ಮೇಷ : ಕಾರ್ಯಕ್ಷೇತ್ರದಲ್ಲಿ ಕಠಿಣ ನಿಲುವುಗಳನ್ನ ತೆಗೆದುಕೊಳ್ಳಬೇಕಾಗುತ್ತದೆ. ವಿದ್ಯಾರ್ಥಿಗಳು ತಮ್ಮ ಪರಿಶ್ರಮದ ಬೆಲೆಯನ್ನ ತಿಳಿಯುವಂತಾದೀತು. ವಾಹನ ಚಾಲಕರಿಗೆ ಚೇತರಿಕೆಯ ದಿನವಿದು, ಶುಭವಿದೆ.
ವೃಷಭ: ಸುಖ ದುಃಖ ಎರಡರ ಸಮ್ಮಿಶ್ರ ಫಲ ನಿಮಗಿದೆ. ಕೌಟುಂಬಿಕ ಒತ್ತಡಗಳು ನಿಮ್ಮನ್ನು ಬಾಧಿಸಲಿದೆ. ವ್ಯಾಪಾರ ವ್ಯವಹಾರಗಳಲ್ಲಿ ತುಸು ಹೂಡಿಕೆಯನ್ನ ಮಾಡಬಹುದಾಗಿದೆ. ಆರ್ಥಿಕವಾಗಿ ಸಮಾಧಾನವಿರದು.
ಮಿಥುನ : ಅನಾವಶ್ಯಕವಾದ ಖರ್ಚುಗಳು ತೋರಿಬಂದಾವು. ದಾಯಾದಿ ನಿಮ್ಮನ್ನು ಕೆಣಕಲಿದ್ದಾರೆ. ತಾಳ್ಮೆ ಸಮಾಧಾನವಿರಲಿ. ವೃತ್ತಿರಂಗದಲ್ಲಿ ಅಧಿಕಾರಿಗಳಿಂದ ಕಿರುಕುಳವನ್ನು ಅನುಭವಿಸಬೇಕಾದೀತು. ದಿನಾಂತ್ಯ ಶುಭವಿದೆ.
ಕರ್ಕ : ಧಾರ್ಮಿಕ ಕೆಲಸ ಕಾರ್ಯಗಳಲ್ಲಿ ನೀವಿಂದು ಹೆಚ್ಚಿನ ಆಸಕ್ತಿ ವಹಿಸುವಂತಾದೀತು. ಕೌಟುಂಬಿಕ ಪರಿಸರದಲ್ಲಿ ಹೆಚ್ಚಿನ ಸುಖವನ್ನ ಅನುಭವಿಸಲಿದ್ದೀರಿ. ಅರ್ಧಕ್ಕೆ ನಿಂತ ಕೆಲಸ ಕಾರ್ಯಗಳು ಪೂರ್ಣ ಗೊಳ್ಳಲಿದೆ.
ಸಿಂಹ : ಅನಿರೀಕ್ಷಿತ ಪ್ರೀತಿಪಾತ್ರರ ಸಮಾಗಮದಿಂದ ಸಂತೋಷ ತಂದೀತು. ಅವರ ಸಹಕಾರದಿಂದ ನಿಮ್ಮ ಕೆಲಸ ಕಾರ್ಯಗಳಿಗೆ ಅನುಕೂಲವಾಗಲಿದೆ. ನವದಂಪತಿಗಳಿಗೆ ಸಂತೋಷದ ವಾರ್ತೆ ಇದೆ. ದಿನಾಂತ್ಯ ಕಿರು ಸಂಚಾರವಿದೆ.
ಕನ್ಯಾ : ಇತರರ ಕೆಲಸ ಕಾರ್ಯಗಳಿಗಾಗಿ ತಿರುಗಾಟವಿದೆ. ಕ್ಷುಲ್ಲಕ ವಿಚಾರಗಳಿಗೂ ಚಿಂತಿಸುವಂತಾದಿತು. ಸಾಂಸಾರಿಕವಾಗಿ ಮನಸ್ಸು ಕೆಡುವ ಪ್ರಸಂಗ ಉದ್ಭವಿಸಬಹುದು. ವೈಯಕ್ತಿಕ ಆರೋಗ್ಯದ ಬಗ್ಗೆ ಹೆಚ್ಚಿನ ಜಾಗೃತೆ ಮಾಡಿರಿ.
ತುಲಾ : ವೃತ್ತಿರಂಗದಲ್ಲಿ ಒದ್ದಾಟದಿಂದ ಕಿರಿಕಿರಿ ಎನ್ನಿಸಲಿದೆ. ನಿಮ್ಮ ಆರ್ಥಿಕವಿಚಾರದ ಬಗ್ಗೆ ಚಿಂತಿಸಬೇಕಾಗುತ್ತದೆ. ನಿಮ್ಮ ನೆಚ್ಚಿನ ಹವ್ಯಾಸಕ್ಕೆ ಗಮನವಿಟ್ಟರೆ ಸಮಾಧಾನವು ಸಿಗಲಿದೆ. ದಿನಾಂತ್ಯ ಶುಭವಾರ್ತೆ.
