Thursday, August 21, 2025

Latest Posts

ಕೋಡಿ ಹರಿಯುತ್ತಿದೆ ಉಣಕಲ್ ಕೆರೆ: ಮಳೆ ಅಬ್ಬರಕ್ಕೆ ಮೈತುಂಬಿದೆ ಪ್ರವಾಸಿ ತಾಣ..!

- Advertisement -

Hubli News: ಹುಬ್ಬಳ್ಳಿ: ವಾಣಿಜ್ಯನಗರಿ ಹುಬ್ಬಳ್ಳಿ ಸೇರಿದಂತೆ ಧಾರವಾಡ ಜಿಲ್ಲೆಯಲ್ಲಿ ವರುಣನ ಆರ್ಭಟ ಜೋರಾಗಿದೆ. ಎಲ್ಲೆಡೆಯೂ ನಿರಂತರ ಮಳೆಯಾಗುತ್ತಿದ್ದು, ಬಹುತೇಕ ಜನಜೀವನ ಅಸ್ತವ್ಯಸ್ತಗೊಂಡಿದೆ. ಈ ನಡುವೆ ಹುಬ್ಬಳ್ಳಿಯ ಪ್ರತಿಷ್ಠಿತ ಉಣಕಲ್ ಕೆರೆಯು ಕೋಡಿ ಹರಿಯುತ್ತಿದೆ.

ಹೌದು.. ನಗರದಲ್ಲಿ ಉತ್ತಮ ಮಳೆಯಾಗುತ್ತಿದ್ದು, ಉಣಕಲ್ ಕೆರೆ ಕೋಡಿ ಹರಿಯುತ್ತಿದೆ. ಕೆರೆ ಬಳಿ ಸ್ಮಾರ್ಟ್ ಸಿಟಿ ಯೋಜನೆಯಡಿ ನಡಿಗೆ ಪಥ ನಿರ್ಮಿಸಲಾಗಿದ್ದು, ಕೋಡಿ ಹರಿಯುವುದನ್ನು ವೀಕ್ಷಿಸಲು ಜನರಿಗೆ ಅನುಕೂಲವಾಗಿದೆ. ಆದರೇ ಬಿಡದೇ ಸುರಿಯುತ್ತಿರುವ ಮಳೆಯಿಂದ ಜನರು ಕಂಗಾಲಾಗಿದ್ದಾರೆ.

ಉಣಕಲ್ ಕೆರೆ ಮೈದುಂಬಿದೆ. ಪ್ರತಿವರ್ಷ ಕೋಡಿ ಹರಿದಾಗಲೂ ಜನರು ತಂಡಗಳಲ್ಲಿ ಬಂದು, ವೀಕ್ಷಿಸುತ್ತಾರೆ. ಆದರೆ, ಕೆರೆಯಲ್ಲಿ ಸಂಗ್ರಹವಾದ ತ್ಯಾಜ್ಯ ಕೋಡಿ ಹರಿವ ನೀರಿನ ಮೂಲಕ ರಾಜಕಾಲುವೆ ಸೇರುತ್ತಿದೆ. ರಾಜಕಾಲುವೆ ತುಂಬಿದರೆ, ಮನೆಗಳಿಗೆ ನೀರು ನುಗ್ಗುವ ಆತಂಕ ಎದುರಾಗಿದೆ. ಈಗಾಗಲೇ ಬಹುತೇಕ ಕಡೆಯಲ್ಲಿ ರಾಜಕಾಲುವೆ ಸಂಪೂರ್ಣ ಕಸದಿಂದ ತುಂಬಿದ್ದು, ಜನರಲ್ಲಿ ಆತಂಕ ಮನೆಮಾಡಿದೆ.

ಸಂಗಮೇಶ್ ಸತ್ತಿಗೇರಿ ಕರ್ನಾಟಕ ಟಿವಿ ಹುಬ್ಬಳ್ಳಿ

- Advertisement -

Latest Posts

Don't Miss