Wednesday, December 3, 2025

Latest Posts

ಸಿಎಂ, ಡಿಸಿಎಂ ಅಮಾಯಕರ ಸಾವಿಗೆ ಕನಿಷ್ಠ ಪಶ್ಚಾತಾಪವೂ ಇಲ್ಲದ ಹೃದಯಹೀನರಾಗಿದ್ದಾರೆ: ಆರ್.ಅಶೋಕ್

- Advertisement -

Political News: ಐಪಿಎಲ್‌ ಸಂಭ್ರಮಾಚರಣೆ ವೇಳೆ ಕಾಲ್ತುಳಿತ ಸಂಭವಿಸಿ 11 ಜನ ಮೃತರಾಗಿದ್ದಾರೆ. ಇದಕ್ಕೆಲ್ಲ ಕಾಂಗ್ರೆಸ್ ಸರ್ಕಾರ ಕಾರಣ. ಆದರೆ ಆ ತಪ್ಪನ್ನು ಸರ್ಕಾರ ಸ್ವೀಕರಿಸುತ್ತಿಲ್ಲವೆಂದು ವಿರೋಧ ಪಕ್ಷದ ನಾಯಕ ಆರ್.ಅಶೋಕ್ ಆರೋಪಿಸಿದ್ದಾರೆ.

ಸದನದಲ್ಲಿಂದು ಮಾತನಾಡಿರುವ ಅವರು, ಐಪಿಎಲ್ ವಿಜಯೋತ್ಸವ ಕಾಲ್ತುಳಿತ ದುರಂತಕ್ಕೆ ಗೃಹ ಸಚಿವ ಜಿ.ಪರಮೇಶ್ವರ್ ಅವರು ಹಾಗೂ ಪೊಲೀಸ್ ಇಲಾಖೆಯೇ ಹೊಣೆ ಎನ್ನುವಂತೆ ಬಿಂಬಿಸಿ ಸಿಎಂ ಸಿದ್ದರಾಮಯ್ಯ ಹಾಗೂ ಡಿಸಿಎಂ ಡಿ.ಕೆ.ಶಿವಕುಮಾರ್ ಅವರು ತಮ್ಮ ಹೊಣೆಗಾರಿಕೆಯಿಂದ ನುಣುಚಿಕೊಳ್ಳುತ್ತಿದ್ದಾರೆ ಎಂದು ಆರೋಪಿಸಿದ್ದಾರೆ.

ಜನರನ್ನು ಕರೆದಿದ್ದು ಕಾಂಗ್ರೆಸ್ ಸರ್ಕಾರ, ಸಂಭ್ರಮ ಪಟ್ಟಿದ್ದು ಕಾಂಗ್ರೆಸ್ ಸರ್ಕಾರ.ಹಾಗಾದರೆ ಸೂಕ್ತ ಭ್ರದತೆ ಕೊಡಬೇಕಾಗಿದ್ದಿದ್ದು ಯಾರು? ಅದೂ ಸರ್ಕಾರದ ಜವಾಬ್ದಾರಿ ಅಲ್ಲವೇ? ಐಪಿಎಲ್ ಕಾಲ್ತುಳಿತ ದುರಂತದ ಬಗ್ಗೆ ಉತ್ತರ ಕೊಡಬೇಕಾದ ಸಿಎಂ ಸಿದ್ದರಾಮಯ್ಯ ಹಾಗೂ ಡಿಸಿಎಂ ಡಿ.ಕೆ.ಶಿವಕುಮಾರ್ ಅವರು ನಿರುತ್ತರರಾಗಿದ್ದಾರೆ. 11 ಜನ ಅಮಾಯಕ ಯುವಕರ ಸಾವಿಗೆ ಕನಿಷ್ಠ ಪಶ್ಚಾತಾಪವೂ ಇಲ್ಲದ ಹೃದಯಹೀನರಾಗಿದ್ದರೆ ಎಂದು ಅಶೋಕ್ ಅಸಮಾಧಾನ ವ್ಯಕ್ತಪಡಿಸಿದ್ದಾರೆ.

ಐಪಿಎಲ್ ಕಾಲ್ತುಳಿತ ದುರಂತ ಒಂದು ಸರ್ಕಾರಿ ಪ್ರಾಯೋಜಿತ ಹತ್ಯಾಕಾಂಡ ಎಂಬುದರಲ್ಲಿ ಅನುಮಾನವೇ ಇಲ್ಲ. ಈ ದುರಂತದಲ್ಲಿ ಮೃತಪಟ್ಟ 11 ಅಮಾಯಕ ಯುವಕರ ಸಾವಿಗೆ ಕಾಂಗ್ರೆಸ್ ಸರ್ಕಾರವೇ ನೇರ ಕಾರಣ. ಸರ್ಕಾರ ಈಗಲಾದರೂ ತನ್ನ ತಪ್ಪನ್ನ ಒಪ್ಪಿಕೊಂಡು, ಎದೆಯೆತ್ತರಕ್ಕೆ ಬೆಳೆದ ಮಕ್ಕಳನ್ನು ಕಳೆದುಕೊಂಡ ಹೆತ್ತವರಿಗೆ ಕ್ಷಮಾಪಣೆ ಕೇಳಲಿ. ಇದು ನಮ್ಮೆಲ್ಲರ ಆಗ್ರಹ ಎಂದು ಆರ್. ಅಶೋಕ್ ಆಗ್ರಹಿಸಿದ್ದಾರೆ.

- Advertisement -

Latest Posts

Don't Miss