Thursday, August 28, 2025

Latest Posts

K.N. ರಾಜಣ್ಣ ಪರ ನಿಂತ B.K. ಹರಿಪ್ರಸಾದ್‌!

- Advertisement -

ಆರ್‌ಎಸ್‌ಎಸ್‌ ಗೀತೆ ಹಾಡಿದ್ದಕ್ಕೆ ಡಿಸಿಎಂ ಡಿಕೆ ಶಿವಕುಮಾರ್ ಕ್ಷಮೆಯಾಚಿಸಿದ್ದಾರೆ. ಇದಾದ ಬಳಿಕ ಮಾಜಿ ಸಚಿವ ಕೆ.ಎನ್ ರಾಜಣ್ಣ ಅವರ ವಿಚಾರ ಮುನ್ನೆಲೆಗೆ ಬಂದಿದೆ. ಡಿಕೆಶಿಗೆ ಇರುವ ಅವಕಾಶ, ರಾಜಣ್ಣ ವಿಚಾರದಲ್ಲಿ ಏಕಿಲ್ಲ? ಅನ್ನೋ ಪ್ರಶ್ನೆಗಳು ಎದ್ದಿವೆ. ಇದಕ್ಕೆ ಹಿರಿಯ ಕಾಂಗ್ರೆಸ್ಸಿಗ ಬಿ.ಕೆ. ಹರಿಪ್ರಸಾದ್‌ ಪ್ರತಿಕ್ರಿಯಿಸಿದ್ದು, ರಾಜಣ್ಣ ಅವರು ರಾಹುಲ್‌ ಗಾಂಧಿ ವಿರುದ್ಧ ಎಲ್ಲಿಯೂ ಮಾತಾಡಿಲ್ಲ. ಕೆಲವು ವಿಚಾರಗಳನ್ನು ಹೇಳಿದ್ದಾರೆ. ಅದು ತದ್ವಿರುದ್ಧವಾಗಿ ಕಂಡಿರಬಹುದು ಎಂದ್ರು.

ನಾನು ಯೂಥ್‌ ಕಾಂಗ್ರೆಸ್‌ನಲ್ಲಿ ರಾಷ್ಟ್ರ ಮಟ್ಟದಲ್ಲಿದ್ದಾಗ, ಶಿವಕುಮಾರ್‌ ಅವರು ಜಿಲ್ಲಾ ಯೂಥ್‌ ಕಾಂಗ್ರೆಸ್‌ ಪ್ರೆಸಿಡೆಂಟ್‌. ರಾಜಣ್ಣ ರಾಜ್ಯದಲ್ಲಿ ಉಪಾಧ್ಯಕ್ಷರಾಗಿದ್ರು. ಎಲ್ಲರೂ ನಮ್ಮ ಜೊತೆಯಲ್ಲಿ ಇದ್ದವರು. ಯಾರ್ಯಾರ ನಿಲುವುಗಳು ಏನೇನು ಅನ್ನೋ ಬಗ್ಗೆ ನನಗೆ ಗೊತ್ತು.

ಆರ್‌ಎಸ್‌ಎಸ್‌ನವರು ರಾಹುಲ್‌ ಗಾಂಧಿ ಮೇಲೆ ಇಡೀ ದೇಶದಲ್ಲಿ 54 ಕೇಸ್‌ಗಳನ್ನು ಬುಕ್‌ ಮಾಡಿದ್ದಾರೆ. ಅವರು ಹೋರಾಟ ಮಾಡುವಾಗ ಅವರ ಜೊತೆ ಕೈಜೋಡಿಸಬೇಕಾಗುತ್ತದೆ. ಕಾಂಗ್ರೆಸ್‌ನಲ್ಲಿ ಇರುವಂತವರು, ರಾಹುಲ್‌ ಗಾಂಧಿ, ಸೋನಿಯಾ ಗಾಂಧಿ ವಿಚಾರಗಳು ಬಂದಾಗ, ಯಾರೂ ಮಾತಾಡಲ್ಲ.

