Hubli News: ಹುಬ್ಬಳ್ಳಿ: ಹುಬ್ಬಳ್ಳಿಯಲ್ಲಿಂದು ಮಾಧ್ಯಮದ ಜತೆ ಮತನಾಡಿರುವ ಶಾಸಕ ಮಹೇಶ್ ಟೆಂಗಿನಕಾಯಿ, ಕಾಂಗ್ರೆಸ್ ನಿಂದ ತುಷ್ಟಿಕರಣ ರಾಜಕಾರಣ ನಡೀತಾ ಇದೆ ಎಂದು ಆರೋಪಿಸಿದ್ದಾರೆ.
ದಸರಾ ಉತ್ಸವಕ್ಕೆ ಅಲ್ಪಸಂಖ್ಯಾತರಿಂದ ಉದ್ಘಾಟನೆ ಮಾಡಿಸ್ತಾ ಇದ್ದಾರೆ. ಇದನ್ನ ಯಾರು ಒಪ್ಪಲಾರದ ಸ್ಥಿತಿ ನಿರ್ಮಾಣವಾಗಿದೆ. ಇನ್ನು ಅನೇಕರಿದ್ದಾರೆ, ನಾವೇನು ಅಲ್ಪಸಂಖ್ಯಾತರ ವಿರೋಧಿಗಳಲ್ಲ. ಅಬ್ದುಲ್ ಕಲಾಂ, ಶಿಶುನಾಳ ಶರೀಪ್ ರನ್ನ ನೆನಪಿಸಿಕೊಳ್ತೀವೆ. ಶಿಶುನಾಳ ಶರೀಪ್ ರನ್ನ ಪೂಜಿಸುವ ಕೆಲಸ ಹಿಂದೂ ಸಮಾಜ ಮಾಡುತ್ತೆ. ಯಾರನ್ನ ಕರಿಬೇಕು ಅನ್ನೋ ಸ್ಪಷ್ಟನೆ ಸರ್ಕಾರ ಕೊಡಬೇಕಾಗುತ್ತೆ. ಅನೇಕ ಗಣ್ಯರು ಇದ್ರು ಅವರನ್ನ ಗಣನೆಗೆ ತೆಗೆದುಕೊಳ್ಳಬೇಕಿತ್ತು. ಸರ್ಕಾರದ ತೀರ್ಮಾನವನ್ನ ನಾವು ಒಪುವುದಿಲ್ಲ ಎಂದು ಮಹೇಶ್ ಟೆಂಗಿನಕಾಯಿ ಹೇಳಿದ್ದಾರೆ.
ಈಗ ಕರ್ನಾಟಕದಲ್ಲಿ ನಡೆದಿರುವ ಗೊಂದಲ ಗೊತ್ತಿದ್ದೂ ಹೀಗೆ ಮಾಡಿದ್ದಾರೆ. ಒಡೆಯರ ರಾಜವಂಶಸ್ಥರು ಅನೇಕ ಕಾರಣಕ್ಕೆ ಸ್ವಾಗತ ಮಾಡಿರಬಹುದು ಎಂದು ಮಹೇಶ್ ಟೆಂಗಿನಕಾಯಿ ಹೇಳಿದ್ದಾರೆ.
1ನೆ ತಾರೀಕಿಗೆ ಧರ್ಮಸ್ಥಳ ಚಲೋಗೆ ಅಧ್ಯಕ್ಷರು ಕರೆ ಕೊಟ್ಟಿದ್ದಾರೆ. 3 ದಿನಗಳಲ್ಲಿ ಜಿಲ್ಲಾ ಕೇಂದ್ರದಲ್ಲಿ ಹೋರಾಟ ಮಾಡ್ತಾ ಇದ್ದೇವೆ. ಲಕ್ಷಾಂತರ ಜನ ಅವತ್ತು ಧರ್ಮಸ್ಥಳಕ್ಕೆ ಹೋಗಿ ವೀರೇಂದ್ರ ಹೆಗಡೆ ಜೊತೆ ಇರ್ತೇವೆ. ಷಡ್ಯಂತ್ರ ಮಾಡಿದ ಸಮಾಜ ಘಾತುಕ, ದುಷ್ಟ ಶಕ್ತಿ ತಕ್ಕ ಶಾಸ್ತಿ ಆಗುತ್ತೆ ಎಂದು ಶಾಸಕರು ಹೇಳಿದ್ದಾರೆ.
ಆರ್ ಎಸ್ ಎಸ್ ಬ್ಯಾನ್ ಖರ್ಗೆ ಹೇಳಿಕೆಗೆ ಕಿಡಿಕಾರಿರುವ ಶಾಸಕರು, ಕುಚೋದ್ಯ ಹೇಳಿಕೆ ಕೊಡದನ್ನ ನಿಲ್ಲಿಸಬೇಕು. ಆರ್ ಎಸ್ ಎಸ್ ಅಂದ್ರೆ ಏನು ಅಂತ ಇಂದಿರಾ ಗಾಂಧೀ ಇಂದ ಕಲಿಬೇಕು. ಇದು ದೇಶ ಭಕ್ತಿ ಸಂಘಟನೆ. ಹಿಂದೆ ಸಂಘವನ್ನ ಬ್ಯಾನ್ ಮಾಡೋಕೆ ಹೋದವರು ಕೈ ಸುತ್ತಿಕೊಂಡಿದ್ದಾರೆ ಎಂದರು.