Hubli News: ಕ್ಷುಲ್ಲಕ ಕಾರಣಕ್ಕೆ ತಂದೆಗೆ ಚಾಕು ಇರಿದ ಮಗ

Hubli News: ಹುಬ್ಬಳ್ಳಿ: ಹುಬ್ಬಳ್ಳಿಯಲ್ಲಿ ಮಗನೇ ತಂದೆಗೆ ಚಾಕು ಇರಿದ ಘಟನೆ ನಡೆದಿದ್ದು, ಇಲ್ಲಿನ ಅದರಗುಂಚಿ ಗ್ರಾಮದಲ್ಲಿ ಈ ಘಟನೆ ಸಂಭವಿಸಿದೆ.

ಯಲ್ಲಪ್ಪ ಸುಂಕದ (52) ಎಂಬುವವರಿಗೆ, ಮಗ ಮಹಾಂತೇಶ ಸುಂಕದ (22) ಎಂಬಾತ ಚಾಕು ಹಾಕಿದ್ದಾನೆ. ಕ್ಷುಲ್ಲಕ ಕಾರಣಕ್ಕೆ ಮಾತಿನ ಚಕಮಕಿ ಆರಂಭವಾಗಿದ್ದು, ಬಳಿಕ ಜಗಳ ಅತೀರೇಕಕ್ಕೆ ಹೋಗಿದೆ. ಈ ವೇಳೆ ಪುತ್ರ ತಂದೆಯ ಮೇಲೆ ಚಾಕುವಿನಿಂದ ದಾಳಿ ಮಾಡಿದ್ದು, 4 ಕಡೆ ಇರಿದಿದ್ದಾನೆ.

ಸದ್ಯ ಹುಬ್ಬಳ್ಳಿಯ ಕಿಮ್ಸ್ ಗೆ ಗಾಯಳು ಯಲ್ಲಪ್ಪ ಸುಂಕದರನ್ನು ರವಾನಿಸಲಾಾಗಿದ್ದು, ಆಸ್ಪತ್ರೆಯಲ್ಲಿ ಚಿಿಕಿತ್ಸೆ ಮುಂದುವರೆದಿದೆ.

About The Author