ರಾಜಣ್ಣ ಕೂಡ ಕಾಂಗ್ರೆಸ್‌. ಶಿವಕುಮಾರ್‌ ಕೂಡ ಕಾಂಗ್ರೆಸ್. ಕೆಲವೊಂದು ಸಂದರ್ಭದಲ್ಲಿ ಗೊತ್ತಿಲ್ಲದೇ ಹೀಗೆ ಆಗುತ್ತದೆ. ಎಲ್ಲವೂ ಸರಿ ಹೋಗುತ್ತದೆ. ಅಷ್ಟು ಆಳವಾಗಿ ಕಾಂಗ್ರೆಸ್‌ ಪಕ್ಷದ ಬಗ್ಗೆ ತಿಳಿದುಕೊಳ್ಳುವುದು ಸುಲಭವಲ್ಲ. 1960ರಿಂದ ಈಚೆಗೆ ಬರೀ ಎಂಎಲ್‌ಎ, ಎಂಪಿ ಹೇಗೆ ಆಗಬೇಕು. ಕಾರ್ಯಕ್ರಮ ಹೇಗೆ ಆಗಬೇಕೆನುವುದರಲ್ಲೇ ಇದ್ದಾರೆ. ಆದರೆ ಸೈದ್ಧಾಂತಿಕವಾಗಿ ತಿಳಿದುಕೊಂಡಿರುವವರು ಬಹಳ ಕಡಿಮೆ ಜನ.

ನಮ್ಮ ಸಿದ್ಧಾಂತ ನಂಬಿಕೊಂಡಿರುವವರು, ಲಕ್ಷಾಂತರ ಜನರು ಇದ್ದಾರೆ. ನಮಗೆ ಜವಾಬ್ದಾರಿ ಕೊಟ್ಟಿದ್ದಾರೆ ಅಷ್ಟೆ. ಅವರ ಮನಸ್ಸಿಗೆ ಧಕ್ಕೆ ಬರಬಾರದು. ಸಾಫ್ಟ್‌ ಹಿಂದುತ್ವ, ಹಾರ್ಡ್‌ ಹಿಂದುತ್ವದ ಬಗ್ಗೆ ಗೊತ್ತಿಲ್ಲ.
ಕಾಂಗ್ರೆಸ್‌ ಪಕ್ಷದಲ್ಲಿ ಇರುವವರು, ಮಹಾತ್ಮಾ ಗಾಂಧಿ, ನೆಹರು, ವಿವೇಕಾನಂದ, ನಾರಾಯಣ ಗುರು, ಕನಕದಾಸರ ಹಿಂದು ಧರ್ಮವನ್ನು ಪಾಲನೆ ಮಾಡುವಂತವರು.

ಬಿಜೆಪಿ ಆರ್‌ಎಸ್‌ಎಸ್‌ನವರು ಪಾಲನೆ ಮಾಡುವಂತಹ ಹಿಂದುತ್ವ, ಸಾರ್ವರ್ಕರ್‌, ಗೋಲ್ವಾಲ್ಕರ್, ಹೆಡ್ಗೆವಾರ್, ಗೋಡ್ಸೆ ಹಿಂದುತ್ವವಾದಿಗಳು. ಇವರು ಹಿಂದು ಧರ್ಮದವರಲ್ಲ. ಹಿಂದು ಧರ್ಮವನ್ನ ರಾಜಕೀಯವಾಗಿ ಉಪಯೋಗಿಸಿಕೊಳ್ಳುವವರು.

ಕಾಂಗ್ರೆಸ್‌ನವರು ಕಾಂಗೆಸ್ಸಿಗೆ ತದ್ವಿರುದ್ಧವಾಗಿರುವಂತಹ ಸಂಘಟನೆಗಳಿಗೆ, ಯಾರೂ ಸಹ ಗೌರವ ಸಿಗುವ ಕೆಲಸವನ್ನು ಮಾಡಬಾರದು. ಹೀಗಂತ ಡಿಕೆಶಿ ಸೇರಿದಂತೆ ಎಲ್ಲಾ ಕಾಂಗ್ರೆಸ್ಸಿಗರಿಗೆ ಪರೋಕ್ಷವಾಗಿ, ಬಿ.ಕೆ. ಹರಿಪ್ರಸಾದ್‌ ಎಚ್ಚರಿಕೆಯ ಸಂದೇಶ ರವಾನಿಸಿದ್ದಾರೆ.

- Advertisement -

Latest Posts

Don't Miss