Friday, August 29, 2025

Latest Posts

ಹುಲ್ಲಿನ ಮೇಲೆ ಬರಿಗಾಲಿನಲ್ಲಿ ನಡೆದರೆ ಆರೋಗ್ಯಕ್ಕಾಗಲಿದೆ ಅತ್ಯುತ್ತಮ ಲಾಭ

- Advertisement -

Health Tips: ಇಂದಿನ ಕಾಲದಲ್ಲಿ ಹುಲ್ಲಿರುವ ಜಾಗ ಕಾಣೋದೇ ಅಪರೂಪ. ಆದರೆ ನಿಮಗೇನಾದರೂ ಹುಲ್ಲಿರುವ ಜಾಗ ಕಂಡರೆ, ಅದರ ಮೇಲೆ ಚಪ್ಪಲಿ ಧರಿಸದೇ, ನಡೆಯಲು ಪ್ರಯತ್ನಿಸಿ. ಯಾಕಂದ್ರೆ ಹುಲ್ಲಿನ ಮೇಲೆ ಚಪ್ಪಲಿ ಇಲ್ಲದೇ, ನಡೆದರೆ, ಅದರಿಂದ ನಮ್ಮ ಆರೋಗ್ಯಕ್ಕೆ ಸಿಕ್ಕಾಪಟ್ಟೆ ಲಾಭವಿದೆ. ಹಾಗಾದ್ರೆ ಏನದು ಆರೋಗ್ಯ ಲಾಭ ಅಂತಾ ತಿಳಿಯೋಣ ಬನ್ನಿ..

ಬೆಳಗ್ಗಿನ ಜಾಗ ನೀವು ಹುಲ್ಲಿನ ಮೇಲೆ ಬರಿಗಾಲಿನಲ್ಲಿ ನಡೆದರೆ ನಿಮ್ಮ ದೃಷ್ಟಿ ತುಂಬಾ ಉತ್ತಮ. ನಿಮ್ಮ ಕಣ್ಣಿನ ಆರೋಗ್ಯ ಸುಧಾರಿಸುತ್ತದೆ. ದೃಷ್ಟಿ ತೀಕ್ಷ್ಣವಾಗುತ್ತದೆ. ಹಸಿರು ಹುಲ್ಲನ್ನು ನೋಡುವುದರಿಂದ ಕಣ್ಣು ತಂಪಾಗಿ, ಗ್ಯಾಜೇಟ್ಸ್‌ನ ನೀಲಿಬಣ್ಣದ ಎಫೆಕ್ಟ್ ತುಂಬಾ ಕಡಿಮೆಯಾಗುತ್ತದೆ.

ತುಂಬಾ ಟೆನ್ಶನ್ ಇದೆ. ಮನಸ್ಸಿಗೆ ಸಮಾಧಾನವೇ ಇಲ್ಲ. ತಳಮಳವಿದೆ ಎಂದಲ್ಲಿ ನೀವು ಪ್ರತಿದಿನ ಬಿಡುವು ಮಾಡಿಕ“ಂಡು, ಬೆಳಗ್ಗಿನ ಜಾವ ಸ್ವಲ್ಪ ಸಮಯ ಹುಲ್ಲಿನ ಮೇಲೆ ಬರಿಗಾಲಿನಲ್ಲಿ ವಾಕ್ ಮಾಡಿ. ಇದರಿಂದ ಮಾನಸಿಕ ನೆಮ್ಮದಿ ಸಿಗುತ್ತದೆ. ಟೆನ್ಶನ್ ಕಡಿಮೆಯಾಗುತ್ತದೆ.

ಹುಲ್ಲಿನ ಮೇಲೆ ಬರಿಗಾಲಿನಲ್ಲಿ ನಡೆದರೆ, ಹೈ ಬಿಪಿ ಕಂಟ್ರೋಲಿಗೆ ಬರುತ್ತದೆ. ಬಿಪಿ ನಾರ್ಮಲ್ ಆಗುತ್ತದೆ. ಇನ್ನು ಕಡೆಯದಾಗಿ ಮೆದುಳಿನ ಆರೋಗ್ಯ ಚೆನ್ನಾಗಿರುತ್ತದೆ. ಮೆದುಳು ಚೆನ್ನಾಗಿ ಕಾರ್ಯ ನಿರ್ವಹಿಸುತ್ತದೆ.

- Advertisement -

Latest Posts

Don't Miss