ಆಗಸ್ಟ್ 7, 2020 ರಾಶಿ ಭವಿಷ್ಯ

ಮೇಷ: ಹತ್ತು ಹಲವು ಕೆಲಸಗಳಿಗಾಗಿ ಧನವ್ಯಯವಾಗಲಿದೆ. ನಿರುದ್ಯೋಗಿಗಳಿಗೆ ತಾತ್ಕಾಲಿಕ ಉದ್ಯೋಗ ದೊರಕಲಿದೆ. ಧರ್ಮಕಾರ್ಯಗಳಲ್ಲಿ ವಿಳಂಬವಾಗಲಿದೆ. ವೃತ್ತಿರಂಗದಲ್ಲಿ ಚೇತರಿಕೆಯು ಇದೆ.

ವೃಷಭ : ಸಾಮಾಜಿಕವಾಗಿ ಕೈಗೊಂಡ ಕಾರ್ಯಗಳು ಸಫಲತೆಯನ್ನು ಪಡೆಯಲಿದೆ. ಬಹುಪಾಲು ನೀವು ಸುಖಿಗಳನ್ನಬಹುದು. ಸರಕಾರಿ ಕೆಲಸದಲ್ಲಿ ಲಾಭವಿದೆ ಮಕ್ಕಳ ಬಗ್ಗೆ ಚಿಂತೆ ಇದೆ.

ಮಿಥುನ : ಶುಭಮಂಗಲ ಕಾರ್ಯಗಳಿಗೆ ವಿಘ್ನಭಯ ತೋರಿಬಂದರೂ ಹಿರಿಯರ ಅನುಗ್ರಹದಿಂದ ಕಾರ್ಯಸಾಧನೆಯಾಗಲಿದೆ. ಶಿಕ್ಷಣ ಕ್ಷೇತ್ರದಲ್ಲಿ ಬದಲಾವಣೆ ಸಾಧ್ಯತೆ ಇದೆ. ನ್ಯಾಯಾಲಯದಲ್ಲಿ ಜಯವಿದೆ.

ಕರ್ಕ : ರಾಜಕೀಯದಲ್ಲಿ ತಟಸ್ಥ ಧೋರಣೆ ಅತೀ ಉತ್ತಮವೆನ್ನಿಸಲಿದೆ. ಹಿರಿಯರಿಗೆ ಕಫ ದೋಷದಿಂದ ಅನಾರೋಗ್ಯ ಕಂಡುಬಂದೀತು. ದುಡುಕಿನ ನಿರ್ಧಾರಗಳು ಎಲ್ಲಾ ವಿಚಾರದಲ್ಲಿ ಪರಿಣಾಮವನ್ನ ಬೀರಲಿದೆ.

ಸಿಂಹ : ವಿದ್ಯಾಭ್ಯಾಸಕ್ಕಾಗಿ ಹೆಚ್ಚಿನ ಧನವ್ಯಯ ಕಂಡುಬರಲಿದೆ. ವ್ಯಾಪಾರ, ವ್ಯವಹಾರದಲ್ಲಿ ನಿರೀಕ್ಷಿತ ಲಾಭ ತಂದೀತು. ಗೃಹಿಣಿಗೆ ಇಷ್ಟಾಪೂರ್ತಿಯಿಂದ ತೃಪ್ತಿ ತರಲಿದೆ. ಹೊಸ ಮಿತ್ರರ ಸ್ನೇಹ ಲಾಭದಿಂದ ಕಾರ್ಯಸಾಧನೆಯಾಗಲಿದೆ.

ಕನ್ಯಾ : ಅನಾವಶ್ಯಕವಾಗಿ ಕಲಹಗಳು ತೋರಿಬಂದಾವು. ನಿರುದ್ಯೋಗಿಗಳು ತಾತ್ಕಾಲಿಕ ವೃತ್ತಿಯಲ್ಲೇ ನೆಮ್ಮದಿ ಕಂಡಾರು. ಸಾಂಸಾರಿಕವಾಗಿ ಕೆಲವೊಂದು ಸಮಸ್ಯೆಗಳು ಹಿರಿಯರಿಗೆ ಪ್ರತಿಕೂಲವಾಗಿ ಬೇಸರವಾಗಲಿದೆ.

ತುಲಾ : ವಾಹನ ಖರೀದಿಯ ಚಿಂತನೆ ಚಾಲನೆಗೆ ಬರಲಿದೆ. ನಿರೀಕ್ಷಿತ ಧನಾಗಮನದಿಂದ ಕಾರ್ಯಸಾಧನೆಯಾಗಲಿದೆ. ಪಾಲು ಬಂಡವಾಳದಲ್ಲಿ ಹಲವಾರು ಸಮಸ್ಯೆಗಳು ನಿಮ್ಮನ್ನು ಮುತ್ತಿಕೊಳ್ಳಲಿದೆ. ಜಾಗೃತೆ.

