Recipe: ಬೇಕಾಗುವ ಸಾಮಗ್ರಿ: 1 ಕಪ್ ಬಾಸ್ಮತಿ ಅಕ್ಕಿ, ಡ್ರೈ ಚಿಲ್ಲಿ, 1 ಸ್ಪೂನ್ ಟೋಮೆಟೋ ಸಾಸ್, 1 ಈರುಳ್ಳಿ, ಕ್ಯಾರೇಟ್, ಸ್ಪ್ರಿಂಗ್ ಆನಿಯನ್, ಬೀನ್ಸ್, ಬೆಳ್ಳುಳ್ಳಿ, ಶುಂಠಿ, ಹಸಿಮೆಣಸಿನ ಪೇಸ್ಟ್, 1 ಸ್ಪೂನ್ ಪೆಪ್ಪರ್ ಪುಡಿ, 1 ಸ್ಪೂನ್ ವಿನೇಗರ್, ಉಪ್ಪು.
ಮಾಡುವ ವಿಧಾನ: ಅಕ್ಕಿಯನ್ನು ಕ್ಲೀನ್ ಮಾಡಿ ಕುದಿಯುವ ನೀರಿಗೆ ಹಾಕಿ, ಉಪ್ಪಿನ ಜತೆ ಕುದಿಸಿ. ಬಳಿಕ ಅನ್ನ ಸ್ವಲ್ಪ ಬೇಯುತ್ತಿದ್ದ ಹಾಗೆ ಗಂಜಿ ಬಸಿಯಿರಿ. ನಂತರ ಅನ್ನವನ್ನು ಹರಿವಾಣಕ್ಕೆ ಹಾಕಿ. ಅನ್ನ ಉದುರು ಉದುರಾಗುತ್ತದೆ.
ಈಗ 1 ಬೌಲ್ನಲ್ಲಿ ಬಿಸಿ ನೀರು ಹಾಕಿ, ಅದರಲ್ಲಿ ಖಾರ ಬೇಕಾದಷ್ಟು ಡ್ರೈ ಚಿಲ್ಲಿ ಹಾಕಿ. 15 ನಿಮಿಷ ನೆನೆಸಿಡಿ. ಬಳಿಕ ಅದನ್ನು ಮಿಕ್ಸಿ ಜಾರ್ಗೆ ಹಾಕಿ, ಪೇಸ್ಟ್ ತಯಾರಿಸಿ. ನಂತರ ಪ್ಯಾನ್ ಬಿಸಿ ಮಾಡಿ, 6ರಿಂದ 7 ಸ್ಪೂನ್ ಎಣ್ಣೆ ಹಾಕಿ, ಅದರಲ್ಲಿ ಮೆಣಸಿನ ಪೇಸ್ಟ್ ಹಾಕಿ ಚೆನ್ನಾಗಿ ಹುರಿಯಿರಿ.
ಈ ಚಿಲ್ಲಿ ಸಾಸ್ 1 ಡಬ್ಬಕ್ಕೆ ಹಾಕಿ. ಈಗ ಮತ್ತೆ ಪ್ಯಾನ್ ಬಿಸಿ ಮಾಡಿ, ಎಣ್ಣೆ, ಈರುಳ್ಳಿ, ಬೆಳ್ಳುಳ್ಳಿ, ಶುಂಠಿ, ಹಸಿಮೆಣಸಿನ ಪೇಸ್ಟ್, ಸ್ಪ್ರಿಂಗ್ ಆನಿಯನ್ ಸ್ಪ್ರಿಂಗ್ ಹಾಕಿ ಹುರಿಯಿರಿ. ಬಳಿಕ ಕ್ಯಾರೇಟ್, ಬೀನ್ಸ್, ಹಾಕಿ ಹುರಿಯಿರಿ.
ಬಳಿಕ ಅನ್ನ, ಪೆಪ್ಪರ್ ಪುಡಿ, ಉಪ್ಪು, ವಿನೇಗರ್, ರೆಡಿ ಮಾಡಿದ ಚಿಲ್ಲಿ ಸಾಸ್ನಲ್ಲಿ 2 ಸ್ಪೂನ್ ಚಿಲ್ಲಿ ಸಾಸ್, ಟೋಮೆಟೋ ಸಾಸ್, ಸ್ಪ್ರಿಂಗ್ ಆನಿಯನ್ ಹಾಕಿ ಮಿಕ್ಸ್ ಮಾಡಿದ್ರೆ, ಶೆಜ್ವಾನ್ ವೆಜ್ ಫ್ರೈಡ್ ರೈಸ್ ರೆಡಿ.