Thursday, August 21, 2025

Latest Posts

Hubli News: ಹಾನಿಯಾದ ಬೆಳೆಗಳ ಬಗ್ಗೆ ಅರ್ಜಿ ಸಲ್ಲಿಸಲು ಬಂದ ರೈತರು: ಕ್ಯಾರೇ ಎನ್ನದ ಕಂಪನಿ ಏಜೆಂಟರು

- Advertisement -

Hubli News: ಹುಬ್ಬಳ್ಳಿ: ಜಿಲ್ಲೆಯಲ್ಲಿ ಮಳೆ ನಿರಂತರವಾಗಿ ಸುರಿಯುತ್ತಿದ್ದು, ರೈತರ ಬೆಳೆಗಳು ಹಾನಿಯಾಗಿದೆ. ಇದೀಗ ಕಟಾವಿಗೆ ಬಂದಿದ್ದ ಹೆಸರು ಬೆಳೆ ಸಂಪೂರ್ಣವಾಗಿ ಮಳೆಯಿಂದಾಗಿ ಹಾನಿಗೆ ಒಳಗಾಗಿದ್ದು ಈ ಹಿನ್ನೆಲೆಯಲ್ಲಿ , ಶಿರಗುಪ್ಪಿ ಹೋಬಳಿ ರೈತರು ರೈತ ಸಂಪರ್ಕ ಕೇಂದ್ರಕ್ಕೆ ಅರ್ಜಿ ಸಲ್ಲಿಸಲು ಬಂದಿದ್ದ ರೈತರು ಪರದಾಡಿದ ಘಟನೆ ಬುಧವಾರ ನಡೆದಿದೆ.

72 ಗಂಟೆಗಳಲ್ಲಿ ಹಾನಿಗೊಳಗಾದ ಬೆಳೆಗಳ ಕುರಿತು ಅರ್ಜಿ ಸಲ್ಲಿಸಬೇಕೆಂಬ ಸುದ್ದಿ ಹಿನ್ನೆಲೆಯಲ್ಲಿ ಸಾವಿರಾರು ರೈತರು ರೈತ ಸಂಪರ್ಕ ಕೇಂದ್ರದ ಮುಂದೆ ಬೆಳಿಗ್ಗೆಯಿಂದಲೇ ಸರತಿಸಾಲಿನಲ್ಲಿ ನಿಂತಿದ್ದರು. ಆದರೆ ಮಧ್ಯಾಹ್ನ 12 ಗಂಟೆಯಾದರೂ ಯಾರೊಬ್ಬ ವಿಮಾ ಕಂಪನಿ ಏಜೆಂಟ್ ರು ಬಾರದ ಹಿನ್ನೆಲೆಯಲ್ಲಿ ರೈತರು ಜಿಲ್ಲಾಡಳಿತದ ವಿರುದ್ಧ ಕಿಡಿಕಾರಿದರು.

ಶಿರಗುಪ್ಪಿ ರೈತ ಮಹಾಬಳೇಶ ಅಣ್ಣಿಗೇರಿ ಹಾಗೂ ತಾಜುದ್ದೀನ್ ಮಾತನಾಡಿ, ಬೆಳಿಗ್ಗೆಯಿಂದಲೇ ಹಾನಿಗೊಳಗಾದ ಬೆಳೆಗಳ ಬಗ್ಗೆ ಅರ್ಜಿ ಸಲ್ಲಿಸಲು ಬಂದಿದ್ದೇವೆ. ಆದರೆ ಇಲ್ಲಿ ಯಾರೊಬ್ಬರೂ ನಮ್ಮ‌ ಅರ್ಜಿ ಸ್ವೀಕರಿಸುವವರಿಲ್ಲ, ಶೀಘ್ರವೇ ವಿಮಾ ಕಂಪನಿಯವರು ರೈತರ ಅರ್ಜಿಗಳನ್ನು ಪಡೆದು ಪರಿಹಾರ ಒದಗಿಸುವ ನಿಟ್ಟಿನಲ್ಲಿ ಕ್ರಮ ಕೈಗೊಳ್ಳಬೇಕು. ಅಲ್ಲದೇ ಜಿಲ್ಲಾಧಿಕಾರಿಗಳು, ಸಚಿವರು ಈ ಕುರಿತು ಗಮನ ಹರಿಸಬೇಕು. ಇಲ್ಲದಿದ್ದರೇ ಹೋರಾಟ ಅನಿವಾರ್ಯ ಎಂದು ಎಚ್ಚರಿಕೆ ನೀಡಿದರು.

ಈ ವೇಳೆ ಮಹಿಳೆಯರು, ಮಕ್ಕಳು, ಅನೇಕ ವಾಹನಗಳ ಜೊತೆಗೆ ರೈತ ಸಂಪರ್ಕ ಕೇಂದ್ರಕ್ಕೆ ಬಂದು ಅರ್ಜಿ ಸ್ವೀಕರಿಸುವುದನ್ನು ಸುರಿಯುತ್ತಿರುವ ಮಳೆಯಲ್ಲಿ ಎದುರು ನೋಡುತ್ತಿದ್ದರು.

- Advertisement -

Latest Posts

Don't Miss