Hubli News: ಹುಬ್ಬಳ್ಳಿ : ಮಹಾತ್ಮಾಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತರಿ ಯೋಜನೆಯಡಿ ಎನ್.ಎಮ್.ಎಮ್.ಎಸ್ ತಂತ್ರಾಂಶಕ್ಕೆ ಮಣ್ಣೆರೆಚಿ ಸತ್ತವರ ಪೋಟೋ ಅಪ್ಲೋಡ್ ಮಾಡಿದ್ದ ಕಿರೇಸೂರ ಗ್ರಾಮ ಪಂಚಾಯಿತಿಗೆ ತಕ್ಕ ಶಾಸ್ತಿಯಾಗಿದೆ.
ಹುಬ್ಬಳ್ಳಿ ತಾಲೂಕು ಕಿರೇಸೂರು ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ 2024 ಡಿಸೆಂಬರ್’ನಲ್ಲಿ ಕೈಗೊಂಡ ನರೇಗಾ ಸಮುದಾಯ ಕಾಮಗಾರಿಯಲ್ಲಿ ಯಲ್ಲವ್ವ ಕಣಕಣ್ಣನವರ ಎಂಬ ಮಹಿಳೆ ಪೋಟೋ ನರೇಗಾ ಎನ್.ಎಮ್.ಎಮ್.ಎಸ್ ತಂತ್ರಾಂಶದಲ್ಲಿ ಅಪ್ಲೋಡ್ ಮಾಡಲಾಗಿತ್ತು.
ವಿಚಿತ್ರ ಎಂದರೆ ಎನ್.ಎಮ್.ಎಮ್.ಎಸ್ ಪೋಟೋದಲ್ಲಿದ್ದ ಮಹಿಳೆ ಯಲ್ಲವ್ವ ಕಣಕಣ್ಣನವರ ಎಪ್ರೀಲ್, 2023 ರಲ್ಲೇ ಮರಣ ಹೊಂದಿದ್ದರು.
ಈ ಬಗ್ಗೆ ಸ್ಥಳೀಯ ಕಿರೇಸೂರ ಗ್ರಾಮದ ಜನ ಮೌಖಿಕವಾಗಿ ಗ್ರಾಮ ಪಂಚಾಯಿತಿ, ತಾಲೂಕು ಪಂಚಾಯಿತಿ ಗಮನಕ್ಕೆ ತಂದರೂ ಯಾವುದೇ ತನಿಖೆ ಮಾತ್ರ ನಡೆದೆ ಇರಲಿಲ್ಲಾ.
ಬಳಿಕ ಜುಲೈ.3, 2025 ರಂದು ಜಿಲ್ಲಾ ಪಂಚಾಯತ್, ಓಂಬಡ್ಸಮನ್ ಶ್ರೀಧರ ಪೂಜಾರ ಎಂಬುವವರು ಲಿಖಿತ ವರದಿ ಸಲ್ಲಿಸಿ ತನಿಖೆಗೆ ಒತ್ತಾಯ ಮಾಡಿದ ನಂತರದಲ್ಲಿ ಕಿರೇಸೂರ ಗ್ರಾಮ ಪಂಚಾಯಿತಿ ವ್ಯಾಪ್ತಿಯ ನರೇಗಾ ಕಾಮಗಾರಿಯಲ್ಲಿ ಸತ್ತವರ ಪೋಟೋ ಅಪ್ಲೋಡ್ ಮಾಡಿರುವುದು ಸಾಬೀತು ಎಂದು ಅಗಸ್ಟ್,08 ರಂದು ಓಂಬಡ್ಸಮನ್ ಆದೇಶ ನೀಡಿದೆ.
ಸತ್ತವರ ಪೋಟೋ ಅಪ್ಲೋಡ್ ಮಾಡಿ ನರೇಗಾ ಎನ್.ಎಮ್.ಎಮ್.ಎಸ್ ತಂತ್ರಾಂಶಕ್ಕೆ ಮಣ್ಣೆರೆಚಿದ ಗ್ರಾಮ ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ಪೂರ್ಣಿಮಾ.ವ್ಹಿ ಮತ್ತು ಮೇಟ್ ಪ್ರಭು ಮಂಗೂಣಿ ಇವರಿಗೆ ತಲಾ 1000 ರೂಪಾಯಿ ದಂಡ ವಿಧಿಸಲಾಗಿದೆ.