ವೃಶ್ಚಿಕ: ದಾಂಪತ್ಯದಲ್ಲಿ ಅನಾವಶ್ಯಕ ಕಲಹ ಕಂಡುಬರಲಿದೆ. ರಾಜಕೀಯ ಕ್ಷೇತ್ರದವರಿಗೆ ಮಾನಸಿಕ ನೆಮ್ಮದಿ ಇರದು. ಯೋಗ್ಯವಯಸ್ಕರಿಗೆ ಕಂಕಣಬಲ ಸಾಧ್ಯತೆ ಇದೆ. ಪ್ರಯತ್ನ ಬಲದ ಅಗತ್ಯವಿದೆ.

ಧನು : ದೂರ ಸಂಚಾರದಲ್ಲಿ ಕಾರ್ಯಸಾಧನೆ ಇದೆ. ವಿದ್ಯಾರ್ಥಿಗಳಿಗೆ ವಿದ್ಯಾಭ್ಯಾಸದಲ್ಲಿ ಆಸಕ್ತಿ ಬೆಳೆಯಲಿದೆ. ಕೌಟುಂಬಿಕವಾಗಿ ಆಗಾಗ ಕಿರಿಕಿರಿ ಇದ್ದರೂ, ಸುಧಾರಿಸಿಕೊಂಡು ಹೋಗಬಹುದಾಗಿದೆ ಮುನ್ನಡೆಯಿರಿ.

ಮಕರ: ಸಕಾಲಿಕ ಯೋಜನೆಗಳು ಕಾರ್ಯರೂಪಕ್ಕೆ ಬಂದರೂ ಮನಸ್ಸಿಗೆ ನೆಮ್ಮದಿ ಇರದು. ವೃತ್ತಿರಂಗದಲ್ಲಿ ಸಾವಧಾನವಾಗಿ ಮುನ್ನಡೆಯಿರಿ. ಹೊಸ ಸಾಮಗ್ರಿಗಳು ಮನೆಯನ್ನು ಅಲಂಕರಿಸಲಿದೆ. ಶುಭವಿದೆ.

ಕುಂಭ: ನೆರೆಹೊರೆಯವರೊಡನೆ ಅನಾವಶ್ಯಕ ಘರ್ಷಣೆ ತಂದೀತು. ಆಗಾಗ ಉದ್ವೇಗ ಪರಿಸ್ಥಿತಿಯಿಂದ ಮನಸ್ಸಿಗೆ ಸಮಾಧಾನವಿರದು. ದೇವತಾ ಕಾರ್ಯಗಳಿಗಾಗಿ ಧನವ್ಯಯವಾಗಲಿದೆ. ಅನಿರೀಕ್ಷಿತ ಭೇಟಿ ಇರುವುದು.

ಮೀನ: ಆಗಾಗ ಬಂಧುಮಿತ್ರರ ಆಗಮನದಿಂದ ಸಹಕಾರವಿದೆ. ಸಂಪಾದನೆಯ ಇನ್ನೊಂದು ದಾರಿ ಗೋಚರಿಸಲಿದೆ. ಹಿರಿಯರ ಆರೋಗ್ಯದ ಬಗ್ಗೆ ಎಚ್ಚರವಿರಲಿ. ವಿವಾಹಿತರಿಗೆ ಸಧ್ಯದಲ್ಲೇ ಶುಭವಾರ್ತೆ ಸಿಗಲಿದೆ.

ಶ್ರೀ ರಾಘವೇಂದ್ರ ಸ್ವಾಮಿ ಜ್ಯೋತಿಷ್ಯ ಕೇಂದ್ರ, ಮಹೇಶ್ ಭಟ್ ಗುರೂಜಿ, 9686999517,
ವಿದ್ಯೆ, ಉದ್ಯೋಗ, ವ್ಯಾಪಾರ, ಶತ್ರುಕಾಟ, ಪ್ರೀತಿಯಲ್ಲಿ ನಂಬಿ ಮೋಸ, ಆರೋಗ್ಯ, ಹಣಕಾಸು ಮದುವೆ,ಸಂತಾನ, ಪ್ರೇಮ ವಿವಾಹ, ಮಾಟ- ಮಂತ್ರ ದೋಷ ನಿವಾರಣೆ, ಇನ್ನಿತರ ಯಾವುದೇ ಸಮಸ್ಯೆ ಇದ್ದರೂ ಕರೆ ಮಾಡಿ.

About The Author