ತಾಯಿ ಭುವನೇಶ್ವರಿ, ಚಾಮುಂಡೇಶ್ವರಿಯ ಬಗ್ಗೆ ಬಾನು ಮುಷ್ತಾಕ್ ಗೌರವ ವ್ಯಕ್ತಪಡಿಸಲಿ: ಸಂಸದ ಯದುವೀರ್

Political News:  ಈ ಬಾರಿ ಮೈಸೂರು ದಸರಾವನ್ನು ಬುಕರ್ ಪ್ರಶಸ್ತಿ ವಿಜೇತೆ ಬಾನು ಮುಷ್ತಾಕ್ ಅವರು ಉದ್ಘಾಟಿಸಲಿದ್ದಾರೆಂದು ಸಿಎಂ ಸಿದ್ದರಾಮಯ್ಯ ಘೋಷಿಸಿದ್ದರು. ಆದರೆ ಇದರ ವಿರುದ್ಧ ಹಲವರು ಆಕ್ಷೇಪ ವ್ಯಕ್ತಪಡಿಸಿದ್ದಾರೆ. ಇದೀಗ ಮೈಸೂರು ಸಂಸದ ಯದುವೀರ್ ಕೂಡ ಈ ಬಗ್ಗೆ ಬರೆದಿದ್ದು, ತಾಯಿ ಭುವನೇಶ್ವರಿ, ಚಾಮುಂಡೇಶ್ವರಿಯ ಬಗ್ಗೆ ಬಾನು ಮುಷ್ತಾಕ್ ಗೌರವ ವ್ಯಕ್ತಪಡಿಸುವುದು ಅತ್ಯಗತ್ಯ ಎಂದು ಸಂಸದ ಯದುವೀರ್ ಅಭಿಪ್ರಾಯ ಪಟ್ಿದ್ದಾರೆ.ಟ

ಶ್ರೀಮತಿ ಭಾನು ಮುಷ್ತಾಕ್ ಅವರು ಕನ್ನಡ ಸಾಹಿತ್ಯ ಲೋಕದ ವಿಶಿಷ್ಟ ಬರಹಗಾರ್ತಿ ಮತ್ತು ಅಂತರಾಷ್ಟ್ರೀಯ ಬೂಕರ್ ಪ್ರಶಸ್ತಿಯನ್ನು ಗೆದ್ದ ಮೊದಲ ಕನ್ನಡ ಲೇಖಕಿಯಾಗಿ, ಕನ್ನಡ ಸಾಹಿತ್ಯ ಲೋಕಕ್ಕೆ ಅಪಾರ ಹೆಮ್ಮೆಯನ್ನು ತಂದಿದ್ದಾರೆ ನಿಜ ಆದರೆ ಈ ಹಿಂದೆ ಕನ್ನಡ ತಾಯಿ ಭುವನೇಶ್ವರಿಯ ಬಗ್ಗೆ ಅವರು ಕೆಲವು ಹೇಳಿಕೆಗಳನ್ನು ನೀಡಿರುವುದು ನಮ್ಮ ಗಮನಕ್ಕೆ ಬಂದಿದೆ ಎಂದು ಯದುವೀರ್ ಟ್ವೀಟಿಸಿದ್ದಾರೆ .

ದಸರಾ ಕೇವಲ ಸಾಂಸ್ಕೃತಿಕ ಕಾರ್ಯಕ್ರಮವಲ್ಲ, ಬದಲಾಗಿ ಶಾಸ್ತ್ರ ಮತ್ತು ಪುರಾಣಗಳಲ್ಲಿ ಉಲ್ಲೇಖಗೊಂಡಿರುವ ಮತ್ತು ವಿಜಯನಗರ ಸಾಮ್ರಾಜ್ಯ ಮತ್ತು ಮೈಸೂರು ಸಂಸ್ಥಾನದ ಕಾಲದಿಂದಲೂ ವೈಭವದಿಂದ ಆಚರಿಸಲ್ಪಡುವ ಹಿಂದೂ ಧಾರ್ಮಿಕ ಉತ್ಸವವಾಗಿದೆ.

ಈ ಪವಿತ್ರ ಪರಂಪರೆಯನ್ನು ಗಮನಿಸಿದರೆ, ಈ ವರ್ಷದ ದಸರಾ ಆಚರಣೆಯ ಮುಖ್ಯ ಅತಿಥಿಯಾಗಿ ಉದ್ಘಾಟಿಸುವ ಮೊದಲು ಅವರು ತಾಯಿ ಭುವನೇಶ್ವರಿ ಮತ್ತು ತಾಯಿ ಚಾಮುಂಡೇಶ್ವರಿಯ ಬಗ್ಗೆ ಅವರ ಗೌರವವನ್ನು ಶ್ರೀಮತಿ ಭಾನು ಮುಷ್ತಾಕ್ ಸ್ಪಷ್ಟಪಡಿಸುವುದು ಈ ಸಮಯದಲ್ಲಿ ಅತ್ಯಂತ ಅಗತ್ಯ ಎಂದು ಯದುವೀರ್ ಹೇಳಿದ್ದಾರೆ.

About The Author