾರಿಗಳು ಸಿಬ್ಬಂದಿಗಳು ಪಥಸಂಚಲನದಲ್ಲಿ ಭಾಗಿಯಾಗಿದ್ದರು. ನಗರದ ಮಾಳಾಪುರದಿಂದ ಆರಂಭವಾದ ಪಥಸಂಚಲನ, ಕಮಲಾಪುರ, ಕಂಠಿಗಲ್ಲಿ, ಗೊಲ್ಲರ್ ಕಾಲೋನಿ, ಶಿವಾಜಿ ವೃತ, ಮಣಿಕಿಲ್ಲಾ ಸೇರಿ ಸುಮಾರು 3 ಕಿಲೋಮೀಟರಕ್ಕೂ ಅಧಿಕಾ ಸಾಗಿ ಶಹರ ಪೊಲೀಸ್ ಠಾಣೆಯಲ್ಲಿ ಪಥಸಂಚಲನ ಅಂತ್ಯವಾಯಿತ್ತು. ಪಥಸಂಚನಲದಲ್ಲಿ ಕಮಿಷನರೇಟ್‌ನ ಡಿಸಿಪಿಗಳಾದ ರವೀಶ್, ನಂದಗಾವಿ, ಧಾರವಾಡ ಎಸಿಪಿ ಪ್ರಶಾಂತ್ ಸಿದ್ಧನಗೌಡರ್, ಇನ್ಸ್ಪೆಕ್ಟರಗಳಾದ ನಾಗೇಶ ಕಾಡದೇಮರಮಠ,ದಯಾನಂದ ಶೆಗುಣಸಿ, ಪ್ರಭು ಗಂಗೇನಹಳ್ಳಿ, ಶ್ರೀನಿವಾಸ ಮೇಟಿ ಸೇರಿ ಪಿಎಸ್‌ಐ ಹಾಗೂ ಸಿಬ್ಬಂದಿಗಳು ಉಪಸ್ಥಿತರಿದ್ದರು.