Wednesday, August 20, 2025

Latest Posts

Dharwad News: ಥಿನ್ನರ್ ಬಿದ್ದ ಬಾಲಕ ಸಾವು ಕೇಸ್: ಗಂಭೀರವಾಗಿದ್ದ ಅಪ್ಪನೂ ಸಾ*ವು

- Advertisement -

Dharwad News: ಧಾರವಾಡ: ಆಗಸ್ಟ್ ಹದಿನೈದರಂದು ಕೆಲಗೇರಿಯ ಬಳಿ ನಡೆದಿದ್ದ ದುರಂತವೊಂದು ತಂದೆಯನ್ನೂ ಬಲಿ ಪಡೆದಿದ್ದು, ಕುಟುಂಬವೂ ಕಣ್ಣೀರಿನಲ್ಲಿ ಕೈ ತೊಳೆಯುವಂತಾಗಿದೆ.

ಅಗಸ್ತ್ಯ ಮಾಶ್ಯಾಳ ಎಂಬ ನಾಲ್ಕು ವರ್ಷದ ಬಾಲಕ ಕುಪ್ಪಡಿಯ ಬಳಿಯಿದ್ದ ಥಿನ್ನರ್ ಕೆಡವಿದ ಪರಿಣಾಮ ಬೆಂಕಿಯ ಕೆನ್ನಾಲಿಗೆ ಆವರಿಸಿತ್ತು. ಅದೇ ಸಮಯದಲ್ಲಿ ಮಗನನ್ನ ಬದುಕಿಸಲು ತಂದೆ ಚಂದ್ರಕಾಂತ ತೀವ್ರವಾಗಿ ಪ್ರಯತ್ನಿಸಿದ್ದ. ಈ ಸಮಯದಲ್ಲಿ ಇಬ್ಬರಿಗೂ ಗಂಭೀರವಾದ ಗಾಯಗಳಾಗಿ ಕಿಮ್ಸಗೆ ದಾಖಲು ಮಾಡಿದ್ದರು.

ಬಾಲಕ ಅಗಸ್ತ್ಯ ಅವತ್ತೇ ಚಿಕಿತ್ಸೆ ಫಲಿಸದೇ ಸಾವಿಗೀಡಾಗಿದ್ದ. ಗಂಭೀರವಾಗಿ ಗಾಯಗೊಂಡಿದ್ದ ಚಂದ್ರಕಾಂತ ಕೂಡ ಆರೋಗ್ಯ ಸುಧಾರಿಸದೇ ಮೃತಪಟ್ಟಿದ್ದಾರೆ. ಒಂದು ತಿಂಗಳ ಬಾಣಂತಿಯಾಗಿರುವ ಪತ್ನಿ ಮತ್ತೂ ಈಗಷ್ಟೇ ಕಣ್ಣು ಬಿಟ್ಟಿರುವ ಮಗುವಿನ ಸ್ಥಿತಿ ಅಯೋಮಯವಾಗಿದೆ. ಪ್ರಕರಣ ಧಾರವಾಡ ಉಪನಗರ ಠಾಣೆಯಲ್ಲಿ ದಾಖಲಾಗಿದೆ.

- Advertisement -

Latest Posts

Don't Miss