ವೃಶ್ಚಿಕ: ಸಂತೋಷ ಮೋಜಿನ ದಿನವಿದು. ಆಪ್ತರೊಂದಿಗೆ ಸಂತೋಷದಿಂದ ಕಳೆಯುವಿರಿ. ವೃತ್ತಿರಂಗದಲ್ಲಿ ಹೊಂದಾಣಿಕೆಯಿಂದ ಮುನ್ನಡೆಯಿರಿ. ಕಾರ್ಯಸಾಧನೆಯಾಗಲಿದೆ. ನೌಕರ ವರ್ಗದವರು ಅಸಹಕಾರ ನೀಡಿಯಾರು.
ಧನು: ಧಾರ್ಮಿಕ ವಿಚಾರದಲ್ಲಿ ನಿಮಗೆ ಆಸಕ್ತಿ ತೋರಿಬರಲಿದೆ. ಸಾಂಸಾರಿಕ ಸುಖ ನೆಮ್ಮದಿ ತರಲಿದೆ. ಇತರರ ಭಾವನೆಗಳನ್ನ ನೋಯಿಸದಿರಿ. ವಿದ್ಯಾರ್ಥಿಗಳಿಗೆ ಉತ್ಸಾಹದ ದಿನವಿದು. ಇದರ ಸದುಪಯೋಗ ಮಾಡಿರಿ.
ಮಕರ: ಆರ್ಥಿಕವಾಗಿ ಅಭಿವೃದ್ಧಿಯ ದಿನಗಳಿವು. ವೃತ್ತಿರಂಗದಲ್ಲಿ ಸಹೋದ್ಯೋಗಿಗಳ ಸಹಕಾರದಿಂದ ಕಾರ್ಯಸಾಧನೆಯಾಗಲಿದೆ. ಆದುದರಿಂದ ನಿಮಗೆ ಸಂತೋಷ ಸಿಗಲಿದೆ. ವೃತ್ತಿಯಲ್ಲಿ ಮನಸ್ಸು ಕೆಟ್ಟುಹೋದೀತು.
ಕುಂಭ: ನಿಮಗೆ ವೃತ್ತಿಪರತೆ ಉತ್ತಮ ಫಲ ನೀಡಲಿದೆ. ನಕಾರಾತ್ಮಕ ವಿಚಾರಗಳ ಬಗ್ಗೆ ದೂರವಿರಿ. ಕ್ಷುಲ್ಲಕ ವಿಚಾರವನ್ನ ಚಿಂತಿಸದಿರಿ. ಬಾಕಿ ಉಳಿದಿರುವ ಕೆಲಸಗಳನ್ನ ಬೇಗ ಪೂರೈಸಲು ಪ್ರಯತ್ನಿಸಿರಿ. ಶಾಂತಿ ಸಿಗಲಿದೆ.
ಮೀನ: ಪ್ರೀತಿ ಪಾತ್ರರೊಂದಿಗೆ ಆತ್ಮೀಯತೆ ಗಾಢವಾಗಲಿದೆ. ಅನಿರೀಕ್ಷಿತ ಧನಲಾಭದಿಂದ ಕಾರ್ಯಸಾಧನೆ ಅಚ್ಚರಿ ತಂದೀತು. ಯಾವುದೇ ಕಾರ್ಯಗಳು ವಿಳಂಬಿಸಿದಷ್ಟು ನಿಮಗೆ ಸಮಸ್ಯೆಗಳು ಗೋಚರವಾಗಲಿದೆ.
ಶ್ರೀ ರಾಘವೇಂದ್ರ ಸ್ವಾಮಿ ಜ್ಯೋತಿಷ್ಯ ಕೇಂದ್ರ, ಮಹೇಶ್ ಭಟ್ ಗುರೂಜಿ, 9686999517,
ವಿದ್ಯೆ, ಉದ್ಯೋಗ, ವ್ಯಾಪಾರ, ಶತ್ರುಕಾಟ, ಪ್ರೀತಿಯಲ್ಲಿ ನಂಬಿ ಮೋಸ, ಆರೋಗ್ಯ, ಹಣಕಾಸು ಮದುವೆ,ಸಂತಾನ, ಪ್ರೇಮ ವಿವಾಹ, ಮಾಟ- ಮಂತ್ರ ದೋಷ ನಿವಾರಣೆ, ಇನ್ನಿತರ ಯಾವುದೇ ಸಮಸ್ಯೆ ಇದ್ದರೂ ಕರೆ ಮಾಡಿ.