Wednesday, September 24, 2025

Latest Posts

Chitradurga News: ಶಾಸಕ ಕೆ.ಸಿ.ವಿರೇಂದ್ರ ಪಪ್ಪಿ ಮನೆ ಮೇಲೆ ದಾಳಿ, 17 ಕಡೆ ಶೋಧ

- Advertisement -

Chitradurga News: ಚಿತ್ರದುರ್ಗ: ಚಿತ್ರದುರ್ಗ ಶಾಸಕ ಕೆ.ಸಿ.ವಿರೇಂದ್‌ರ ಪಪ್ಪಿ ಮನೆ ಮೇಲೆ ಇಡಿ ದಾಳಿ ಮಾಡಿದ್ದು, ಪಪ್ಪಿ ಮತ್ತು ಅವರ ಅಣ್ಣ ಕೆ.ಸಿ.ನಾಗರಾಜ್ ಮನೆಯಲ್ಲಿ ಇಡಿ ಶೋಧಕಾರ್ಯ ನಡೆಸಿದೆ. ದೆಹಲಿಯಿಂದ ಬಂದಿರುವ ತಂಡ ಈ ದಾಳಿ ನಡೆಸಿದೆ.

ಚಿತ್ರದುರ್ಗದ ಚಳ್ಳಕೆರೆ  ನಗರದ ಹಳೆ ಟೌನ್‌ನಲ್ಲಿ ಮನೆ ಇರುವುದಲ್ಲದೇ, ಗೋವಾ, ಬೆಂಗಳೂರಿನಲ್ಲಿ ಕೂಡ ಮನೆ ಇದ್ದು, ಈ ಮನೆಗಳ ಮೇಲೂ ದಾಳಿ ನಡೆಸಲಾಗಿದೆ. ಎಲ್ಲ ಸೇರಿ 17 ಕಡೆ ಶಾಸಕರ ಒಡೆತನ ಇರುವ ಸ್ಥಳಗಳ ಮೇಲೆ ದಾಳಿ ನಡೆಸಲಾಗಿದೆ. 7 ಖಾಸಗಿ ವಾಹನಗಳಲ್ಲಿ ಬಂದಿರುವ ಇಡಿ ತಂಡದಿಂದ ದಾಳಿ ನಡೆದಿದೆ.

ಇನ್ನು ಶಾಸಕ ಕೆ.ಸಿ.ವೀರೇಂದ್ರ ಮನೆ ಮತ್ತು ಸಂಬಂಧಿಕರಾದ ಹೊಸಮನೆ ಸ್ವಾಮಿ ಮನೆಯಲ್ಲೂ ಶೋಧ ನಡೆದಿದ್ದು, ಶಾಸಕರು ಉದ್ಯಮಕ್ಕೆ ಸಂಬಂಧಿಸಿದಂತೆ ಬೇರೆ ರಾಜ್ಯಕ್ಕೆ ಹೋಗಿದ್ದಾರೆಂದು ಮಾಹಿತಿ ಇದೆ.

- Advertisement -

Latest Posts

Don't Miss