Political News: ಈ ಬಾರಿ ಮೈಸೂರು ದಸರಾವನ್ನು ಲೇಖಕಿ ಬಾನು ಮುಷ್ತಾಕ್ ಅವರು ಉದ್ಘಾಟಿಸಲಿದ್ದಾರೆ. ಸಿಎಂ ಸಿದ್ದರಾಮಯ್ಯ ಈ ಬಗ್ಗೆ ಘೋಷಣೆ ಮಾಡಿದ್ದರು. ಆದರೆ ಬಿಜೆಪಿ ಕೆಲ ನಾಯಕರು ಈ ಬಗ್ಗೆ ಆಕ್ಷೇಪ ವ್ಯಕ್ತಪಡಿಸಿದ್ದಾರೆ. ಯತ್ನಾಳ್, ಪ್ರತಾಪ್ ಸಿಂಹ ಸೇರಿ ಕೆಲವು ನಾಯಕರು ಈ ಬಗ್ಗೆ ಆಕ್ಷೇಪ ವ್ಯಕ್ತಪಡಿಸಿದ್ದಾರೆ.
ಈ ಬಗ್ಗೆ ಮೈಸೂರಿನಲ್ಲಿ ಮಾತನಾಡಿರುವ ಮಾಜಿ ಸಂಸದ ಪ್ರತಾಪ್ ಸಿಂಹ, ಬಾನು ಅವರ ಲೇಖನದ ಬಗ್ಗೆ ನನಗೆ ಗೌರವವಿದೆ. ಆದರೆ ದಸರಾ ಹಬ್ಬ ಜಾತ್ಯಾತೀತ ಹಬ್ಬವಲ್ಲ. ಅದು ಹಿಂದೂ ಹಬ್ಬ. ಅದು ಧಾರ್ಮಿಕ ಆಚರಣೆ. ವಿಜಯನಗರ ಸಾಮ್ರಾಾಜ್ಯದ ನಂತರ ಯದುವಂಶದವರು ಈ ಹಬ್ಬವನ್ನು ಆಚರಿಸುತ್ತ ಬಂದಿದ್ದಾರೆಂದು ಪ್ರತಾಪ್ ಸಿಂಹ ಹೇಳಿದ್ದಾರೆ.
ಬಳಿಕ ಮಾತನಾಡಿರುವ ಪ್ರತಾಪ್ ಸಿಂಹ, ಬಾನು ಮುಷ್ತಾಕ್ ಅವರಿಗೆ ಚಾಮುಂಡಿ ದೇವಿ ಬಗ್ಗೆ ಭಕ್ತಿ ಇದೆಯಾ..?ಭಕ್ತೆಯಾಗಿ ಎಲ್ಲಾದರೂ ತೋರಿಸಿದ್ದಾರಾ..? ದಸರಾ ಹಬ್ಬವನ್ನು, ಚಾಮುಂಡಿ ದೇವಿಯ ಪೂಜೆಯನ್ನು ಭಕ್ತಿ ಭಾವದಿಂದ ಮಾಡಬೇಕು. ಅದು ಸರ್ಕಾರಿ ಕಾರ್ಯಕ್ರಮವಲ್ಲ. ಈ ಕಾರ್ಯಕ್ರಮ ಉದ್ಘಟಿಸಲು ಬಾನು ಅವರು ಸೂಕ್ತ ಆಯ್ಕೆಯಾ ಎಂದು ಪ್ರತಾಪ್ ಸಿಂಹ ಪ್ರಶ್ನಿಸಿದ್ದಾರೆ.
ಬಾನು ಮುಷ್ತಾಕ್ ಅವರನ್ನು ಸಾಹಿತ್ಯ ಸಮ್ಮೇಳನದ ಅಧ್ಯಕ್ಷರನ್ನಾಗಿ ಮಾಡಿ, ಗೌರವಿಸಿ. ಆದರೆ ಧಾರ್ಮಿಕ ಕಾರ್ಯಕ್ರಮಕ್ಕೂ ಬಾನು ಮುಷ್ತಾಕ್ ಅವರಿಗೂ ಏನು ಸಂಬಂಧ..? ಎಂದು ಪ್ರತಾಪ್ ಸಿಂಹ ಪ್ರಶ್ನಿಸಿದ್ದಾರೆ.