Hubli News: ಹುಬ್ಬಳ್ಳಿ: ಧರ್ಮಸ್ಥಳ ಪ್ರಕರಣದಲ್ಲಿ ಸಿಎಂ ಸಿದ್ಧರಾಮಯ್ಯನವರ ಮೌನ ಅರ್ಥವಾಗುತ್ತಿಲ್ಲ. ರಾಜ್ಯ ಸರ್ಕಾರದ ನಡೆಯಿಂದ ಬೇಸತ್ತು ಕೇಂದ್ರಕ್ಕೆ ನಿಯೋಗ ತೆಗೆದುಕೊಂಡು ಹೋಗಲು ನಿರ್ಧಾರ ಮಾಡಿದ್ದೇವೆ ಎಂದು ಜೈನಮುನಿ ರಾಷ್ಟ್ರಸಂತ ಗುಣಧರ ನಂದಿ ಸ್ವಾಮೀಜಿ ರಾಜ್ಯ ಸರ್ಕಾರದ ವಿರುದ್ಧ ಅಸಮಾಧಾನ ವ್ಯಕ್ತಪಡಿಸಿದರು.
ಧರ್ಮಸ್ಥಳ ಪ್ರಕರಣಕ್ಕೆ ಸಂಬಂಧಿಸಿದಂತೆ ಮಾಧ್ಯಮದ ಜೊತೆಗೆ ಮಾತನಾಡಿದ ಅವರು,ಧರ್ಮಸ್ಥಳದ ಮೇಲೆ ಆಗುತ್ತಿರುವ ಷಡ್ಯಂತ್ರ ಮನಸ್ಸಿಗೆ ಸಾಕಷ್ಟು ನೋವಾಗಿದೆ. ಕನ್ನಡ ನಾಡಿನಲ್ಲಿ ಇಂತಹ ಷಡ್ಯಂತ್ರ ನಡೆಯುತ್ತಿರುವುದು ನಿಜಕ್ಕೂ ಬೇಸರವಾಗಿದೆ. ಷಡ್ಯಂತ್ರದ ವಿರುದ್ಧ ಜನರು ಬೀದಿಗೆ ಇಳಿದು ಹೋರಾಟ ಮಾಡುತ್ತಿದ್ದಾರೆ.ಸರ್ಕಾರಕ್ಕೆ ಕೈಮುಗಿದು ಬೇಡಿಕೊಳ್ಳುತ್ತಿದ್ದಾರೆ.ಷಡ್ಯಂತ್ರ ಮಾಡುವವರನ್ನು ಬಂಧಿಸುವಂತೆ ಆಗ್ರಹಿಸಿದ್ದಾರೆ ಎಂದರು.
ಹೋರಾಟ ಮಾಡಿದರೂ, ಸರ್ಕಾರ ಎಚ್ಚೇತ್ತುಕೊಳ್ಳುತ್ತಿಲ್ಲ. ಕಳೆದ ಹದಿನೈದು ದಿನದಿಂದ ಜನ ಬೀದಿಯಲ್ಲಿ ಹೋರಾಟ ಮಾಡ್ತಿದ್ದಾರೆ. ಮುಖ್ಯಮಂತ್ರಿ ಯಾವ ಮೂಲೆಯಲ್ಲಿ ಕುಳಿತಿದ್ದಾರೆ. ಮುಖ್ಯಮಂತ್ರಿ ಒಂದೇ ಒಂದು ಮಾತನ್ನು ಈ ಬಗ್ಗೆ ಸಹಾನುಭೂತಿಯಿಂದ ಸಹ ಮಾತನಾಡುತ್ತಿಲ್ಲ. ಮುಖ್ಯಮಂತ್ರಿ ಸುಮ್ಮನೆ ಕುಳಿತಿರುವುದು ಮಾತ್ರ ಅರ್ಥ ಆಗ್ತಿಲ್ಲ. ಆದ್ದರಿಂದ ಕೇಂದ್ರ ಗೃಹ ಮಂತ್ರಿ ಅಮಿಶ್ ತ್ ಶಾ ಬಳಿಗೆ ನಿಯೋಗ ತೆಗೆದುಕೊಂಡು ಹೋಗುತ್ತಿದ್ದೇವೆ ಎಂದು ಅವರು ಹೇಳಿದರು.
ರಾಜ್ಯ ಸರ್ಕಾರ ನಡೆಯಿಂದ ಬೇಸತ್ತು ಸಾಧು ಸಂತರಿರುವ ಒಂದು ನಿಯೋಗ ಕೇಂದ್ರ ಸಚಿವರನ್ನು ಭೇಟಿ ಮಾಡುತ್ತೇ. ಈಗಾಗಲೇ ಕೇಂದ್ರದ ಗೃಹ ಮಂತ್ರಿಗೆ ಮನವಿ ಮಾಡುವ ಮೂಲಕ ಸಮಯ ತೆಗೆದುಕೊಳ್ಳಲಾಗುತ್ತಿದೆ ಎಂದು ಅವರು ಮಾಹಿತಿ ನೀಡಿದರು.